ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಮಿಡ್ ವೀಕ್ ಎಲಿಮಿನೇಷನ್: ಡಾಗ್ ಸತೀಶ್ ಹೊರಹೋಗಲು ಏನು ಕಾರಣ?

ಈ ವಾರ ದೊಡ್ಮನೆಯಿಂದ ಹೊರಹೋಗಲು ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ಹಾಗೂ ರಾಶಿಕಾ ಬಿಟ್ಟು ಉಳಿದ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ಪೈಕಿ ವೀಕೆಂಡ್ನಲ್ಲಿ ಯಾರೆಲ್ಲ ಹೋಗುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಆದರೆ, ನಿನ್ನೆಯ ಎಪಿಸೋಡ್ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಊಹಿಸಲಾಗದ ಟ್ವಿಸ್ಟ್ ಕೊಟ್ಟರು.

ಡಾಗ್ ಸತೀಶ್ ಹೊರಹೋಗಲು ಏನು ಕಾರಣ?

Dog Sathish Eliminated -

Profile Vinay Bhat Oct 17, 2025 7:26 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಆರಂಭವಾದ ಮೊದಲ ಎರಡು ವಾರಗಳಲ್ಲೇ ಸಾಕಷ್ಟು ಟ್ವಿಸ್ಟ್​ಗಳಿದ್ದವು. ಇದೀಗ ಮೂರನೇ ನಡೆಯುತ್ತಿದೆ. ನಾಳೆ ಹಾಗೂ ಭಾನುವಾರ ಈ ಸೀಸನ್​ನ ಮೊದಲ ಫಿನಾಲೆ ನಡೆಯಲಿದೆ. ಇದರಲ್ಲಿ ಅರ್ಧಕರ್ಧ ಮನೆ ಖಾಲಿ ಆಗಲಿದೆ. ಆದರೆ, ಇದಕ್ಕು ಮುನ್ನವೇ ಸ್ಪರ್ಧಿಗಳಿಗೆ ಬಿಗ್ ಬಾಸ್ ಮತ್ತೊಂದು ಶಾಕ್ ನೀಡಿದ್ದಾರೆ. ಮಧ್ಯರಾತ್ರಿ ಸ್ಪರ್ಧಿಗಳನ್ನು ಎಬ್ಬಿಸಿ ಬಿಗ್ ಬಾಸ್ ಮಿಡ್ ವೀಕೆ ಎಲಿಮಿನೇಷನ್ ಮೂಲಕ ಆಘಾತ ನೀಡಿದರು. ಇದರಲ್ಲಿ ಒಬ್ಬರು ದೊಡ್ಮನೆಯಿಂದ ಆಚೆ ಬಂದಿದ್ದಾರೆ.

ಈ ವಾರ ದೊಡ್ಮನೆಯಿಂದ ಹೊರಹೋಗಲು ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಳು ಹಾಗೂ ರಾಶಿಕಾ ಬಿಟ್ಟು ಉಳಿದ ಎಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ಪೈಕಿ ವೀಕೆಂಡ್​ನಲ್ಲಿ ಯಾರೆಲ್ಲ ಹೋಗುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಆದರೆ, ನಿನ್ನೆಯ ಎಪಿಸೋಡ್​ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಊಹಿಸಲಾಗದ ಟ್ವಿಸ್ಟ್ ಕೊಟ್ಟರು. ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬಿಗ್ ಬಾಸ್ ಕಡೆಯಿಂದ ರೆಡ್ ಲೈಟ್ ಆನ್ ಮಾಡಿ ಸೈರನ್ ಸೌಂಡ್ ಆಗಿದೆ. ಎಲ್ಲರನ್ನೂ ಹೊರಗಿನ ಗಾರ್ಡರ್ ಏರಿಯಾದಲ್ಲಿ ಸಾಲಾಗಿ ನಿಲ್ಲಿಸಲಾಗಿದೆ. ‘ಗ್ರ್ಯಾಂಡ್ ಫಿನಾಲೆಗು ಮುನ್ನವೇ ಒಬ್ಬರ ಆಟ ಇಲ್ಲಿಗೆ ಮುಗಿದು ಬಿಗ್ ಬಾಸ್ ಮನೆಯಿಂದ ಹೊರಹೋಗಲಿದ್ದಾರೆ. ಯಾರನ್ನ ಈ ಮನೆಯಿಂದ ಹೊರಹಾಕಲು ಇಚ್ಚಿಸುತ್ತೀರಿ ಎಂದು ಘೋಷಿಸಬೇಕು’ ಎಂದು ಬಿಗ್ ಬಾಸ್ ಹೇಳಿದ್ದಾರೆ.

ಕಾವ್ಯ ಶೈವ, ಅಭಿಷೇಕ್, ಮಂಜು ಭಾಷಿಣಿ, ಅಶ್ವಿನಿ ಎಸ್​​ಎನ್, ಚಂದ್ರಪ್ರಭ, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಧ್ರವಂತ್, ಸ್ಪಂದನಾ, ಧನುಶ್, ಮಲ್ಲಮ ಅವರು ಸತೀಶ್ ಹೆಸರನ್ನೇ ಸೂಚಿಸಿದ್ದರಿಂದ ಅವರು ಎಲಿಮಿನೇಟ್ ಆದರು. ಸತೀಶ್ ಅವರಲ್ಲಿ ಆಟದ ಹುಮ್ಮಸ್ಸು ಇರಲಿಲ್ಲ ಎಂಬ ಕಾರಣವನ್ನು ನೀಡಿ ಎಲ್ಲ ಸ್ಪರ್ಧಿಗಳು ಸತೀಶ್ ಹೆಸರನ್ನು ಸೂಚಿಸಿದರು.

BBK 12: ವೈಲ್ಡ್-ಕಾರ್ಡ್ ಮೂಲಕ ಎಂಟ್ರಿ ಕೊಡಲು ಮೊದಲ ಬ್ಯಾಚ್ ರೆಡಿ: ಇವರೇ ನೋಡಿ

ಡಾಗ್ ಸತೀಶ್ ಎಲಿಮಿನೇಟ್ ಆಗಲು ಮತ್ತೊಂದು ಮುಖ್ಯ ಕಾರಣ ಅವರಿಗೆ ದೊಡ್ಡ ಅಭಿಮಾನಿ ಬಳಗವಿಲ್ಲ. ಅವರು ಮನೋರಂಜನೆ ಕ್ಷೇತ್ರದಿಂದ ಬಂದವರಲ್ಲ. ಅಷ್ಟೇ ಅಲ್ಲದೆ ಸತೀಶ್ ಅವರು ಬಿಗ್ ಬಾಸ್ ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್‌ ಅನ್ನು ಅಚ್ಚುಕಟ್ಟಾಗಿ ಮಾಡಿದ್ದು ಬಿಟ್ಟರೆ, ಉಳಿದ ಟಾಸ್ಕ್‌ಗಳಲ್ಲಿ ಹಿಂದೆ ಬಿದ್ದಿದ್ದರು. ಎಪಿಸೋಡ್‌ಗಳಲ್ಲೂ ಡಾಗ್ ಸತೀಶ್‌ ಹೆಚ್ಚು ಫೋಕಸ್ ಆಗುತ್ತಿರಲಿಲ್ಲ. ಹೀಗಾಗಿ ಇವರು ಎಲಿಮಿನೇಟ್ ಆಗಿದ್ದಾರೆ.

ಮನೆಯಿಂದ ಹೊರ ಹೋಗುವ ಮುನ್ನ ಮಾತನಾಡಿದ ಸತೀಶ್‌, ‘‘ನನ್ನ ಪ್ರಕಾರ, ಮಂಜುಭಾಷಿಣಿ ಅವರು ಹೊರಗೆ ಹೋಗಬೇಕು. ಅವರಿಗೆ ಅನಾರೋಗ್ಯ ಇದೆ. ಆಟ ಆಡಲು ಕೂಡ ಸಾಧ್ಯವಿಲ್ಲ. ಈ ಮನೆಯಲ್ಲಿ ಎಲ್ಲರೂ ಗುಂಪುಗಾರಿಕೆ ಮಾಡಿಕೊಂಡು ನನ್ನನ್ನು ಹಿಯಾಳಿಸಿದರು. ಮಂಜುಭಾಷಿಣಿ ನನ್ನ ವಿರುದ್ಧ ಎಲ್ಲರನ್ನು ಸೇರಿಸಿಕೊಂಡು ಮೀಟಿಂಗ್ ಮಾಡಿದರು. ಇದೆಲ್ಲಾ ನನಗೆ ಗೊತ್ತಿತ್ತು’’ ಎಂದು ಡಾಗ್ ಸತೀಶ್ ಅವರು ಹೇಳಿದರು.