ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಪ್ರತಿಕಾಗೋಷ್ಠಿಯಲ್ಲಿ ಅಶ್ವಿನಿ-ಜಾನ್ವಿಯ ಬೆವರಿಳಿಸಿದ ಗಿಲ್ಲಿ

ಗಿಲ್ಲಿ ನಟ ಕೂಡ ತನ್ನದೇ ಶೈಲಿಯಲ್ಲಿ ಟಾಂಗ್ ಕೊಡುತ್ತ ಬಂದರು. ಮೊದಲಿಗೆ ಅಶ್ವಿನಿ ಅವರು ಗಿಲ್ಲಿ ನಟನ ಮೇಲೆ ಹರಿಹಾಯಲು ಪ್ರಯತ್ನಿಸಿದರು. ಇದಕ್ಕೆ ಅವರು ಖಡಕ್ ತಿರುಗೇಟು ಕೊಟ್ಟಿದ್ದಾರೆ. ಈ ಬಿಗ್ ಬಾಸ್ ಮನೆಯಲ್ಲಿ ಏನು ಏನು ದಬಾಕಿದೀರಾ ಹೇಳಿ ಎಂದು ಅಶ್ವಿನಿ ಕೇಳಿದರು. ಇದಕ್ಕೆ ಉತ್ತರಿಸಿದ ಗಿಲ್ಲಿ, ಸ್ನಾನ ಮಾಡಿದ ಬಕೇಟ್ನ ತಿರುಗಿ ಹಾಕಿದ್ದೇನೆ ಎಂದರು.

ಪ್ರತಿಕಾಗೋಷ್ಠಿಯಲ್ಲಿ ಅಶ್ವಿನಿ-ಜಾನ್ವಿಯ ಬೆವರಿಳಿಸಿದ ಗಿಲ್ಲಿ

ಅಶ್ವಿನಿ-ಜಾನ್ವಿ-ಗಿಲ್ಲಿ -

Profile Vinay Bhat Oct 18, 2025 12:41 PM

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಇಂದು ಮತ್ತು ನಾಳೆ ಮೊದಲ ಫಿನಾಲೆ ನಡೆಯಲಿದೆ. ಇದಕ್ಕೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು. ಫಿನಾಲೆ ಕಂಟೆಸ್ಟೆಂಟ್​ಗಳಾದ ಅಂದರೆ ಈ ವಾರದ ಎಲಿಮಿನೇಷನ್​ನಿಂದ ಪಾರಾದ ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ರಾಶಿಕಾ ಹಾಗೂ ಮಾಲು ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಬೇಕಿತ್ತು. ಇದಕ್ಕೆ ಅವರು ಸರಿಯಾಗಿ ಉತ್ತರಿಸಬೇಕಿತ್ತು. ಹೀಗೆ ಇದರಲ್ಲಿ ಚೆನ್ನಾಗಿ ಉತ್ತರ ಕೊಟ್ಟ ಸ್ಪರ್ಧಿಗಳ ಪೈಕಿ ಒಬ್ಬರನ್ನ ನಾಮಿನೇಷನ್​ನಿಂದ ಪಾರು ಮಾಡಬೇಕಿತ್ತು.

ಈ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನವರು ಉತ್ತಮವಾಗಿ ಉತ್ತರ ಕೊಟ್ಟರು. ಆದರೆ, ಇದರಲ್ಲಿ ಅಂತಿಮವಾಗಿ ಇಮ್ಯುನಿಟಿ ಸಿಕ್ಕಿದ್ದು ಎಲ್ಲರೂ ಅಂದುಕೊಂಡಂತೆ ಜಾನ್ವಿಗೆ. ಆದರೆ, ಗಿಲ್ಲಿ ನಟ ಕೂಡ ತನ್ನದೇ ಶೈಲಿಯಲ್ಲಿ ಟಾಂಗ್ ಕೊಡುತ್ತ ಬಂದರು. ಮೊದಲಿಗೆ ಅಶ್ವಿನಿ ಅವರು ಗಿಲ್ಲಿ ನಟನ ಮೇಲೆ ಹರಿಹಾಯಲು ಪ್ರಯತ್ನಿಸಿದರು. ಇದಕ್ಕೆ ಅವರು ಖಡಕ್ ತಿರುಗೇಟು ಕೊಟ್ಟಿದ್ದಾರೆ. ಈ ಬಿಗ್ ಬಾಸ್ ಮನೆಯಲ್ಲಿ ಏನು ಏನು ದಬಾಕಿದೀರಾ ಹೇಳಿ ಎಂದು ಅಶ್ವಿನಿ ಕೇಳಿದರು. ಇದಕ್ಕೆ ಉತ್ತರಿಸಿದ ಗಿಲ್ಲಿ, ಸ್ನಾನ ಮಾಡಿದ ಬಕೇಟ್​​ನ ತಿರುಗಿ ಹಾಕಿದ್ದೇನೆ ಎಂದರು. ಇದಕ್ಕೆ ಅಶ್ವಿನಿಗೆ ತಿರುಗೇಟು ಕೊಡಲು ಆಗಲಿಲ್ಲ.

ಬಳಿಕ, ಬನಿಯಾನ್ ಹಾಕ್ಕೊಂಡೇ ಓಡಾಡ್ತೀಯಲ್ಲ, ಹೊರಗೆ ಯಾವುದಾದರೂ ಕಂಪನಿ ಜೊತೆ ಕೊಲ್ಯಾಬರೇಟ್ ಆಗಿದ್ದೀಯಾ ಎಂದು ಅಶ್ವಿನಿ ಪ್ರಶ್ನೆ ಮಾಡಿದರು. ಕೆಲವರು ಸೀರೆ ಉಟ್ಟಿಕೊಂಡೇ ಓಡಾಡ್ತಾರೆ. ಹಾಗಂತ ಅವರು ಯಾವುದೋ ಸ್ಯಾರಿ ಕಂಪನಿ ಜೊತೆ ಕೊಲ್ಯಾಬರೇಟ್ ಆಗಿದ್ದಾರೆ ಎಂದು ಹೇಳಲು ಸಾಧ್ಯವೇ ಎಂದು ಸದಾ ಸೀರೆ ಉಡುತ್ತಿರುವ ಅಶ್ವಿನಿ ಅವರಿಗೇ ತಿರುಗೇಟು ಕೊಟ್ಟರು.

BBK 12: ಬಿಗ್ ಬಾಸ್ ಮನೆಯಲ್ಲಿರುವ ದೆವ್ವ ಬಿಡಿಸಲು ಬಂದ ಕಿಚ್ಚ: ಅಶ್ವಿನಿ-ಜಾನ್ವಿಗೆ ಕ್ಲಾಸ್ ಫಿಕ್ಸ್

ಅತ್ತ ಜಾನ್ವಿಗೂ ಟಕ್ಕರ್ ಕೊಟ್ಟ ಗಿಲ್ಲಿ, ‘ಗೆಜ್ಜೆ ಚೈನು ಕೈಯಾಗ, 12 ಗಂಟೆ ರಾತ್ರಿಯಾಗ..’ ಎಂದು ತಮ್ಮದೇ ಸಾಲುಗಳನ್ನು ಬರೆದು ಹಾಡಿದ್ದಾರೆ. ಈ ಹಾಡನ್ನು ಕೇಳಿ ಜಾನ್ವಿಗೆ ಮಾತೇ ಬರದಂತೆ ಆಯಿತು. ಇನ್ನು ನಾಮಿನೇಟ್ ಮಾಡುವ ವೇಳೆ ಕೂಡ ಗಿಲ್ಲಿ, ನಾನು ಜಾನ್ವಿ ಅವರನ್ನ ಎಲಿಮಿನೇಟ್ ಮಾಡೋಕೆ ಇಷ್ಟಪಡ್ತೀನಿ. ದೆವ್ವದ ತರಹ ಗೆಜ್ಜೆ ಸೌಂಡ್‌ ಮಾಡಿ ನೈಟ್‌ ಎಲ್ಲಾ ಡಿಸ್ಟರ್ಬ್ ಮಾಡುತ್ತಿದ್ದಾರೆ. ಯಾರು ಅಂತ ಕೇಳಿದ್ರೆ, ರಕ್ಷಿತಾ ಮೇಲೆ ಎತ್ತಿ ಹಾಕುತ್ತಿದ್ದಾರೆ. ರಕ್ಷಿತಾ ನಾಗವಲ್ಲಿ ತರಹ ಸೀರೆ ಉಟ್ಕೊಂಡು ಗೆಜ್ಜೆ ಸೌಂಡ್ ಮಾಡ್ತಿದ್ದಾಳೆ ಅಂತ ಹೇಳ್ತಿದ್ದಾರೆ. ರಾತ್ರಿ ಎಲ್ಲಾ ನಿದ್ದೆ ಇಲ್ಲ. ರಕ್ಷಿತಾ ಮೇಲೆ ಅವರು ಪರ್ಸನಲ್ ಟಾರ್ಗೆಟ್ ಮಾಡುತ್ತಿದ್ದಾರೆ. ಇವರೇನೇ ಮಾಡಿದರೂ, ಅದನ್ನ ರಕ್ಷಿತಾ ಮೇಲೆ ಹೇಳುತ್ತಿದ್ದಾರೆ. ಅದ್ಯಾಕೆ ಅಂತ ಗೊತ್ತಾಗುತ್ತಿಲ್ಲ ಅಂತ ಗಿಲ್ಲಿ ಹೇಳಿದರು.

ಒಟ್ಟಾರೆ ಅಶ್ವಿನಿ-ಜಾನ್ವಿ ಅಬ್ಬರ ಬಿಗ್ ಬಾಸ್ ಮನೆಯಲ್ಲಿ ಜೋರಾಗಿದೆ. ರಕ್ಷಿತಾಳನ್ನು ಕೂಡ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ, ತನ್ನನ್ನು ಗುರಿಯಾಗಿಸಲು ಬಂದವರಿಗೆ ಗಿಲ್ಲಿ ನಟ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಡುತ್ತಿದ್ದಾರೆ. ಇಂದು ವೀಕೆಂಡ್​ನಲ್ಲಿ ಅಶ್ವಿನಿ ಹಾಗೂ ಜಾನ್ವಿ ಬಗ್ಗೆ ಕಿಚ್ಚ ಸುದೀಪ್ ಮಾತನಾಡುವ ಸಾಧ್ಯತೆ ಇದೆ.