ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಯಲ್ಲಿರುವ ದೆವ್ವ ಬಿಡಿಸಲು ಬಂದ ಕಿಚ್ಚ: ಅಶ್ವಿನಿ-ಜಾನ್ವಿಗೆ ಕ್ಲಾಸ್ ಫಿಕ್ಸ್

ಇಂದು ಸುದೀಪ್ ಬರುವಿಕೆಗಾಗಿ ವೀಕ್ಷಕರು ಕಾದು ಕುಳಿತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ವಾರ ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಹಾಗೂ ಜಾನ್ವಿ ಮಾಡುತ್ತಿರುವ ಸುಳ್ಳು ಆರೋಪ. ‘‘ಬಿಗ್ ಬಾಸ್ ಮನೆಯಲ್ಲಿ ದೆವ್ವ ಯಾರು?, ದೆವ್ವ ಹಿಡಿಸಿದ್ದು ಯಾರು?, ಹಿಡಿದಿರುವ ದೆವ್ವನ ಬಿಡಿಸೋಕೆ ಬರ್ತಿದ್ದಾರೆ ಕಿಚ್ಚ ಸುದೀಪ’’ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.

ಬಿಗ್ ಬಾಸ್ ಮನೆಯಲ್ಲಿರುವ ದೆವ್ವ ಬಿಡಿಸಲು ಬಂದ ಕಿಚ್ಚ

Varada Kathe Kichchana Jothe week 3rd -

Profile Vinay Bhat Oct 18, 2025 9:17 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಮೂರು ವಾರ ಆಗುತ್ತ ಬರುತ್ತಿದೆ. ಇಂದು ಕಿಚ್ಚನ ಮೂರನೇ ವಾರದ ಪಂಚಾಯಿತಿ ಜೊತೆಗೆ ಈ ಸೀಸನ್​ನ ಮೊದಲ ಫಿನಾಲೆ ನಡೆಯಲಿದೆ. ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸಿದೆ. ಯಾಕೆಂದರೆ ಬಿಗ್ ಬಾಸ್​ ಮನೆ ಮೂರನೇ ವಾರ ಕೂಡ ರಣರಂಗವಾಗಿತ್ತು. ಜಡೆ ಜಗಳ ಮುಂದಿನ ಹಂತಕ್ಕೆ ತಲುಪಿತ್ತು. ಜೊತೆಗೆ ಇಂದು ಮತ್ತು ನಾಳೆ ಮಾಸ್ ಎಲಿಮಿನೇಷನ್ ನಡೆಯಲಿದೆ.. ಕೆಲ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ. ಹೀಗೆ ಅನೇಕ ಕಾರಣಗಳಿಗೆ ಇಂದು ಕಿಚ್ಚ ಸುದೀಪ್ ಎಪಿಸೋಡ್ ರೋಚಕತೆ ಸೃಷ್ಟಿಸಿದೆ.

ಇಂದು ಸುದೀಪ್ ಬರುವಿಕೆಗಾಗಿ ವೀಕ್ಷಕರು ಕಾದು ಕುಳಿತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ವಾರ ರಕ್ಷಿತಾ ಶೆಟ್ಟಿ ಮೇಲೆ ಅಶ್ವಿನಿ ಗೌಡ ಹಾಗೂ ಜಾನ್ವಿ ಮಾಡುತ್ತಿರುವ ಸುಳ್ಳು ಆರೋಪ. ಅಶ್ವಿನಿ ಹಾಗೂ ಜಾನ್ವಿ ಅವರು ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಶಬ್ದ ಮಾಡಿ, ಅದನ್ನು ರಕ್ಷಿತಾ ಮೇಲೆ ಹಾಕಿದ್ದರು. ರಕ್ಷಿತಾ ನಾಗವಲ್ಲಿ ರೀತಿ ಆಡ್ತಾರೆ ಎಂದೆಲ್ಲ ಸುಳ್ಳು ಆರೋಪ ಮಾಡಿದ್ದರು. ಇದೇ ವಿಚಾರ ಇಟ್ಟುಕೊಂಡ ವಾರ ಪೂರ್ತಿ ಎಳೆದಾಡಿದ್ದರು. ರಕ್ಷಿತಾಗೆ ಪದೇ ಪದೇ ಕಿರುಕುಳ ಕೊಡುವ ಪ್ರಯತ್ನ ಮಾಡಿದ್ದರು. ಇದೀಗ ಕಲರ್ಸ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಪ್ರೋಮೋ ಬಿಟ್ಟಿದೆ.

‘‘ಬಿಗ್ ಬಾಸ್ ಮನೆಯಲ್ಲಿ ದೆವ್ವ ಯಾರು?, ದೆವ್ವ ಹಿಡಿಸಿದ್ದು ಯಾರು?, ಹಿಡಿದಿರುವ ದೆವ್ವನ ಬಿಡಿಸೋಕೆ ಬರ್ತಿದ್ದಾರೆ ಕಿಚ್ಚ ಸುದೀಪ’’ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.

ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನ ಪ್ರೋಮೋ:



ಅಶ್ವಿನಿಗೆ ಸ್ಪೆಷನ್ ಕ್ಲಾಸ್:

ಕಳೆದ ವಾರ ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಬಗ್ಗೆ ಕಾಕ್ರೋಚ್ ಸುಧಿ ಮಾತನಾಡುತ್ತ ಈಯಮ್ಮ ಎಂದಿದ್ದರು. ಅದನ್ನು ಮಧ್ಯದಲ್ಲೇ ತಡೆದ ಅಶ್ವಿನಿ ಗೌಡ, ನನಗೆ ಹೆಸರಿದೆ, ಈಯಮ್ಮ ಎಂದೆಲ್ಲಾ ಕರೆಯೋದು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದರು. ಆ ಸಂದರ್ಭ ಕಿಚ್ಚ ಸುದೀಪ್ ಮುಂದೆ ಒಳ್ಳೆಯವಳಂತೆ ಪೋಸ್ ಕೊಟ್ಟ ಅಶ್ವಿನಿ ಗೌಡ, ಉಳಿದ ಸ್ಪರ್ಧಿಗಳನ್ನು ಅಡ್ಡ ಹೆಸರಲ್ಲಿ ಕರೆಯೋದು ಸರೀನಾ? ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ಪ್ರಶ್ನೆ ಮಾಡಬೇಕು ಎನ್ನುತ್ತಿದ್ದಾರೆ.

BBK 12: ರಕ್ಷಿತಾ ಶೆಟ್ಟಿಗೆ ಅಶ್ವಿನಿ-ಜಾನ್ವಿ ಕಿರುಕುಳ: ಕಿಚ್ಚನ ಕ್ಲಾಸ್​ಗೆ ಕಾದು ಕುಳಿದ ವೀಕ್ಷಕರು

ಈ ಹಿಂದೆ ಒಂಟಿಯಾಗಿದ್ದ ರಕ್ಷಿತಾ, ಜಂಟಿಗಳ ಜೊತೆ ಹೋದಾಗ, ಆ ಕಾರ್ಟೂನ್ ಅಲ್ಲಿ ಏನ್ ಮಾಡ್ತಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ ಕಾವ್ಯಾ ಶೈವಾಗೆ ಆಕೆ ಫ್ರೀ ಪ್ರಾಡಕ್ಟ್, ಗಿಲ್ಲಿಯಿಂದಾಗಿಯೇ ಆಕೆ ಗುರುತಿಸಿಕೊಂಡಿದ್ದಾಳೆ ಎಂದು ಹೇಳಿದ್ದರು. ಇನ್ನೊಂದು ಸಲ ಮಾತಿನ ಬರದಲ್ಲಿ ಮಂಜು ಭಾಷಿಣಿಗೆ ಡುಮ್ಮಿ ಎಂದು ಕರೆದಿದ್ದರು. ಆದರೆ, ಇದನ್ನೆಲ್ಲಾ ಮರೆತು, ತಮ್ಮನ್ನು ಇನ್ಯಾರೋ ಈಯಮ್ಮ ಎಂದಿದ್ದಕ್ಕೆ ಮಾತ್ರ ಕೋಪ ಮಾಡಿಕೊಂಡು, ಸುದೀಪ್ ಎದುರು ನನ್ನನ್ನು ಹಾಗೆ ಕರೆಯಬಾರದು ಎಂದು ಹೇಳೀರ್ದಕ್ಕೆ ವೀಕ್ಷಕರು ಕಿಡಿ ಕಾರಿದ್ದಾರೆ.