BBK 12: ಕಿಚ್ಚ ಸುದೀಪ್ ಮುಂದೆಯೇ ಕಿತ್ತಾಡಿಕೊಂಡ ಜಾನ್ವಿ-ರಿಷಾ: ರಣರಂಗವಾದ ಮನೆ
ಜಾನ್ವಿ ನೀಡಿದ ಈ ಹೇಳಿಕೆಗೆ ಕೆರಳಿ ಕೆಂಡವಾದ ರಿಷಾ, ನೀವು ಆಡಿದಾಗ ಆಟ ಚೆನ್ನಾಗಿರುತ್ತೆ.. ನಾವು ಆಡಿದ್ರೆ ಅದು ಅಸಹ್ಯ ಥೂ ಆಗುತ್ತಾ ಎಂದು ಕೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನನ್ ಮಗನ್ದು ತಾಕತ್ ಏನು ಅಂತ ತೋರಿಸ್ತೇನೆ ಎಂದು ರಿಷಾ ಹೇಳಿದ್ದಾರೆ.
Jhanvi Sudeep Risha -
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (bigg boss kannada 12) ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಸ್ಪರ್ಧಿಗಳನ್ನು ಕಂಡು ಇತರೆ ಕೆಲ ಸ್ಪರ್ಧಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಮೊನ್ನೆ ವಾರದ ಮಧ್ಯೆ ಜಾನ್ವಿ ಅವರು ಅಶ್ವಿನಿ ಜೊತೆ ನಿನ್ನೆ ಮೊನ್ನೆ ಬಂದವರೆಲ್ಲ ಕ್ಯಾಪ್ಟನ್ ಆದ್ರು ಅಂತ ರಘು ಬಗ್ಗೆ ಮಾತನಾಡಿದ್ದರು. ಅಲ್ಲದೆ ವೈಲ್ಡ್ ಕಾರ್ಡ್ ಸ್ಪರ್ಧಿ ರಿಷಾ ಅವರು ಗಿಲ್ಲಿ ನಟ ಹಾಗೂ ಚಂದ್ರಪ್ರಭ ಜೊತೆ ತುಂಬಾ ಆತ್ಮೀಯತೆಯಿಂದ ಇದ್ದಾರೆ. ಇದನ್ನೆಲ್ಲ ಜಾನ್ವಿ-ಅಶ್ವಿನಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಿರುವಾಗ ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಜಾನ್ವಿ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದು ಇದು ರಣರಂಗವಾಗಿ ಮಾರ್ಪಟ್ಟಿದೆ.
ಕಿಚ್ಚ ಸುದೀಪ್ ಅವರು, ನಿಮ್ಮ ದೃಷ್ಟಿಕೋನದಲ್ಲಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಮೇಲೆ ಅಭಿಪ್ರಾಯ ತಿಳಿಸಿ ಎಂದು ಇತರೆ ಸ್ಪರ್ಧಿಗಳನ್ನ ಕೇಳಿದ್ದಾರೆ. ಇದಕ್ಕೆ ಅಶ್ವಿನಿ ಅವರು, ರಿಷಾ ಬಗ್ಗೆ ನನ್ಗೆ ತುಂಬಾ ಪಾಸಿಟಿವ್ ಅಂತ ಅನಿಸಲಿಲ್ಲ ಎಂದಿದ್ದಾರೆ. ಬಳಿಕ ಜಾನ್ವಿ, ರಿಷಾ ಅವರು ಚಂದ್ರಪ್ರಭ ಜೊತೆಗೆ ಇರಬಹುದು ಅಥವಾ ಗಿಲ್ಲಿ ಜೊತೆಗೆ ಇರಬಹುದು ಅವರು ಫನ್ ಆಗೇ ಇರ್ತಾರೆ.. ಆದ್ರೆ ನಮ್ಗೆ ಅದು ಎಲ್ಲೊ ಒಂದುಕಡೆ ಸಣ್ಣದಾಗಿ ಮುಜುಗರ ಆಗುತ್ತೆ ಎಂಬ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ.
ಜಾನ್ವಿ ನೀಡಿದ ಈ ಹೇಳಿಕೆಗೆ ಕೆರಳಿ ಕೆಂಡವಾದ ರಿಷಾ, ನೀವು ಆಡಿದಾಗ ಆಟ ಚೆನ್ನಾಗಿರುತ್ತೆ.. ನಾವು ಆಡಿದ್ರೆ ಅದು ಅಸಹ್ಯ ಥೂ ಆಗುತ್ತಾ ಎಂದು ಕೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನನ್ ಮಗನ್ದು ತಾಕತ್ ಏನು ಅಂತ ತೋರಿಸ್ತೇನೆ ಎಂದು ರಿಷಾ ಹೇಳಿದ್ದಾರೆ. ಇಷ್ಟೆಲ್ಲ ಜಗಳ ನಡೆಯುತ್ತಿರುವಾಗ ಅತ್ತ ಕಿಚ್ಚ ಸುದೀಪ್ ಇದನ್ನೆಲ್ಲ ಗಮನಿಸಿದ್ದಾರೆ. ಈ ಘಟನೆ ಆದ ಬಳಿ ಸುದೀಪ್ ಏನೆಲ್ಲ ಹೇಳಿದ್ದಾರೆ ಎಂಬುದು ನೋಡಬೇಕಿದೆ.
ಕಾಕ್ರೋಚ್ ಸುಧಿಗೂ ಕ್ಲಾಸ್:
ಇನ್ನು ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿಗೆ ಅವಹೇಳನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ರಕ್ಷಿತಾ ಅವರನ್ನು ಸೆಡೆ ಎಂದು ಕರೆದಿದ್ದರು. ಕೇಳಿದ್ದಕ್ಕೆ ಇದು ನಮ್ಮ ಏರಿಯಾದಲ್ಲಿ ಕಾಮನ್ ಆಗಿ ಮಾತಾಡೋ ವರ್ಸ್, ಸೆಡೆ ಎಂದರೆ ಚೈಲ್ಡ್, ಚಿಕ್ಕ ಹುಡುಗಿ ಅಂತ ಅರ್ಥ ಎಂದೆಲ್ಲ ಹೇಳಿದ್ದರು. ನಿನ್ನೆಯ ಎಪಿಸೋಡ್ನಲ್ಲಿ ಹಂಗಿಸುವ ರೀತಿಯಲ್ಲಿ ಸುಧಿ ಅವರು ರಕ್ಷಿತಾ ಬಳಿ ಕ್ಷಮೆ ಕೇಳಿದ್ದು ಕೂಡ ವಿಚಿತ್ರವಾಗಿತ್ತು. ಇದು ಇಂದಿನ ಎಪಿಸೋಡ್ನಲ್ಲಿ ಸದ್ದು ಮಾಡುವುದು ಖಚಿತ.
BBK 12: ಸ್ಪರ್ಧಿಗಳ ಟೂತ್ ಬ್ರಶ್ನಲ್ಲಿ ಟಾಯ್ಲೆಟ್ ಕ್ಲೀನ್?: ಅಶ್ವಿನಿ ಗೌಡ ಮೇಲೆ ಮತ್ತೊಂದು ಆರೋಪ