ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thudarum: ಮೂರೇ ದಿನ ಬಾಕಿ: ಒಟಿಟಿಗೆ ಬರುತ್ತಿದೆ ಮಲಯಾಳಂನ ಈ ಬ್ಲಾಕ್ ಬಾಸ್ಟರ್ ಕ್ರೈಮ್-ಥ್ರಿಲ್ಲರ್ ಸಿನಿಮಾ

ತುಡರುಮ್ ಸಿನಿಮಾ ಏಪ್ರಿಲ್ 25 ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಕೇರಳದಲ್ಲೇ ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಜೀಯೋ ಹಾಟ್ಸ್ಟಾರ್ನಲ್ಲಿ ತುಡರುಮ್ ಸಿನಿಮಾ ಮೇ 30ರಂದು ರಿಲೀಸ್ ಆಗಲಿದೆ. ಇದು ಒಟ್ಟು ಐದು ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.

ಒಟಿಟಿಗೆ ಬರುತ್ತಿದೆ ಮಲಯಾಳಂನ ಈ ಬ್ಲಾಕ್ ಬಾಸ್ಟರ್ ಥ್ರಿಲ್ಲರ್ ಸಿನಿಮಾ

thudarum ott release

Profile Vinay Bhat May 27, 2025 3:27 PM

ಒಟಿಟಿಯಲ್ಲಿ ಇತ್ತೀಚಿನ ಮಲಯಾಳಂ ಚಿತ್ರಗಳು ಹುಡುಕುತ್ತಿದ್ದೀರಾ?. ಕ್ರೈಮ್ ಥ್ರಿಲ್ಲರ್‌ಗಳಿಂದ (Crime Thriller) ಹಿಡಿದು ಭಾವನಾತ್ಮಕ ಡ್ರಾಮಗಳವರೆಗೂ, ಹಲವಾರು ರೋಮಾಂಚಕಾರಿ ಸಿನಿಮಾಗಳು ಈ ವೀಕೆಂಡ್ ಬಿಡುಗಡೆ ಆಗಲಿದೆ. ಈ ಪೈಕಿ ಮೇ 30 ರಂದು ಒಟಿಟಿಗೆ ಬ್ಲಾಕ್‌ಬಸ್ಟರ್ ಸಿನಿಮಾ ಒಂದು ಆಗಮನವಾಗಲಿದೆ. ಇದರ ಹೆಸರು ಮಲಯಾಳಂನಲ್ಲಿ ಧೂಳೆಬ್ಬಿಸಿದ ತುಡರಮ್‌. ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕೊಳ್ಳೆ ಹೊಡೆದಿತ್ತು.

ಅದರಲ್ಲೂ ತುಡರುಮ್ ಬೆಂಗಳೂರಿನಂತಹ ನಗರದ ಹಲವು ಚಿತ್ರಮಂದಿರದಲ್ಲಿ ಹೌಸ್‌ಪುಲ್ ಪ್ರದರ್ಶನ ಕಂಡಿತ್ತು. ಕರ್ನಾಟಕದ ವಿತರಕರೊಬ್ಬರ ಪ್ರಕಾರ ಈ ಮಲಯಾಳಂ ಸಿನಿಮಾದಿಂದ ಮೂರೂವರೆ ಕೋಟಿಗೂ ಅಧಿಕ ಶೇರ್ ಬಂದಿದೆ. ಕನ್ನಡ ಸಿನಿಮಾಗಳೇ ಇಷ್ಟೊಂದು ಶೇರ್ ಎತ್ತುವುದಕ್ಕೆ ಪರದಾಡುತ್ತಿರುವ ಕಾಲದಲ್ಲಿ ಮೋಹನ್‌ಲಾಲ್ ಸಿನಿಮಾ ನಮ್ಮ ರಾಜ್ಯದಲ್ಲಿ ದಾಖಲೆ ಬರೆದಿದೆ. ಈ ಸಿನಿಮಾ ಈಗ ಒಟಿಟಿಗೆ ಬರಲು ಸಜ್ಜಾಗಿದೆ.

ತುಡರುಮ್ ಸಿನಿಮಾ ಏಪ್ರಿಲ್ 25 ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಕೇರಳದಲ್ಲೇ ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವಾದ್ಯಂತ 230 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಸಿನಿಮಾ ಎನ್ನುವ ಖ್ಯಾತಿ ಪಡೆದಿದೆ.

Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ದೊಡ್ಡ ತಿರುವು: ಎಂಟ್ರಿಕೊಟ್ಟ ಬಿಗ್ ಬಾಸ್ ಸ್ಪರ್ಧಿ

ಕೆ.ಆರ್. ಸುನಿಲ್ ಬರೆದ ಈ ಕೌಟುಂಬಿಕ ಥ್ರಿಲ್ಲರ್ ಚಿತ್ರವನ್ನು ತರುಣ್ ಮೂರ್ತಿ ನಿರ್ದೇಶಿಸಿದ್ದಾರೆ. ಬೆಂಜ್ ಎಂದೇ ಕರೆಯಲ್ಪಡುವ ಟ್ಯಾಕ್ಸಿ ಚಾಲಕ ಷಣ್ಮುಖಂ ತನ್ನ ಪ್ರೀತಿಯ ಅಂಬಾಸಿಡರ್ ಕಾರಿನೊಂದಿಗೆ ಅಸಾಮಾನ್ಯ ಘಟನೆಯಲ್ಲಿ ಸಿಲುಕುತ್ತಾನೆ. ಆ ಬಲೆಯಿಂದ ಅವನು ಹೇಗೆ ತಪ್ಪಿಸಿಕೊಳ್ಳುತ್ತಾನೆ ಎಂಬುದು ಕಥೆಯ ವಿಷಯ. ಈಗ ಹಾಟ್​ಸ್ಟಾರ್ ಕಡೆಯಿಂದ ಸಿನಿಮಾ ಒಟಿಟಿ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಜೀಯೋ ಹಾಟ್​​ಸ್ಟಾರ್​ನಲ್ಲಿ ತುಡರುಮ್ ಸಿನಿಮಾ ಮೇ 30ರಂದು ರಿಲೀಸ್ ಆಗಲಿದೆ. ಇದು ಒಟ್ಟು ಐದು ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ: ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ. ಮೋಹನ್ ಲಾಲ್, ಶೋಭನಾ, ಪ್ರಕಾಶ್ ವರ್ಮಾ, ಬಿನು ಪಪ್ಪು, ಫರ್ಹಾನ್ ಫಾಸಿಲ್, ಥಾಮಸ್ ಮ್ಯಾಥ್ಯೂ, ಮಣಿಯನ್ಪಿಳ್ಳ ರಾಜು, ಇರ್ಷಾದ್, ಸಂಗೀತ್ ಪ್ರತಾಪ್, ನಂದು, ಅಬಿನ್ ಬಿನೋ, ಅರ್ಷಾ ಚಾಂದಿನಿ ಬೈಜು, ಶೋಬಿ ತಿಲಕನ್, ಭಾರತಿರಾಜ, ಮತ್ತು ಶ್ರೀಜಿತ್ ರವಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.