BBK 12: ಬಿಗ್ ಬಾಸ್ನಲ್ಲಿ ಸಿಕ್ಕ ಸಂಭಾವನೆ ಎಷ್ಟು?, ರಿವೀಲ್ ಮಾಡಿದ ಮಂಜು ಭಾಷಿಣಿ
Manju Bhashini Remuneration: ಕಳೆದ ವಾರದ ಡೊಡ್ಮನೆಯಲ್ಲಿ ಈ ಸೀಸನ್ನ ಮೊದಲ ಫಿನಾಲೆ ನಡೆಯಿತು. ಇದರಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿ ಆಚೆ ಬಂದರು. ಮಂಜು ಭಾಷಿಣಿ ಹಾಗೂ ಅಶ್ವಿನಿ ಎಸ್.ಎನ್ ಎಲಿಮಿನೇಟ್ ಆದರು. ದೊಡ್ಮನೆಯಲ್ಲಿ ಹೆಚ್ಚೇನು ಸದ್ದು ಮಾಡದ ಮಂಜು ಭಾಷಿಣಿ ಮೂರನೇ ವಾರಕ್ಕೆ ತಮ್ಮ ಬಿಗ್ ಬಾಸ್ ಪ್ರಯಾಣವನ್ನು ಕೊನೆಗೊಳಿಸಿದರು.
Manju Bhashini Remuneration -
ಬಿಗ್ ಬಾಸ್ಗೆ (Bigg Boss Kannada 12) ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟ ಬಳಿಕ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ದೊಡ್ಮನೆಯೊಳಗೆ ಕಾಲಿಟ್ಟ ತಕ್ಷಣ ಇತರೆ ಸ್ಪರ್ಧಿಗಳ ಬಗ್ಗೆ ಇವರು ನೀಡಿರುವ ಅಭಿಪ್ರಾಯ ಮನೆಯಲ್ಲಿ ಹಲ್-ಚಲ್ ಎಬ್ಬಿಸಿದೆ. ಈ ವಾರ ಮನೆಯಿಂದ ಹೊರಹೋಗಲು ಏಳು ಮಂದಿ ನಾಮಿನೇಟ್ ಆಗಿದ್ದಾರೆ. ಅಶ್ವಿನಿ ಗೌಡ, ಜಾನ್ವಿ, ಗಿಲ್ಲಿ ನಟ, ರಾಶಿಕಾ ಶೆಟ್ಟಿ, ಧ್ರುವಂತ್, ರಕ್ಷಿತಾ ಶೆಟ್ಟಿ ಹಾಗೂ ಸ್ಪಂದನಾ ಸೋಮಣ್ಣ ನಾಮಿನೇಟ್ ಆಗಿದ್ದಾರೆ.
ಕಳೆದ ವಾರದ ಡೊಡ್ಮನೆಯಲ್ಲಿ ಈ ಸೀಸನ್ನ ಮೊದಲ ಫಿನಾಲೆ ನಡೆಯಿತು. ಇದರಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿ ಆಚೆ ಬಂದರು. ಮಂಜು ಭಾಷಿಣಿ ಹಾಗೂ ಅಶ್ವಿನಿ ಎಸ್.ಎನ್ ಎಲಿಮಿನೇಟ್ ಆದರು. ದೊಡ್ಮನೆಯಲ್ಲಿ ಹೆಚ್ಚೇನು ಸದ್ದು ಮಾಡದ ಮಂಜು ಭಾಷಿಣಿ ಮೂರನೇ ವಾರಕ್ಕೆ ತಮ್ಮ ಬಿಗ್ ಬಾಸ್ ಪ್ರಯಾಣವನ್ನು ಕೊನೆಗೊಳಿಸಿದರು. ಮಂಜು ಭಾಷಿಣಿ ಅವರು ಮೊದಲೆರಡು ವಾರ ಅಡುಗೆ ಮನೆಯಲ್ಲೇ ಫಿಕ್ಸ್ ಆಗಿದ್ದರು. ಕಿಚ್ಚ ಸುದೀಪ್ ಈ ಕುರಿತು ಪರೋಕ್ಷವಾಗಿ ಹೇಳಿದರೂ ಅದನ್ನು ಇವರು ಸೀರಿಯೆಸ್ ಆಗಿ ತೆಗೆದುಕೊಂಡಿಲ್ಲ.
ಅಲ್ಲದೆ ಮಂಜು ಅವರು ಫಿಸಿಕಲ್ ಟಾಸ್ಕ್‌ಗಳಲ್ಲಿ ಹೆಚ್ಚೇನು ಮೋಡಿ ಮಾಡಿಲ್ಲ. ಸ್ಟ್ರಾಟೆಜಿ ಮಾಡೋದ್ರಲ್ಲಿ ಮತ್ತು ಮಾತಲ್ಲೇ ಟಕ್ಕರ್ ಕೊಡೋದ್ರಲ್ಲಿ ಮಂಜುಭಾಷಿಣಿ ಮುಂದಿದ್ದರು. ಆದರೆ, ಬಿಗ್ ಬಾಸ್ನಲ್ಲಿ ಉಳಿಯಲು ಇದಿಷ್ಟೆ ಇದ್ದರೆ ಸಾಲದು. ಹೀಗಾಗಿ ಇವರಿಗೆ ಕಡಿಮೆ ವೋಟ್ ಬಂದು ಮೂರನೇ ವಾರಕ್ಕೆ ಮನೆಯಿಂದ ಎಲಿಮಿನೇಟ್ ಆದರು. ಇದೀಗ ಅವರು ಮನೆಯಿಂದ ಆಚೆ ಬಂದು ಬಿಗ್ ಬಾಸ್ ಮನೆಯ ಅನುಭವ ಹಂಚಿಕೊಂಡಿದ್ದಾರೆ. ಜೊತೆಗೆ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ.
ಬಿಗ್ ಬಾಸ್ನಲ್ಲಿ ಹೋಗಿ ಬಂದ ಮೇಲೆ ಸಾಮಾನ್ಯವಾಗಿ ಅಲ್ಲಿ ಸಿಕ್ಕ ಸಂಭಾವನೆ ಎಷ್ಟು ಎನ್ನುವುದು ವೀಕ್ಷಕರಿಗೆ ಮಾಡುವ ಪ್ರಶ್ನೆ. ಓರ್ವ ಸ್ಪರ್ಧಿಗೆ ಇರುವ ಜನಪ್ರಿಯತೆ ಇತ್ಯಾದಿಗಳನ್ನು ನೋಡಿ ಬಿಗ್ ಬಾಸ್ನಲ್ಲಿ ವಿಭಿನ್ನ ರೀತಿಯಲ್ಲಿ ಸಂಬಳ ನೀಡಲಾಗುತ್ತದೆ. ಅದೇ ರೀತಿ ನಟಿ ಮಂಜು ಭಾಷಿಣಿ ಅವರಿಗೆ ಎಷ್ಟು ಸಂಬಳ ಸಿಕ್ಕಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಸಂಭಾವನೆ ಎನ್ನುವುದು ಇಲ್ಲಿ ಮುಖ್ಯವಲ್ಲ. ಅದಕ್ಕಿಂತ ಹೆಚ್ಚಿಗೆ ಸಿಗುವ ಅನುಭವ ಮುಖ್ಯ ಎಂದಿದ್ದಾರೆ.
ಬಿಗ್ ಬಾಸ್ನಿಂದ ನನಗೆ ಸಿಕ್ಕ ಸಂಭಾವನೆ ಕಡಿಮೆ ಅಂತನೂ ಹೇಳಲ್ಲ, ಒಂದಿಷ್ಟು ಸಿಕ್ಕಿದೆ ಎಂದು ಹೇಳಿದ್ದಾರೆ. ಇದೇ ವೇಳೆ ತಾವು ಖರ್ಚು ಮಾಡಿರುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಬಿಗ್ ಬಾಸ್ಗೆ ಅಂತ ಕಾಸ್ಟ್ಯೂಮ್ ಮತ್ತು ಮೇಕಪ್ಗೆ ಸುಮಾರು ಎರಡೂವರೆಯಿಂದ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ ಎಂದಿದ್ದಾರೆ. 2-3 ವಾರಕ್ಕೆ ಆಗುವಷ್ಟು ಖರೀದಿ ಮಾಡಿದ್ದೆ. ವೀಕೆಂಡ್ನಲ್ಲಿ ಮನೆಯಿಂದ ತರಿಸಿಕೊಳ್ಳಬಹುದು. ಸೋ ಒಂದಷ್ಟನ್ನು ತೆಗೆದುಕೊಂಡು ಹೋಗಿದ್ದೆ ಎಂದು ಖರ್ಚಿನ ವಿವರವನ್ನೂ ನೀಡಿದ್ದಾರೆ.