Bhagyalakshmi Serial: ಶ್ರೇಷ್ಠಾ ಕಿಡ್ನಾಪ್; ತಾಂಡವ್ ಅಸಲಿ ಬಣ್ಣ ಬಯಲಾಗೋ ಹೊತ್ತಲ್ಲೇ ಭಾಗ್ಯಗೆ ಶಾಕ್!
Bhagyalakshmi Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಭಾಗ್ಯಳ ಬದಲಾದ ವರ್ತನೆ ನೋಡೋಕಾಗದೇ ಗುಂಡು ಮತ್ತು ಕುಸುಮತ್ತೆ ಕಂಗಾಲಾಗಿದ್ದರು. ಆ ಬಳಿಕ ಭಾಗ್ಯ, ತಾಂಡವ್ ಅಸಲಿ ಮುಖದ ಬಗ್ಗೆ ಹೇಳಿಕೊಂಡಿದ್ದಾಳೆ. ಆದರೀಗ ಮತ್ತೊಂದು ಎಡವಟ್ಟು ಮಾಡಿದ್ದಾನೆ ತಾಂಡವ್. ಶ್ರೇಷ್ಠಾ ಕಿಡ್ನಾಪ್ ಆಗಿದ್ದಾಳೆ. ಶ್ರೇಷ್ಠಾ ಬರಲ್ಲ ಅಂತ ಭಾಗ್ಯ ಮುಂದೆ ಹೇಳಿದ್ದಾನೆ ತಾಂಡವ್.
ಭಾಗ್ಯಲಕ್ಷ್ಮೀ ಧಾರಾವಾಹಿ -
ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀಯಲ್ಲಿ (Bhagyalakshmi Serial) ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಭಾಗ್ಯಳ ಬದಲಾದ ವರ್ತನೆ ನೋಡೋಕಾಗದೇ ಗುಂಡು ಮತ್ತು ಕುಸುಮತ್ತೆ ಕಂಗಾಲಾಗಿದ್ದರು. ಆ ಬಳಿಕ ಭಾಗ್ಯ, ತಾಂಡವ್ (Bhagya Thandav) ಅಸಲಿ ಮುಖದ ಬಗ್ಗೆ ಹೇಳಿಕೊಂಡಿದ್ದಾಳೆ. ಆದರೀಗ ಮತ್ತೊಂದು ಎಡವಟ್ಟು ಮಾಡಿದ್ದಾನೆ ತಾಂಡವ್. ಶ್ರೇಷ್ಠಾ ಕಿಡ್ನಾಪ್ ಆಗಿದ್ದಾಳೆ. ಶ್ರೇಷ್ಠಾ (Shreshtha) ಬರಲ್ಲ ಅಂತ ಭಾಗ್ಯ ಮುಂದೆ ಹೇಳಿದ್ದಾನೆ ತಾಂಡವ್.
ಇದನ್ನೂ ಓದಿ: Lakshmi Nivasa Serial: ಚಿನ್ನು ಮರಿಯ ಹೊಸ ಹೆಜ್ಜೆ! ಸೈಕೋ ಜಯಂತ್‌ಗೆ ಇದೆ ಮಾರಿಹಬ್ಬ
ತಾಂಡವ್ ಮತ್ತೆ ಆಟ ಆಡಲು ಶುರು
ಭಾಗ್ಯಳ ಬದುಕಿನಲ್ಲಿ ತಾಂಡವ್ ಮತ್ತೆ ಆಟ ಆಡಲು ಶುರು ಮಾಡಿದ್ದಾನೆ. ತಾಂಡವ್‌ನ ಬೇಡ ಎನ್ನುತ್ತಿದ್ದ ಭಾಗ್ಯ ಹೇಗೆ ಈ ಮದುವೆಗೆ ಒಪ್ಪಿಕೊಂಡಳು ಎಂದು ಪ್ರಶ್ನೆ ಮಾಡಿದ್ದರು. ಭಾಗ್ಯ ಮೌನ ಮುರಿದಿದ್ದು, ನಾನು ತಾಂಡವ್‌ನ ಮದುವೆ ಆಗ್ತೀನಿ ಎಂದು ಯಾರು ಹೇಳಿದ್ದು ನಿಮಗೆ? ಎಂದು ಮರು ಪ್ರಶ್ನೆ ಮಾಡಿ, ಫ್ಲ್ಯಾಶ್‌ಬ್ಯಾಕ್ ಸ್ಟೋರಿ ಹೇಳಿದ್ದಳು.
ತಾಂಡವ್ ಮತ್ತು ಶ್ರೇಷ್ಠಾ ಮಾತುಕತೆಯನ್ನ ಕೇಳಿಸಿಕೊಂಡಿದ್ದಳು ಭಾಗ್ಯ. ತಾನು ಒಳ್ಳೆಯವನಂತೆ ನಟಿಸುತ್ತಿದ್ದೇನೆ ಎಂದು ತಾಂಡವ್ ಸತ್ಯ ಬಾಯ್ಬಿಟ್ಟಿದ್ದ. ತಾಂಡವ್ ಪ್ಲ್ಯಾನ್ ಗೊತ್ತಾದ ಬಳಿಕ ಭಾಗ್ಯ ತಾಳಿಯನ್ನ ಬದಲಾಯಿಸಿದ್ದಾಳೆ. ಅಷ್ಟೇ ಅಲ್ಲ ತಾಂಡವ್ ಕೊಟ್ಟ ಬಳಯನ್ನು ಹಾಕದೇ ಆದಿ ಕೊಟ್ಟ ಬಳೆಗಳನ್ನೇ ಹಾಕಿದ್ದಳು.
ಆದರೀಗ ಎಲ್ಲ ಸರಿ ಹೋಗೋ ಹೊತ್ತಲೇ ಮತ್ತೊಂದು ಎಡವಟ್ಟು ಮಾಡಿದ್ದಾನೆ ತಾಂಡವ್. ಕುಸುಮಾ, ಭಾಗ್ಯಳಿಗೆ ಮಾತಾಡುವಾಗ, ಶ್ರೇಷ್ಟಾ ಈ ಮದುವೆಗೆ ಬಂದು ಮದುವೆ ನಿಲ್ಲಿಸುತ್ತಾಳೆ ಎಂದಿದ್ದಾಳೆ.
ಅಷ್ಟೇ ಅಲ್ಲ ತಾಂಡವ್ ಮುಖವಾಡ ಕಳಚಿ ಬೀಳುತ್ತೆ ಎಂದಿದ್ದಾಳೆ ಅದೇ ಹೊತ್ತಿಗೆ ಆದಿ ಹೋಗಿ ರೂಮ್ ನೋಡಿದಾಗ ಶ್ರೇಷ್ಟಾ ಕಾಣೆ ಆಗಿರೋದು ಗೊತ್ತಾಗಿದೆ. ತಾಂಡವ್ ಕೂಡ ಭಾಗ್ಯಳ ಮುಂದೆ ಶ್ರೇಷ್ಟಾ ಬರೋದೆ ಇಲ್ಲ ಅಂತ ಸವಾಲ್ ಹಾಕಿದ್ದಾನೆ.
ಇದನ್ನೂ ಓದಿ: Allu Arjun Birthday: ಲುಕ್ ಗಾಗಿ ಟ್ರೋಲ್ ಆಗಿದ್ದ ನಟ ಇಂದು ಸೂಪರ್ ಸ್ಟಾರ್! ಅಲ್ಲು ಅರ್ಜುನ್ ಸಿನಿ ಜರ್ನಿ ಹೇಗಿತ್ತು?
ಮುಂದೆ ತಾಂಡವ್‌ನೇ ಮದುವೆ ಆಗ್ತಾಳಾ ಭಾಗ್ಯ? ಶ್ರೇಷ್ಠಾ ಬಚಾವ್ ಆಗ್ತಾಳಾ? ಆದಿ ಮುಂದಿನ ಪ್ಲ್ಯಾನ್ ಏನು ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಈ ಧಾರಾವಾಹಿಯು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತದೆ.