ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಾಯಕ ಉದಿತ್‌ ನಾರಾಯಣ್‌ ವಿರುದ್ಧ ಗಂಭೀರ ಆರೋಪ, ದೂರು ದಾಖಲಿಸಿದ ಮೊದಲ ಪತ್ನಿ; ಏನಿದು ಪ್ರಕರಣ?

Udit Narayan Controversy: ಗಾಯಕ ಉದಿತ್‌ ನಾರಾಯಣ್‌ ಅವರ ಮೊದಲ ಪತ್ನಿ ರಂಜನಾ ಅವರು ಬಿಹಾರದ ಸುಪೌಲ್‌ನಲ್ಲಿ ಉದಿತ್‌ ಮತ್ತು ಅವರ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ. 1996ರಲ್ಲಿ ತಮಗೆ ತಿಳಿಯದಂತೆ ಶಸ್ತ್ರಚಿಕಿತ್ಸೆ ನಡೆಸಿ ತನ್ನ ಗರ್ಭಕೋಶವನ್ನು ತೆಗೆದುಹಾಕಲಾಗಿತ್ತು ಎಂದು ಅವರು ಆರೋಪ ಮಾಡಿದ್ದಾರೆ.

ಪತ್ನಿಯ ಒಪ್ಪಿಗೆಯಿಲ್ಲದೆ ಗರ್ಭಕೋಶ ತೆಗೆಸಿದ್ರಾ ಗಾಯಕ ಉದಿತ್‌ ನಾರಾಯಣ್‌?

-

Avinash GR
Avinash GR Feb 12, 2026 4:33 PM

ಖ್ಯಾತ ಗಾಯಕ ಉದಿತ್ ನಾರಾಯಣ್ ಅವರು ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅವರ ಮೊದಲ ಪತ್ನಿ ರಂಜನಾ ಅವರು ಬಿಹಾರದ ಸುಪೌಲ್‌ನಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉದಿತ್ ನಾರಾಯಣ್ ಮತ್ತು ಅವರ ಇಬ್ಬರು ಸಹೋದರರು ಹಾಗೂ ಉದಿತ್‌ ನಾರಾಯಣ್‌ ಅವರ ಎರಡನೇ ಪತ್ನಿಯ ವಿರುದ್ಧ ರಂಜನಾ ಅವರು ಗಂಭೀರ ಕ್ರಿಮಿನಲ್ ಅಪರಾಧಗಳ ಆರೋಪ ಮಾಡಿ, ದೂರು ನೀಡಿದ್ದಾರೆ.

ಗರ್ಭಕೋಶ ತೆಗಿಸಿದ್ರಾ ಉದಿತ್?

ತಮ್ಮ ವಕೀಲ ಕರುಣಾಕಾಂತ್ ಝಾ ಅವರೊಂದಿಗೆ ಪೊಲೀಸ್ ಠಾಣೆಗೆ ತೆರಳಿದ ರಂಜನಾ, ಅಧಿಕೃತ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಅವರು, "ತನ್ನ ವಿರುದ್ಧ ಕ್ರಿಮಿನಲ್ ಪಿತೂರಿ ನಡೆಸಿ, ನನಗೆ ತಿಳಿಯದಂತೆಯೇ ನನ್ನ ಗರ್ಭಕೋಶವನ್ನು (Uterus) ತೆಗೆದುಹಾಕಲಾಗಿತ್ತು" ಎಂದು ಗಂಭೀರ ಆರೋಪ ಮಾಡಿದ್ದಾರೆ. ವರ್ಷಗಳ ನಂತರ ವೈದ್ಯಕೀಯ ಚಿಕಿತ್ಸೆಯ ವೇಳೆ ತಮಗೆ ಈ ವಿಷಯ ತಿಳಿಯಿತು ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.

Udit Narayan: ಶ್ರೇಯಾ ಘೋಷಾಲ್‌ಗೂ ಮುತ್ತಿಟ್ಟಿದ್ದ ಉದಿತ್‌ ನಾರಾಯಣ್‌ : ವಿಡಿಯೊ ಫುಲ್‌ ವೈರಲ್!

ಒಂದೇ ವರ್ಷಕ್ಕೆ ಮತ್ತೊಂದು ಮದುವೆ

ತಮ್ಮ ದೂರಿನಲ್ಲಿ ರಂಜನಾ ಅವರು 1984ರ ಡಿಸೆಂಬರ್ 7ರಂದು ಹಿಂದೂ ಸಂಪ್ರದಾಯದಂತೆ ಉದಿತ್ ನಾರಾಯಣ್ ಜೊತೆ ತಮ್ಮ ವಿವಾಹವಾಗಿತ್ತು ಎಂದು ತಿಳಿಸಿದ್ದಾರೆ. 1985ರಲ್ಲಿ ಉದಿತ್ ನಾರಾಯಣ್ ಅವರು ಸಂಗೀತ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಮುಂಬೈಗೆ ತೆರಳಿದರು. ಈ ಅವಧಿಯಲ್ಲಿ, ಅವರು ದೀಪಾ ನಾರಾಯಣ್ ಎಂಬ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂಬ ವಿಷಯ ತಮಗೆ ಮಾಧ್ಯಮ ವರದಿಗಳ ಮೂಲಕ ತಿಳಿಯಿತು ಎಂದು ರಂಜನಾ ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ತಾವು ಪ್ರಶ್ನಿಸಿದಾಗಲೆಲ್ಲಾ ಉದಿತ್ ತಮ್ಮನ್ನು ದಾರಿ ತಪ್ಪಿಸುತ್ತಲೇ ಬಂದರು ಎಂದು ರಂಜನಾ ಹೇಳಿಕೊಂಡಿದ್ದಾರೆ.‌

Udit Narayan: ಲಿಪ್‌ ಕಿಸ್‌ ಬಗ್ಗೆ ವಿಷಾದವಿಲ್ಲ; ನಾನೂ ಲತಾಜಿಯಂತೆ ಭಾರತ ರತ್ನ ಪಡೆಯುತ್ತೇನೆ: ಉದಿತ್‌ ನಾರಾಯಣ್

"1996ರಲ್ಲಿ ಚಿಕಿತ್ಸೆಯ ನೆಪದಲ್ಲಿ ಉದಿತ್ ಅವರು ತಮ್ಮ ಸಹೋದರರಾದ ಸಂಜಯ್ ಕುಮಾರ್ ಝಾ ಮತ್ತು ಲಲಿತ್ ನಾರಾಯಣ್ ಝಾ ಅವರೊಂದಿಗೆ ಸೇರಿ ದೆಹಲಿಯ ಆಸ್ಪತ್ರೆಗೆ ಕರೆದೊಯ್ದು, ತಮ್ಮ ಒಪ್ಪಿಗೆಯಿಲ್ಲದೆ ಗರ್ಭಕೋಶವನ್ನು ತೆಗೆಸಿದ್ದರು. ಆ ಸಮಯದಲ್ಲಿ ದೀಪಾ ನಾರಾಯಣ್ ಕೂಡ ಆಸ್ಪತ್ರೆಯಲ್ಲಿದ್ದರು. 2006ರಲ್ಲಿ ಮುಂಬೈಗೆ ಹೋದಾಗ ಉದಿತ್ ಮತ್ತು ದೀಪಾ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದರು. ಮನೆಯೊಳಗೆ ಹೋಗುವುದಕ್ಕೂ ಬಿಡಲಿಲ್ಲ. ನಾನು ತವರು ಮನೆಯಲ್ಲೇ ವಾಸಿಸುತ್ತಿದ್ದೇನೆ" ರಂಜನಾ ದೂರಿನಲ್ಲಿ ತಿಳಿಸಿದ್ದಾರೆ.

"ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನನಗೆ ಅವರ ಬೆಂಬಲ ಬೇಕು. ಆದರೆ ಉದಿತ್ ನಾರಾಯಣ್ ಏನೂ ಹೇಳುತ್ತಿಲ್ಲ. ನನಗಾಗಿ ಏನನ್ನೂ ಮಾಡುತ್ತಿಲ್ಲ. ಇತ್ತೀಚೆಗೆ ಹಳ್ಳಿಗೆ ಬಂದು ಭರವಸೆ ನೀಡಿ ಹೋಗಿದ್ದಾರಷ್ಟೇ" ಎಂದು ರಂಜನಾ ಕಣ್ಣೀರಿಟ್ಟಿದ್ದಾರೆ.