ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srinivas Achar: ಸರಿಗಮಪ ಕಾರ್ಯಕ್ರಮದ ಖ್ಯಾತ ಗಿಟಾರ್ ಮಾಂತ್ರಿಕ ಶ್ರೀನಿವಾಸ್ ಇನ್ನಿಲ್ಲ

Srinivas Achar: ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ ಕಾರ್ಯಕ್ರಮದ ಮೂಲಕ ಲಕ್ಷಾಂತರ ಸಂಗೀತ ಪ್ರೇಮಿಗಳ ಮನಗೆದ್ದಿದ್ದ ಖ್ಯಾತ ಗಿಟಾರ್ ವಾದಕ ಡಿ. ಶ್ರೀನಿವಾಸ್ ಆಚಾರ್ ಅವರು ನಿಧನರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಶ್ರೀನಿವಾಸ್ ಆಚಾರ್ ಅವರು ‘ಸರಿಗಮಪ’ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರಮುಖ ಸಂಗೀತ ಕಾರ್ಯಕ್ರಮಗಳು, ಚಲನಚಿತ್ರಗಳು ಹಾಗೂ ಸುಗಮ ಸಂಗೀತ ಕಚೇರಿಗಳಲ್ಲಿ ಗಿಟಾರ್ ವಾದಕರಾಗಿ ಸೇವೆ ಸಲ್ಲಿಸಿದ್ದರು.

ಸರಿಗಮಪ ಕಾರ್ಯಕ್ರಮದ ಖ್ಯಾತ ಗಿಟಾರ್ ಮಾಂತ್ರಿಕ ಶ್ರೀನಿವಾಸ್ ಇನ್ನಿಲ್ಲ

ಗಿಟಾರ್ ಮಾಂತ್ರಿಕ ಶ್ರೀನಿವಾಸ್ -

Yashaswi Devadiga
Yashaswi Devadiga Nov 11, 2026 9:59 AM

ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ ಕಾರ್ಯಕ್ರಮದ (Saregampa0 ಮೂಲಕ ಲಕ್ಷಾಂತರ ಸಂಗೀತ ಪ್ರೇಮಿಗಳ ಮನಗೆದ್ದಿದ್ದ ಖ್ಯಾತ ಗಿಟಾರ್ ವಾದಕ ಡಿ. ಶ್ರೀನಿವಾಸ್ ಆಚಾರ್ ಅವರು ನಿಧನರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಶ್ರೀನಿವಾಸ್ ಆಚಾರ್ ಅವರು ‘ಸರಿಗಮಪ’ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರಮುಖ ಸಂಗೀತ ಕಾರ್ಯಕ್ರಮಗಳು, ಚಲನಚಿತ್ರಗಳು ಹಾಗೂ ಸುಗಮ ಸಂಗೀತ ಕಚೇರಿಗಳಲ್ಲಿ ಗಿಟಾರ್ (Gitar) ವಾದಕರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಅದ್ಭುತ ವಾದನ ಕೌಶಲ್ಯ, ಸರಳ ವ್ಯಕ್ತಿತ್ವ ಮತ್ತು ನಗುಮುಖದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ವಿಶೇಷವಾಗಿ ಜೀ ಕನ್ನಡ ವಾಹಿನಿಯ ಜನಪ್ರಿಯ ‘ಸರಿಗಮಪ’ ಕಾರ್ಯಕ್ರಮದಲ್ಲಿ ಅವರ ಗಿಟಾರ್ ವಾದನವೇ ವಿಶೇಷ ಆಕರ್ಷಣೆಯಾಗಿತ್ತು. ನೂರಾರು ಬಾಲ ಪ್ರತಿಭೆಗಳು ಹಾಗೂ ಯುವ ಗಾಯಕರು ವೇದಿಕೆಯಲ್ಲಿ ಹಾಡುವಾಗ ಅವರ ಗಾಯನಕ್ಕೆ ತಮ್ಮ ಗಿಟಾರ್ ನಾದದ ಮೂಲಕ ಮತ್ತಷ್ಟು ಮೆರುಗು ನೀಡುತ್ತಿದ್ದರು.


ಸರಿಗಮಪ ಕಾರ್ಯಕ್ರಮದ ಖ್ಯಾತ ಗಿಟಾರ್ ವಾದಕ ಇನ್ನಿಲ್ಲ

ಸ್ಪರ್ಧಿಗಳ ಗಾಯನಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಶ್ರೀನಿವಾಸ್ ಆಚಾರ್ ಅವರ ಸಂಗೀತದ ಕೊಡುಗೆ ಅಪಾರವಾಗಿತ್ತು. ಅವರ ಗಿಟಾರ್ ನಾದ ಕೇಳುಗರಿಗೆ ಹೊಸ ಅನುಭವ ನೀಡುತ್ತಿತ್ತು.

ಶ್ರೀನಿವಾಸ್ ಆಚಾರ್ ನಿಧನಕ್ಕೆ ಸಂಗೀತ ಲೋಕ ಕಂಬನಿ

ಶ್ರೀನಿವಾಸ್ ಆಚಾರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಂಗೀತ ಕ್ಷೇತ್ರದ ಹಿರಿಯ ಕಲಾವಿದರು, ಸಹಕಲಾವಿದರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಖ್ಯಾತ ಕಂಜೀರಾ ವಾದಕ ಅಮೃತ್ ಸೇರಿದಂತೆ ಹಲವು ಹಿರಿಯ ಸಂಗೀತ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇನ್ನು ಝೀ ಕನ್ನಡ ವಾಹಿನಿಯೂ ಶ್ರೀನಿವಾಸ್ ಆಚಾರ್ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿ ಗೌರವ ಸಲ್ಲಿಸಿದೆ.