ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Girlfriend Movie: ಮತ್ತೊಮ್ಮೆ ಡ್ಯಾನ್ಸ್‌ ಮೂಲಕ ಗಮನ ಸೆಳೆದ ರಶ್ಮಿಕಾ ಮಂದಣ್ಣ; ʼದಿ ಗರ್ಲ್‌ ಫ್ರೆಂಡ್‌ʼ ಚಿತ್ರದ ಮೊದಲ ಸಾಂಗ್‌ ಔಟ್‌

Rashmika Mandanna: ಟಾಲಿವುಡ್‌ನ ಮತ್ತೊಂದು ಬಹುನಿರೀಕ್ಷಿತ ಚಿತ್ರ ʼದಿ ಗರ್ಲ್‌ ಫ್ರೆಂಡ್‌ʼ. ವಿಶೇಷ ಎಂದರೆ ಇದರಲ್ಲಿ ಕನ್ನಡಿಗರೇ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ʼದಿಯಾʼ ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮೊದಲ ಬಾರಿ ತೆರೆಮೇಲೆ ಒಂದಾಗುತ್ತಿರುವ ʼದಿ ಗರ್ಲ್‌ ಫ್ರೆಂಡ್‌ʼ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದೆ.

ರಶ್ಮಿಕಾ ಅಭಿನಯದ ʼದಿ ಗರ್ಲ್‌ ಫ್ರೆಂಡ್‌ʼ ಚಿತ್ರದ ಮೊದಲ ಸಾಂಗ್‌ ಔಟ್‌

Profile Ramesh B Jul 16, 2025 7:42 PM

ಹೈದರಾಬಾದ್‌: ʼಕುಬೇರʼ (Kuberaa) ಚಿತ್ರದ ಮೂಲಕ ಗೆಲುವಿನ ಹಳಿಗೆ ಮರಳಿರುವ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಟಾಲಿವುಡ್‌ನ ಪ್ಯಾನ್‌ ಇಂಡಿಯಾ ಚಿತ್ರ 'ದಿ ಗರ್ಲ್‌ಫ್ರೆಂಡ್' (The Girlfriend Movie) ನಿರೀಕ್ಷೆಯಲ್ಲಿದ್ದಾರೆ. ರಶ್ಮಿಕಾ ಮತ್ತು ಪ್ರತಿಭಾನ್ವಿತ ಸ್ಯಾಂಡಲ್‌ವುಡ್‌ ನಟ ದೀಕ್ಷಿತ್ ಶೆಟ್ಟಿ (Dheekshith Shetty) ನಟನೆಯ ಬಹುನಿರೀಕ್ಷಿತ ಸಿನಿಮಾ 'ದಿ ಗರ್ಲ್‌ಫ್ರೆಂಡ್'. ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳು ಜಂಟಿಯಾಗಿ ನಿರ್ಮಿಸುತ್ತಿದ್ದು, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ರಾಹುಲ್ ರವೀಂದ್ರನ್ ನಿರ್ದೇಶನದ ಸುಂದರ ಪ್ರೇಮಕಥೆಯ ʼದಿ ಗರ್ಲ್‌ ಫ್ರೆಂಡ್‌ʼ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಡ್ಯಾನ್ಸ್‌ ಮೂಲಕ ರಶ್ಮಿಕಾ ಮತ್ತು ದೀಕ್ಷಿತ್‌ ಗಮನ ಸೆಳೆದಿದ್ದಾರೆ.

ʼದಿ ಗರ್ಲ್‌ ಫ್ರೆಂಡ್‌ʼ ಸಿನಿಮಾದ ʼಸ್ವರವೇʼ ಎಂಬ ಮೊದಲ ಹಾಡು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿದೆ. ಹೇಶಮ್ ಅಬ್ದುಲ್ ವಹಾಬ್ ಹಾಡಿಗೆ ಮ್ಯೂಸಿಕ್‌ ನೀಡುವುದರ ಜತೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ನಾಗಾರ್ಜುನ್‌ ಶರ್ಮಾ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ಹಾಡಿನ ಮೋಡಿಗೆ ಮತ್ತಷ್ಟು ಮೆರುಗು ನೀಡಿದೆ. ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ದಿ ಗರ್ಲ್‌ಫ್ರೆಂಡ್' ಶೀಘ್ರದಲ್ಲೇ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.



ಈ ಸುದ್ದಿಯನ್ನೂ ಓದಿ: Rashmika Mandanna: ಇನ್ನೊಂದು ಬಹುನಿರೀಕ್ಷಿತ ಬಾಲಿವುಡ್‌ ಚಿತ್ರಕ್ಕೆ ರಶ್ಮಿಕಾ ಆಯ್ಕೆ; ಮತ್ತೊಮ್ಮೆ ಸೂಪರ್‌ ಸ್ಟಾರ್‌ಗೆ ಜೋಡಿ

'ದಿ ಗರ್ಲ್‌ಫ್ರೆಂಡ್' ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿ ತೆರೆ ಹಂಚಿಕೊಂಡಿದ್ದಾರೆ. ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ನಿರ್ಮಾಣದ ಈ ಚಿತ್ರ ಟೈಟಲ್ಲೇ ಹೇಳುವಂತೆ ಮುದ್ದಾದ ಲವ್ ಸ್ಟೋರಿಯನ್ನು ಹೊಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ದಿ ಗರ್ಲ್‌ಫ್ರೆಂಡ್' ಸಿನಿಮಾ ತೆರೆಗೆ ಬರಲಿದೆ. ಕೃಷ್ಣನ್ ವಸಂತ್ ಛಾಯಾಗ್ರಹಣ ಚಿತ್ರಕ್ಕಿದೆ.

ಮಹಿಳಾ ಪ್ರಧಾನ ಚಿತ್ರ

ವಿಶೇಷ ಎಂದರೆ ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇದುವರೆಗೆ ಮಾಡಿರದಂತಹ ಪಾತ್ರದಲ್ಲಿ ರಶ್ಮಿಕಾ ಅಭಿನಯಿಸಿದ್ದಾರೆ. ಮಧ್ಯಮ ವರ್ಗದ ಹುಡುಗಿಯಾಗಿ ಅವರು ಕಾಣಿಸಿಕೊಂಡಿದ್ದು, ಈ ಮೂಲಕ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ತೆರೆಕಂಡ, ಧನುಷ್‌ ಜತೆಗೆ ರಶ್ಮಿಕಾ ಅಭಿನಯಿಸಿದ ʼಕುಬೇರʼ ಸಿನಿಮಾ ಸೂಪರ್‌ ಹಿಟ್‌ ಎನಿಸಿಕೊಂಡಿದೆ. ಧನುಷ್‌-ನಾಗಾರ್ಜುನ್‌ ಅವರಂತಹ ದಿಗ್ಗಜ ನಟರಿದ್ದರೂ ರಶ್ಮಿಕಾ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಮೂಲಕ ಅವರು ಬಾಲಿವುಡ್‌ನ ʼಸಿಕಂದರ್‌ʼ ಸೋಲಿನ ಆಘಾತದಿಂದ ಹೊರ ಬಂದಿದ್ದಾರೆ.

2021ರಲ್ಲಿ ತೆರೆಕಂಡ ʼಮುಗ್ಗುರು ಮೊನಗಲ್ಲುʼ ಸಿನಿಮಾ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ದೀಕ್ಷಿತ್‌ ಶೆಟ್ಟಿ 2023ರಲ್ಲಿ ರಿಲೀಸ್‌ ಆದ ʼದಸರಾʼ ಸಿನಿಮಾ ಮೂಲಕ ಗಮನ ಸೆಳೆದರು. ಸದ್ಯ ಅವರು ಕನ್ನಡ, ತೆಲುಗು ಜತೆಗೆ ಮಲಯಾಳಂ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಅವರಿಗೂ 'ದಿ ಗರ್ಲ್‌ಫ್ರೆಂಡ್' ಮಹತ್ವದ ಚಿತ್ರವಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.