ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ugramm Manju Marriage: ಧರ್ಮಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

Ugram Manju: ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್​​ಬಾಸ್ ಕನ್ನಡ ಸ್ಪರ್ಧಿ ಆಗಿರುವ ಉಗ್ರಂ ಮಂಜು ವೈವಾಹಿಕ ಜೀವನಕ್ಕೆ (ಜ.23) ಕಾಲಿಟ್ಟಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗುರು, ಹಿರಿಯ ಆಶೀರ್ವಾದದೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಧರ್ಮಸ್ಥಳದ (dharmasthala) ಮಹೋತ್ಸವ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಭಾಗಿಯಾಗಿದ್ದರು.

ಧರ್ಮಸ್ಥಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

ಉಗ್ರಂ ಮಂಜು ಮದುವೆ -

Yashaswi Devadiga
Yashaswi Devadiga Jan 23, 2026 11:08 AM

ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್​​ಬಾಸ್ ಕನ್ನಡ ಸ್ಪರ್ಧಿ ಆಗಿರುವ ಉಗ್ರಂ ಮಂಜು (Ugram Manju) ವೈವಾಹಿಕ ಜೀವನಕ್ಕೆ (ಜ.23) (Marriage) ಕಾಲಿಟ್ಟಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗುರು, ಹಿರಿಯ ಆಶೀರ್ವಾದದೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಧರ್ಮಸ್ಥಳದ (dharmasthala) ಮಹೋತ್ಸವ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಭಾಗಿಯಾಗಿದ್ದರು.

ನಿನ್ನೆ ಗ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ಸರಳವಾಗಿ ನೆರವೇರಿತ್ತು. ಮನೆಯಲ್ಲಿಯೇ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು, ಆಪ್ತರು ಹಾಗೂ ಆತ್ಮೀಯ ಗೆಳೆಯರು ಮಾತ್ರ ಭಾಗವಹಿಸಿದ್ದರು. ಹಳದಿ ಶಾಸ್ತ್ರದ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.

ಇದನ್ನೂ ಓದಿ : Viral News: ಪ್ರೀತಿ, ಮೋಸ, ಮದುವೆ-ತನ್ನ ಜೀವನದಲ್ಲಾದ ಈ ಮೂರು ಅನುಭವವನ್ನು ಬಿಚ್ಚಿಟ್ಟ ಮಹಿಳೆ

ಹುಡುಗಿ ಯಾರು?

ಉಗ್ರಂ ಮಂಜು ಕೈ ಹಿಡಿದ ಹುಡುಗಿ ಹೆಸರು ಸಾಯಿ ಸಂಧ್ಯಾ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್‌ನಲ್ಲಿದ್ದಾರೆ. ಇನ್​ಸ್ಟಾದಲ್ಲಿ Transplant Coordinator ಎಂದು ಬರೆದುಕೊಂಡಿದ್ದಾರೆ.

ಮಂಜು 'ಉಗ್ರಂ' ಸಿನಿಮಾದಿಂದ ಖ್ಯಾತಿ ಪಡೆದಿದ್ದು ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ಕಿರಿಕ್ ಪಾರ್ಟಿ, ಹೀರೋ, ಕಿಡಿ, ಕಿರೀಟ, ರಾನಿ, ದೂರದರ್ಶನ ಸಿನಿಮಾಗ ಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಮ್ಯಾಕ್ಸ್ ಸಿನಿಮಾದಲ್ಲಿ ಉಗ್ರಂ ಮಂಜು ಸೂಪರ್ ಆಗಿ ಆ್ಯಕ್ಟ್ ಮಾಡಿದ್ದರು.

ಇದನ್ನೂ ಓದಿ: Kavya Shaiva: ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದು ಇಷ್ಟ ಆಗಿಲ್ಲ; ಕಾವ್ಯ

ಸುದೀಪ್ ಜೊತೆಗೆಯೇ ‌ ಖಡಕ್ ಆಗಿಯೇ ಡೈಲಾಗ್ ಹೊಡೆದು ಮಿಂಚಿದ್ದರು. ಬೆಂಗಳೂರಿನಲ್ಲಿ ಅದ್ದೂರಿಯಾಗಿ ರಿಸೆಪ್ಶನ್‌ ನಡೆಯಲಿದೆ.ಮದುವೆಯ ಶುಭಾರಂಭಕ್ಕೆ ಸಂಕೇತವಾದ ಅರಿಶಿಣ ಶಾಸ್ತ್ರದಲ್ಲಿ ಸಂಪ್ರದಾಯಿಕ ವೇಸ್ಟಿ ಧರಿಸಿ‌ ಸಿಂಪಲ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು.