ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Urvashi Rautela: ಇದೊಂದು ವಿಚಾರಕ್ಕೆ ಬಾಲಯ್ಯ ನೆನೆದ ಊರ್ವಶಿ ರೌಟೇಲಾ!

Urvashi Rautela: ನಟ-ರಾಜಕಾರಣಿ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ತಮ್ಮ ಬಹಿರಂಗ ಹೇಳಿಕೆಗಳು ಮತ್ತು ಹಲವಾರು ವಿವಾದಾತ್ಮಕ ಕ್ಷಣಗಳಿಗಾಗಿ ಸುದ್ದಿಯಲ್ಲಿ ಇರುತ್ತಾರೆ. 'ಡಾಕು ಮಹಾರಾಜ್' ಚಿತ್ರದ 'ಡಬಡಿ ಡಿಬಿಡಿ' ಹಾಡಿನ ವಿವಾದದ ಬಗ್ಗೆ ನಟಿ ಊರ್ವಶಿ ರೌಟೇಲಾ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ನಂದಮೂರಿ ಬಾಲಕೃಷ್ಣ ಜೊತೆ ಕೆಲಸ ಮಾಡಿದ ಅನುಭವವನ್ನೂ ಹಂಚಿಕೊಂಡಿದ್ದಾರೆ.

ಇದೊಂದು ವಿಚಾರಕ್ಕೆ ಬಾಲಯ್ಯ ನೆನೆದ ಊರ್ವಶಿ ರೌಟೇಲಾ!

ಊರ್ವಶಿ ರೌಟೇಲಾ -

Yashaswi Devadiga
Yashaswi Devadiga May 8, 2026 9:26 AM

ನಟ-ರಾಜಕಾರಣಿ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ತಮ್ಮ ಬಹಿರಂಗ ಹೇಳಿಕೆಗಳು ಮತ್ತು ಹಲವಾರು ವಿವಾದಾತ್ಮಕ ಕ್ಷಣಗಳಿಗಾಗಿ ಸುದ್ದಿಯಲ್ಲಿ ಇರುತ್ತಾರೆ. 'ಡಾಕು ಮಹಾರಾಜ್' (Daaku Maharaaj) ಚಿತ್ರದ 'ಡಬಡಿ ಡಿಬಿಡಿ' ಹಾಡಿನ ವಿವಾದದ ಬಗ್ಗೆ ನಟಿ ಊರ್ವಶಿ ರೌಟೇಲಾ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ನಂದಮೂರಿ ಬಾಲಕೃಷ್ಣ ಜೊತೆ ಕೆಲಸ ಮಾಡಿದ ಅನುಭವವನ್ನೂ ಹಂಚಿಕೊಂಡಿದ್ದಾರೆ.

ಊರ್ವಶಿ ರೌಟೇಲಾ ಹೇಳಿದ್ದೇನು?

ಇತ್ತೀಚೆಗೆ ರೇಡಿಯೋ ನಶಾ ಜೊತೆಗಿನ ಸಂದರ್ಶನದಲ್ಲಿ, ಉರ್ವಶಿ, ಬಾಲಕೃಷ್ಣ ಜೊತೆಗಿನ ತಮ್ಮ 'ಡಾಕು ಮಹಾರಾಜ್' ಚಿತ್ರದ ಬಗ್ಗೆ ಕೇಳಿ ಬಂದ ಟೀಕೆಗಳ ಕುರಿತು ಮಾತನಾಡಿದರು. "ನನಗೆ ಗೊತ್ತಿಲ್ಲ... ಕೆಲವೊಮ್ಮೆ ಒಂದು ವಿಷಯ ಇನ್ನೊಂದು ವಿಷಯಕ್ಕೆ ಕಾರಣವಾಗುತ್ತದೆ, ನಂತರ ಮೂರನೇ ವಿಷಯ, ನಾಲ್ಕನೇ ವಿಷಯ... ಅದು ಹಾಗೆ ಮುಂದುವರಿಯುತ್ತೆ" ಎಂದು ಊರ್ವಶಿ ಹೇಳಿದರು.

ಇದನ್ನೂ ಓದಿ: Love Mocktail 3: ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್‌ ಮಾಕ್ಟೇಲ್‌ 3’

ಚಿತ್ರದ 'ಡಬಡಿ ಡಿಬಿಡಿ' ಹಾಡು ಹಾಗೂ ಅವರ ಜೋಡಿಯ ಬಗ್ಗೆ ಚರ್ಚೆಗೆ ನಾಂದಿ ಹಾಡಿತ್ತು. ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯಿಸಿದ ಊರ್ವಶಿ, ಆನ್‌ಲೈನ್ ಟೀಕೆಗಳ ಹೊರತಾಗಿಯೂ ಈ ಯೋಜನೆಯ ಬಗ್ಗೆ ತಮ್ಮ ಅನುಭವ ಸಕಾರಾತ್ಮಕವಾಗಿದೆ ಎಂದು ಹೇಳಿದರು.

ಬಾಲಕೃಷ್ಣ ಅವರೊಂದಿಗೆ ಕೆಲಸ ಮಾಡಿದ್ದು "ಅದೃಷ್ಟ" ಎಂದು ಹೇಳಿಕೊಂಡಿದ್ದಾರೆ, "ಅವರೊಂದಿಗೆ ಕೆಲಸ ಮಾಡುವುದು ಖಂಡಿತವಾಗಿಯೂ ನಿಜಕ್ಕೂ ಅದ್ಭುತವಾಗಿತ್ತು... ಮತ್ತು ನೀವು ಚಿತ್ರವನ್ನು ನೋಡಿದರೆ, ನಮ್ಮ ಆಕ್ಷನ್ ಸೀಕ್ವೆನ್ಸ್‌ಗಳನ್ನು ಸಹ ವೀಕ್ಷಿಸಿ... ಅದು ನಿಜಕ್ಕೂ ಅದ್ಭುತವಾಗಿದೆ" ಎಂದು ಹೇಳಿದರು.

ನಿಜ ಜೀವನದಲ್ಲಿ ಹಾಗಲ್ಲ ಎಂದರು. ಅವರನ್ನು 'ಮಗುವಿನಂಥ ಮನಸ್ಸಿನವರು' ಮತ್ತು 'ಸೂಪರ್ ಎನರ್ಜಿಟಿಕ್' ಎಂದು ಬಣ್ಣಿಸಿದ ನಟಿ, ಅವರು ತುಂಬಾ ಕರುಣೆ ಮತ್ತು ಸರಳ ವ್ಯಕ್ತಿ ಎಂದು ಹೇಳಿದರು. ಕಳೆದ ವರ್ಷ ವ್ಯಾಲೆಂಟೈನ್ಸ್ ಡೇ ದಿನ ತನಗೆ ಮೊದಲು ವಿಶ್ ಮಾಡಿದ್ದೇ ಬಾಲಕೃಷ್ಣ ಎಂದು ಊರ್ವಶಿ ನೆನಪಿಸಿಕೊಂಡರು.

ಡಾಕು ಮಹಾರಾಜ್ ಜನವರಿ 12, 2025 ರಂದು ಬಿಡುಗಡೆಯಾಯಿತು. ಶ್ರೀಕರ ಸ್ಟುಡಿಯೋಸ್ ಅರ್ಪಿಸುವ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ಗಳ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯ ಅವರು ಭಾರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿತ್ತು.

ಇದನ್ನೂ ಓದಿ: Kannada Serial: ಕಿರುತೆರೆಗೆ ರೀ ಎಂಟ್ರಿ ಕೊಡಲು ಸಜ್ಜಾದ್ರು ಧನುಷ್‌, ಧ್ರುವಂತ್‌!

ಥಮನ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಬಾಬಿ ಡಿಯೋಲ್, ಪ್ರಜ್ಞಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್ ಮತ್ತು ಊರ್ವಶಿ ರೌಟೇಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.