ಉದ್ಯಮಿ ಜೊತೆ ಬ್ರೇಕ್ ಅಪ್, ಕ್ಯಾನ್ಸಲ್ ಆದ ಮದುವೆ; 43 ವರ್ಷವಾದರೂ ತ್ರಿಷಾ ಮದುವೆಯಾಗಿಲ್ಲ ಏಕೆ?
Trisha Krishnan: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ 42 ವರ್ಷವಾದರೂ ಇನ್ನೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಈ ಹಿಂದೆ ಉದ್ಯಮಿಯೊಬ್ಬರ ಜೊತೆ ನಿಶ್ಚಿತಾರ್ಥವಾಗಿದ್ದರೂ ಕೆಲವೇ ದಿನಗಳಲ್ಲಿ ಅದು ಮುರಿದು ಬಿತ್ತು. ಎಂಗೇಜ್‌ಮೆಂಟ್ ಕ್ಯಾನ್ಸ್‌ಲ್ ಆಗಿದ್ದೇಕೆ? ತ್ರಿಷಾ ಹೇಳಿದ್ದೇನು? ಇಲ್ಲಿದೆ ಮಾಹಿತಿ.
ತ್ರಿಷಾ ಕೃಷ್ಣನ್ (ಸಂಗ್ರಹ ಚಿತ್ರ) -
ಚೆನ್ನೈ: ತಮಿಳು ಚಿತ್ರರಂಗದ ಟಾಪ್ ನಟಿ ಎಂದು ಗುರುತಿಸಿಕೊಂಡಿರುವ ತ್ರಿಷಾ ಕೃಷ್ಣನ್ (Trisha Krishnan) ಹೆಸರು ಆಗಾಗ ಸಿಎಂ ಜೋಸೆಫ್ ವಿಜಯ್ (Thalapathy Vijay) ಅವರೊಟ್ಟಿಗೆ ಕೇಳಿಬರುತ್ತಿರುತ್ತದೆ. ಇತ್ತೀಚೆಗೆ ಮಾಜಿ ಡಿಸಿಎಂ ಹಾಗೂ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ತ್ರಿಷಾ ಅವರ ಹೆಸರನ್ನು ವಿಜಯ್ ಜೊತೆ ತಳುಕು ಹಾಕಿದ್ದರು. ಆದರೆ ಈ ಕುರಿತು ತ್ರಿಷಾ ಎಲ್ಲಿಯೂ ಯಾವ ಹೇಳಿಕೆಯನ್ನೂ ನೀಡಿಲ್ಲ. ಸುಮಾರು 23 ವರ್ಷದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ತ್ರಿಷಾ ಈ ವರೆಗೆ ವಿವಾಹವಾಗಿಲ್ಲ. ಉದ್ಯಮಿಯೊಟ್ಟಿಗೆ ನಿಶ್ಚಿತಾರ್ಥವಾಗಿದ್ದರೂ ಅದು ಮದುವೆಯವರೆಗೆ ಹೋಗಲೇ ಇಲ್ಲ. ಇಷ್ಟಪಟ್ಟ ಹುಡುಗನ ಜೊತೆ ನಟಿ ಎಂಗೇಜ್‌ಮೆಂಟ್ ಮುರಿದಿದ್ಯಾಕೆ? ಇಲ್ಲಿದೆ ಡೀಟೇಲ್ಸ್.
2015 ರಲ್ಲಿ ತಮಿಳು ಹಾಗೂ ತಲಗು ಸಿನಿಮಾರಂಗದ ಟಾಪ್ ನಟಿಯಾಗಿದ್ದಾಗಲೇ ತ್ರಿಷಾ ಕೃಷ್ಣನ್ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಘೋಷಿಸಿ ಅಭಿಮಾನಿಗಳಿಗೆ ಆಶ್ಚರ್ಯ ನೀಡಿದ್ದರು. ಚೆನ್ನೈ ಮೂಲದ ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಆ ಮದುವೆ ಕ್ಯಾನ್ಸಲ್ ಆಯಿತು. ರಿಯಲ್ ಎಸ್ಟೆಟ್ ಜೊತೆಗೆ ಸಿನಿಮಾ ಪ್ರೊಡಕ್ಷನ್ ಬಿಸಿನೆಸ್ ನಡೆಸುತ್ತಿದ್ದ ವರುಣ್ ಮಣಿಯನ್ ರೇಡಿಯನ್ಸ್ ಗ್ರೂಪ್ ಒಡೆಯನಾಗಿದ್ದ. ಸೋಶಿಯಲ್ ಮೀಡಿಯಾದಲ್ಲಿ ಗಾಸಿಪ್ ಹರಡತೊಡಗಿತ್ತು.
2015 ರಲ್ಲಿ ಸ್ವತಃ ತ್ರಿಷಾ ಅವರೇ ತಮ್ಮ ಎಂಗೇಜ್‌ಮೆಂಟ್ ವಿಚಾರನ್ನು ಆಫಿಷಿಯಲ್ ಆಗಿ ಅನೌನ್ಸ್ ಮಾಡಿದ್ದರು. ಕಟುಂಬಸ್ಥರ ಸಮ್ಮುಖದಲ್ಲಿ ಜನವರಿ 23 ಕ್ಕೆ ವರುಣ್ ಜೊತೆ ನಿಶ್ಚಿತಾರ್ಥ ನಡೆಯಲಿದೆ ‘ನಾನು ಸಿನಿಮಾ ಮಾಡುವುದನ್ನು ನಿಲ್ಲಿಸುವುದಿಲ್ಲಾ, ಹೊಸ ಪ್ರಾಜೆಕ್ಟ್‌ಗಳಿಗೆ ಸೈನ್ ಮಾಡ್ತೀನಿ’ ಎಂದು ಸ್ಪಷ್ಟವಾಗಿ ಹೇಳಿದ್ದರು. ನಿಶ್ಚಿತಾರ್ಥವಾಗಿ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಬಿರುಕು ಮೂಡಿ ದೂರವಾಗಿದ್ದರು.
ತ್ರಿಷಾ ಮದುವೆ ಕ್ಯಾನ್ಸಲ್ ಆಗಲು ಕಾರಣವೇನು?
ವರುಣ್ ಜೊತೆಗಿನ ಮದುವೆ ಕ್ಯಾನ್ಸಲ್ ಆಗಿದ್ದೆಕೇ ಎಂಬ ಸತ್ಯವನ್ನು ತ್ರಿಷಾ ಅವರೇ ಆಮೇಲೆ ರಿವೀಲ್ ಮಾಡಿದ್ದರು. ‘ನಾನೀಗ ಹ್ಯಾಪಿ, ಸಿಂಗಲ್ ಆಂಡ್ ಥ್ಯಾಂಕ್‌ಫುಲ್’ ಅಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಕೆಲ ದಿನಗಳ ಬಳಿಕ ಸಂದರ್ಶನವೊಂದಲ್ಲಿ ಬ್ರೇಕ್‌ಅಪ್‌ಗೆ ನಿಜವಾದ ಕಾರಣವನ್ನು ರಿವೀಲ್ ಮಾಡಿದ್ದರು. ‘ನಾನು ಮದುವೆಯಾಗಬೇಕಿದ್ದ ವ್ಯಕ್ತಿ ಆಕ್ಟಿಂಗ್ ಬಿಡು ಅಂದರು ಅದಕ್ಕೆ ಸಿನಿಮಾಗೆ ಫುಲ್‌ಸ್ಟಾಪ್ ಇಡೋ ಬದಲು ಮದುವೆಯನ್ನೇ ರದ್ದು ಮಾಡಿದೆವು. ನನ್ನ ಕೊನೆ ಉಸಿರಿರೋವರೆಗೂ ಆಕ್ಟಿಂಗ್ ಮಾಡ್ತೀನಿ ಎಂದು ಸಿನಿಮಾ ಮೇಲಿನ ಪ್ರೀತಿ ಎಷ್ಟಿದೆ ಎಂಬುದನ್ನು ಹೇಳಿದ್ದರು.
Trisha Krishnan: ಉದಯನಿಧಿ ವಿವಾದಾತ್ಮಕ ಹೇಳಿಕೆ; ತ್ರಿಷಾಗೆ ಹರಿದುಬಂದ ಬೆಂಬಲ
ಸದ್ಯ ವಿಜಯ್ ಹಾಕಿದ್ದ ಡಿವೋರ್ಸ್ ಅರ್ಜಿ ಹಿಂಪಡೆದಿದ್ದು, ಮತ್ತೆ ತ್ರಿಷಾ ಮದುವೆ ಸುದ್ದಿ ಮುನ್ನೆಲೆಗೆ ಬಂದಿದೆ. ಈ ಹಿಂದೆ ಸಂಗೀತಾ ವಿಜಯ್‌ಗೆ ಖ್ಯಾತ ನಟಿಯೊಬ್ಬರ ಜೊತೆ ಅಫೇರ್ ಇದೆ, ನಾನು ಇದರಿಂದ ಮಾನಸಿಕವಾಗಿ ನೊಂದಿದ್ದೇನೆ ಎಂದು ಹೇಳಿದ್ದರು. ಇದಕ್ಕೆ ಪುಷ್ಠಿ ಎನ್ನುವಂತೆ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ಆಗಾಗ ಕಾಣಿಸಿಕೊಂಡಿರುವುದು ಮತ್ತಷ್ಟು ಅನುಮಾನ ಹೆಚ್ಚಿಸಿತ್ತು. ಏನೇ ಇರಲಿ 42 ವರ್ಷವಾದರೂ ತ್ರಿಷಾಗೆ ಅಭಿಮಾನಿ ಬಳಗ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅದೇ ಸೌಂದರ್ಯವನ್ನು ಕಾಪಾಡಿಕೊಂಡು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.