ಬಿಗ್ ಬಜೆಟ್ ʻಟಾಕ್ಸಿಕ್ʼ ಸಿನಿಮಾದಲ್ಲಿ ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು? ಯಶ್ ಚಾರ್ಜ್ ಮಾಡಿದ್ದೆಷ್ಟು ಕೋಟಿ?
Toxic Movie Cast Remuneration: ಯಶ್ ನಟನೆಯ ʻಟಾಕ್ಸಿಕ್ʼ ಸಿನಿಮಾದ ಕಲಾವಿದರ ಸಂಭಾವನೆಯ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ರಾಕಿಂಗ್ ಸ್ಟಾರ್ ಯಶ್ ಅವರು ಈ ಸಿನಿಮಾಕ್ಕಾಗಿ 50 ಕೋಟಿ ಜೊತೆಗೆ ಲಾಭದ ಪಾಲು ಪಡೆಯಲಿದ್ದಾರೆ.
-
'ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾವು ಕೊನೆಗೂ ತೆರೆಕಂಡಿದೆ. ಈ ಸಿನಿಮಾದಲ್ಲಿ ಯಶ್ ಜೊತೆಗೆ ಐವರು ಜನಪ್ರಿಯ ನಟಿಯರು ಬಣ್ಣ ಹಚ್ಚಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಿರುವ ಕಲಾವಿದರು ಎಷ್ಟು ಸಂಭಾವನೆ ಪಡೆದುಕೊಂಡಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಯಶ್ ಅವರೊಂದಿಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಇವರಿಗೆ ಸಿಕ್ಕ ಸಂಭಾವನೆ ಎಷ್ಟು ಎಂಬ ವಿವರ ಇಲ್ಲಿದೆ.
ಯಶ್‌ಗೆ ಸಿಕ್ಕ ಸಂಭಾವನೆ ಎಷ್ಟು?
ಈ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರರಾಗಿರುವ ನಟ ಯಶ್, ನಟನೆಗಾಗಿ ಬರೋಬ್ಬರಿ ₹50 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ನಟನೆಯ ಜೊತೆಗೆ ಅವರು ಈ ಚಿತ್ರಕ್ಕೆ ಸಹ-ಬರಹಗಾರರಾಗಿ ಮತ್ತು ಸಹ-ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದು, ಬರುವ ಲಾಭದಲ್ಲೂ ಅವರಿಗೆ ಪಾಲು ಸಿಗಲಿದೆ.
ಕಿಯಾರಾ ಅಡ್ವಾಣಿಗೆ ಭರ್ಜರಿ ಸಂಭಾವನೆ
ಮೂಲಗಳ ಪ್ರಕಾರ, 'ಟಾಕ್ಸಿಕ್' ಚಿತ್ರಕ್ಕಾಗಿ ಕಿಯಾರಾ ಅಡ್ವಾಣಿ ಅವರಿಗೆ ₹15 ಕೋಟಿ ಸಂಭಾವನೆ ನೀಡಲಾಗಿದೆ. ಚಿತ್ರದಲ್ಲಿ ಅವರು ನಾಡಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿಯರ ಪೈಕಿ ಕಿಯಾರಾ ಅವರಿಗೆ ಅತಿ ಹೆಚ್ಚು ಸಂಭಾವನೆ ಸಂದಿದೆ ಎಂಬ ಮಾಹಿತಿಯಿದೆ.
ನಯನತಾರಾಗೆ ಸಿಕ್ಕಿದ್ದೆಷ್ಟು?
ನಯನತಾರಾ ಅವರಿಗೆ ಸಿಕ್ಕ ನಿಖರ ಸಂಭಾವನೆ ಬಹಿರಂಗವಾಗಿಲ್ಲವಾದರೂ, ವರದಿಗಳ ಪ್ರಕಾರ ₹12 ರಿಂದ ₹18 ಕೋಟಿಯ ಆಸುಪಾಸಿನಲ್ಲಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇವರು ಈ ಚಿತ್ರದಲ್ಲಿ ಯಶ್ ಅವರ ಅಕ್ಕ 'ಗಂಗಾ' ಪಾತ್ರವನ್ನು ನಿರ್ವಹಿಸಿದ್ದಾರೆ.
Toxic Review: ಮಗರಾಯನ ಜೊತೆ ʻರಾಯʼನ ಮಾನಸಿಕ ಸಮರ; 'ಟಾಕ್ಸಿಕ್'ನಲ್ಲಿ ಆದಿಯಿಂದ ಅಂತ್ಯದವರೆಗೂ ಎಲ್ಲವೂ ಅಬ್ಬರ!
ತಾರಾ ಸುತಾರಿಯಾಗೆ ಸಿಕ್ಕ ಮೊತ್ತ
'ಟಾಕ್ಸಿಕ್' ಚಿತ್ರದಲ್ಲಿ ರೆಬೆಕಾ ಪಾತ್ರದಲ್ಲಿ ಬಾಲಿವುಡ್ ನಟಿ ತಾರಾ ಸುತಾರಿಯಾ ಅಭಿನಯಿಸಿದ್ದಾರೆ. ವರದಿಗಳ ಪ್ರಕಾರ, ತಮ್ಮ ಪಾತ್ರಕ್ಕಾಗಿ ಅವರು ₹2 ರಿಂದ ₹3 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬುದು ಮೂಲಗಳ ಮಾಹಿತಿ.
ಹುಮಾ - ರುಕ್ಮಿಣಿ ಸಂಭಾವನೆ
ಈ ಚಿತ್ರದಲ್ಲಿ ಎಲಿಜಬೆತ್ ಎಂಬ ಆಕರ್ಷಕ ಪಾತ್ರವನ್ನು ಹುಮಾ ಖುರೇಷಿ ನಿರ್ವಹಿಸಿದ್ದು, ಅವರಿಗೆ ₹2 ರಿಂದ ₹3 ಕೋಟಿ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ. ಇನ್ನು, ನಟಿ ರುಕ್ಮಿಣಿ ವಸಂತ್ ಚಿತ್ರದಲ್ಲಿ ಮೆಲಿಸಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಸಂಭಾವನೆ ₹3 ರಿಂದ ₹5 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ ಈ ಯಾವುದೇ ಅಂಕಿ-ಅಂಶಗಳು ಅಧಿಕೃತವಾಗಿ ದೃಢಪಟ್ಟಿಲ್ಲವಾಗಿದ್ದು, ಚಿತ್ರತಂಡದಿಂದ ಈ ಕುರಿತು ಅಧಿಕೃತ ಮಾಹಿತಿ ಹೊರಬರಬೇಕಿದೆ.