ನೀರಿನ ಟ್ಯಾಂಕ್‌ಗೆ ಹಾರುವ ಮೊದಲು ಪುಟಾಣಿ ಮಕ್ಕಳಿಗೆ ವಿಷ ಕುಡಿಸಿದ ತಾಯಿ; ದುರಂತಕ್ಕೂ ಮುನ್ನ ನಡೆದಿದ್ದೇನು? ಹೃದಯ ವಿದ್ರಾವಕ ವಿಡಿಯೊ ವೈರಲ್
Crime News: 31 ವರ್ಷದ ಅಂಗನವಾಡಿ ಕಾರ್ಯಕರ್ತೆ ಸುದೇಶ್ ತಮ್ಮ ಇಬ್ಬರು ಮಕ್ಕಳಿಗೆ ವಿಷ ನೀಡಿದ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹರಿಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಸುದೇಶ್ ಅವರ 9 ವರ್ಷದ ಪುತ್ರಿ ಜ್ಯೋತಿ ಮತ್ತು 8 ವರ್ಷದ ಪುತ್ರ ವಿನೀತ್ ಮೃತದೇಹಗಳು ಪತ್ತೆಯಾಗಿವೆ. ಸದ್ಯ ಸುದೇಶ್ ಮಕ್ಕಳಿಗೆ ವಿಷ ಕುಡಿಸುತ್ತಿರುವ ವಿಡುಒ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ -
ಚಂಡೀಗಢ, ಆ. 10: 31 ವರ್ಷದ ಅಂಗನವಾಡಿ ಕಾರ್ಯಕರ್ತೆ ಸುದೇಶ್ ತಮ್ಮ ಇಬ್ಬರು ಮಕ್ಕಳಿಗೆ ವಿಷ (Children Poisoned) ನೀಡಿದ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹರಿಯಾಣದ (Haryana) ಫತೇಹಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಆಗಸ್ಟ್ 6ರಂದು ಮೆಹುವಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಕೆಯ ಪತಿ ಸಂದೀಪ್‌ನನ್ನು ಬಂಧಿಸಲಾಗಿದೆ. ಸದ್ಯ ಆಕೆ ಮಕ್ಕಳಿಗೆ ವಿಷ ಕುಡಿಸುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಘಟನೆಯ ಬಳಿಕ ಸುದೇಶ್ ಅವರ 9 ವರ್ಷದ ಪುತ್ರಿ ಜ್ಯೋತಿ ಮತ್ತು 8 ವರ್ಷದ ಪುತ್ರ ವಿನೀತ್ ಮೃತದೇಹಗಳು ಪತ್ತೆಯಾಗಿವೆ. ಆರಂಭದಲ್ಲಿ ಈ ಪ್ರಕರಣವನ್ನು ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿತ್ತು.
ಸುದೇಶ್ ಅವರ ಮೊಬೈಲ್‌ನಿಂದ ಪತ್ತೆಯಾದ ನಾಲ್ಕು ವಿಡಿಯೊಗಳು ದುರಂತಕ್ಕೂ ಮುನ್ನ ನಡೆದ ಘಟನೆಗಳ ಕುರಿತು ಸುಳಿವು ನೀಡಿವೆ. ಆ ವಿಡಿಯೊಗಳಲ್ಲಿ ಸುದೇಶ್ ಮಕ್ಕಳಿಗೆ ವಿಷ ಬೆರೆಸಿದ ಪಾನೀಯವನ್ನು ನೀಡುತ್ತಿರುವುದು, ಬಳಿಕ ಮಕ್ಕಳನ್ನು ಮನೆಯೊಳಗಿನ ನೀರಿನ ಟ್ಯಾಂಕ್ ಬಳಿಗೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ.
ಮಕ್ಕಳಿಗೆ ವಿಷ ಕುಡಿಸಿದ ತಾಯಿಯ ವಿಡಿಯೊ ಇಲ್ಲಿದೆ:
हरियाणा के फतेहाबाद में दर्दनाक घटना, मां ने दो बच्चों को जहर देने के बाद खुद भी जहर खाया; तीनों की मौत pic.twitter.com/p19NW4iyT1
— Lokmanchtoday (@lokmanchtoday) August 10, 2026
ಸುದೇಶ್ ಇಬ್ಬರೂ ಮಕ್ಕಳನ್ನು ಮುದ್ದಿಸಿ, ತಲೆಗೆ ಮುತ್ತಿಕ್ಕಿ, ಬಹಳ ಹೊತ್ತು ಮಾತನಾಡಿದ್ದಾಳೆ. ನಂತರ ವಿಷ ತುಂಬಿದ ಪಾನೀಯ ನೀಡಿ, ಬಲವಂತವಾಗಿ ಕುಡಿಸಿದ್ದಾಳೆ. 4 ವಿಡಿyoಗಳು ಕ್ರಮವಾಗಿ 4 ನಿಮಿಷ 15 ಸೆಕೆಂಡ್, 32 ಸೆಕೆಂಡ್, 4 ನಿಮಿಷ 23 ಸೆಕೆಂಡ್ ಮತ್ತು 2 ನಿಮಿಷ 27 ಸೆಕೆಂಡ್ ಅವಧಿ ಹೊಂದಿವೆ.
ಕೆಲಸಕ್ಕೆ ಸೇರಿದ ನಾಲ್ಕೇ ದಿನಕ್ಕೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಸೆಕ್ಯೂರಿಟಿ ಗಾರ್ಡ್
ಮಕ್ಕಳು ಪಾನೀಯವನ್ನು ಕುಡಿಯುವಂತೆ ಮಾಡಲು ಸುದೇಶ್ ಪ್ರಯತ್ನಿಸುತ್ತಿರುವಾಗ ಅವರು ಅಳುವುದು ಮತ್ತು ವಿರೋಧಿಸುವುದನ್ನು ವಿಡಿಯೊಗಳು ಸೆರೆಹಿಡಿದಿವೆ. ಆಕೆಯ ಸಾವಿಗೆ ಸ್ವಲ್ಪ ಮೊದಲು ಮಾಡಿದ ಮತ್ತೊಂದು ರೆಕಾರ್ಡಿಂಗ್‌ನಲ್ಲಿ, ಸುದೇಶ್ ತನ್ನ ದಾಂಪತ್ಯದಲ್ಲಿ ಎದುರಿಸಿದ ಸಂಕಷ್ಟದ ಬಗ್ಗೆ ವಿವರಿಸಿದ್ದಾಳೆ. ತನ್ನ ಕೊನೆಯ ವಿಡಿಯೊದಲ್ಲಿ, ʼʼನೀವು ನನ್ನನ್ನು ಏಕೆ ಹಿಂಸಿಸಿದ್ದೀರಿ? ಈಗ ಅದರ ಪರಿಣಾಮಗಳನ್ನು ನೋಡಿʼʼ ಎಂದು ಪತಿಯಲ್ಲಿ ಹೇಳಿದ್ದಾಳೆ.
ಸುದೇಶ್ ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಆಕೆಯ ಪತಿ ಮಾದಕ ವ್ಯಸನಿಯಾಗಿದ್ದರಿಂದ ದೀರ್ಘಕಾಲದಿಂದ ಸಮಸ್ಯೆ ಎದುರಾಗಿತ್ತು. ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪತಿಯ ಕಿರುಕುಳವೇ ಸುದೇಶ್ ಆತ್ಮಹತ್ಯೆ ಮಾಡಲು ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಟುಂಬಸ್ಥರ ದೂರಿನ ನಂತರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸುದೇಶ್ ಪತಿ ಸಂದೀಪ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ಭಾಗವಾಗಿ ಅಧಿಕಾರಿಗಳು ವಿಡಿಯೊಗಳು ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣವು ಮೆಹುವಾಲಾ ಗ್ರಾಮದ ಜತೆಗೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ವಿಡಿಯೊ ನೋಡಿದ ಪ್ರತಿಯೊಬ್ಬರೂ ಮರುಗುತ್ತಿದ್ದಾರೆ.