ಮದುವೆ ಆಗಲು 2 ವರ್ಷ ಕಾಯುವಂತೆ ಹೇಳಿದ ಮನೆಯವರು; ಮನನೊಂದು 19 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆ
19 ವರ್ಷದ ಯುವಕನೊಬ್ಬ ಮದುವೆಗೆ ಇನ್ನೆರಡು ವರ್ಷ ಕಾಯಲು ಸಾಧ್ಯವಾಗದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಮದುವೆಗೆ ಸಂಬಂಧಿಸಿದ ಮಾನಸಿಕ ಒತ್ತಡ ಮತ್ತು ಆತಂಕದಿಂದ ಬಳಲುತ್ತಿದ್ದ ಯುವಕನ ಈ ಕೃತ್ಯ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಸಾಂದರ್ಭಿಕ ಚಿತ್ರ -
ಮುಂಬೈ, ಡಿ. 2: ಕಾನೂನು ಪ್ರಕಾರ ಗಂಡು ಮಕ್ಕಳು 21ನೇ ವಯಸ್ಸಿಗೆ ಮದುವೆಯಾಗಬಹುದು. ಆದರೆ ಇಲ್ಲೊಬ್ಬ 19 ವರ್ಷದ ಯುವಕ ಇನ್ನೆರಡು ವರ್ಷ ಕಾಯಲು ಸಾಧ್ಯವಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಮದುವೆಯನ್ನು ಮುಂದೂಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆ ನವೆಂಬರ್ 30ರಂದು ಡೊಂಬಿವ್ಲಿ ಪ್ರದೇಶದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಯುವಕ ತನ್ನ ಊರಿನ ಹುಡುಗಿಯನ್ನು ಪ್ರೀತಿಸುತ್ತಿದ್ದ ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದ. ಆದರೆ ಆತನ ಕುಟುಂಬವು ಮದುವೆಗೆ ಕಾನೂನುಬದ್ಧವಾಗಿ ಅನುಮತಿಸಲಾದ 21 ವರ್ಷವನ್ನು ತಲುಪುವವರೆಗೆ ಕಾಯುವಂತೆ ಕೇಳಿಕೊಂಡಿತ್ತು. ಇದು ಅವನಿಗೆ ಭಾವನಾತ್ಮಕ ಯಾತನೆಯನ್ನು ಉಂಟು ಮಾಡಿತ್ತು ಎಂದು ಮನ್ಪಾಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಡಿಗೆ ಮನೆಯಲ್ಲಿ ಇದ್ದ ದಂಪತಿ ಶವವಾಗಿ ಪತ್ತೆ
ನವೆಂಬರ್ 30ರಂದು ಈ ಯುವಕ ತನ್ನ ಮನೆಯ ಛಾವಣಿಗೆ ಸ್ಕಾರ್ಫ್ ಕಟ್ಟಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ನೇಣು ಬಿಗಿದಿದ್ದನ್ನು ನೋಡಿದ ಕೂಡಲೇ ಕುಟುಂಬಸ್ಥರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಯುವಕ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು. ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯೊಂದಿಗೆ ಅಕ್ರಮ ಸಂಬಂಧ: ಸ್ನೇಹಿತನ ಕೊಲೆ
ರಾಜಸ್ಥಾನದ ಭಿಲ್ವಾರಾ ನಗರದ ಪೊಲೀಸರು ಸಂಕೀರ್ಣ ಕೊಲೆ ಪ್ರಕರಣವೊಂದನ್ನು ಭೇದಿಸಿದ್ದಾರೆ. ಸದರ್ ಪೊಲೀಸ್ ಠಾಣೆ ಪ್ರದೇಶದ ಇಂದಿರಾ ವಿಹಾರ್ ಕಾಲೋನಿಯ ಪೊದೆಗಳಲ್ಲಿ ರಕ್ತದಲ್ಲಿ ಮುಳುಗಿದ್ದ ವ್ಯಕ್ತಿಯ ಶವ ಪತ್ತೆಯಾಗಿತ್ತು. ತನಿಖೆ ಕೈಗೊಂಡ ಬಳಿಕ ಭಿಲ್ವಾರಾ ಜಿಲ್ಲೆಯ ಸದರ್ ಪೊಲೀಸ್ ಠಾಣೆ ಪೊಲೀಸರು ಮೃತನ ಸ್ನೇಹಿತನನ್ನು ಬಂಧಿಸಿದ್ದಾರೆ. ಸ್ನೇಹಿತನಿಗೆ ಪತ್ನಿಯೊಂದಿಗೆ ಅಕ್ರಮ ಸಂಬಂಧವಿತ್ತು. ಇದರಿಂದ ಕೋಪಗೊಂಡ ವ್ಯಕ್ತಿ ತನ್ನ ಸ್ನೇಹಿತನನ್ನು ಟ್ರ್ಯಾಕ್ಟರ್ ಹತ್ತಿಸಿ ಕೊಂದಿದ್ದಾನೆ. ಪ್ರಸ್ತುತ, ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ಕೈಲಾಶ್ ಕುಮಾರ್ ಬಿಷ್ಣೋಯ್ ಪ್ರಕರಣದ ಕುರಿತಾಗಿ ಮಾತನಾಡಿ, ಭಿಲ್ವಾರದ ಇಂದಿರಾ ವಿಹಾರ್ ಕಾಲೋನಿಯ ರಸ್ತೆಬದಿಯಲ್ಲಿ ಶವ ಪತ್ತೆಯಾಗಿದೆ ಎಂಬ ವರದಿ ಬಂತು. ಕೂಡಲೇ ನಾವು ಸ್ಥಳಕ್ಕೆ ಆಗಮಿಸಿ, ಎಫ್‌ಎಸ್‌ಎಲ್ ಸೇರಿದಂತೆ ಇತರ ತಂಡಗಳನ್ನು ಕರೆಸಿ, ಘಟನಾ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿದ್ದೇವೆ. ಮೃತದೇಹದ ಬಳಿ ಸ್ಕೂಟರ್ ಕೂಡ ನಿಂತಿರುವುದು ಕಂಡುಬಂದಿದ್ದು, ಮೃತನ ತಲೆಯ ಮೇಲೆ ಗಾಯದ ಗುರುತುಗಳಿದ್ದವು. ಮೃತನನ್ನು ಭಿಲ್ವಾರದ ತಿಲಕ್ ನಗರದ ನಿವಾಸಿ ಚಿತ್ತರ್ ಸಿಂಗ್ ಅವರ ಪುತ್ರ 45 ವರ್ಷದ ಮಹೇಂದ್ರ ಎಂದು ಗುರುತಿಸಲಾಗಿದೆ.
ಆರೋಪಿ ರಾಮೇಶ್ವರ ಮತ್ತು ಮೃತ ಮಹೇಂದ್ರ ಸ್ನೇಹಿತರಾಗಿದ್ದರು. ಕಳೆದ ಏಳು ವರ್ಷಗಳಿಂದ ಡೈರಿ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಮೃತ ಮಹೇಂದ್ರ ಕೆಲವು ಸಮಯಗಳಿಂದ ರಾಮೇಶ್ವರ ಅವರ ಪತ್ನಿಯೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿಕೊಂಡಿದ್ದ. ಹೀಗಾಗಿ ರಾಮೇಶ್ವರ್ ತನ್ನ ಸ್ನೇಹಿತ ಮಹೇಂದ್ರನನ್ನು ಹತ್ಯೆ ಮಾಡಿದ್ದಾನೆ.