Guruvayur temple: ಗುರುವಾಯೂರು ದೇಗುಲದಲ್ಲಿ 444 ಜೋಡಿ ಮದುವೆ
ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ಭಾನುವಾರ ಒಂದೇ ದಿನ 444 ಜೋಡಿಯ ಮದುವೆಗಳು ನಡೆದಿವೆ. ಇದು ದೇವಸ್ಥಾನದ ಇತಿಹಾಸದ ಹೊಸ ದಾಖಲೆ ಯಾಗಿದೆ. ಇದಕ್ಕೂ ಮುನ್ನ 2024ರ ಸೆಪ್ಟೆಂಬರ್ 8ರಂದು ಒಂದೇ ದಿನ 344 ಮದುವೆಗಳು ನಡೆದಿದ್ದು ಹಿಂದಿನ ದಾಖಲೆಯಾಗಿತ್ತು.
-
Ashok Nayak
Aug 24, 2026 8:17 AM
ತಿರುವನಂತಪುರಂ: ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ಭಾನುವಾರ ಒಂದೇ ದಿನ 444 ಜೋಡಿಯ ಮದುವೆಗಳು ನಡೆದಿವೆ. ಇದು ದೇವಸ್ಥಾನದ ಇತಿಹಾಸದ ಹೊಸ ದಾಖಲೆ ಯಾಗಿದೆ. ಇದಕ್ಕೂ ಮುನ್ನ 2024ರ ಸೆಪ್ಟೆಂಬರ್ 8ರಂದು ಒಂದೇ ದಿನ 344 ಮದುವೆಗಳು ನಡೆದಿದ್ದು ಹಿಂದಿನ ದಾಖಲೆಯಾಗಿತ್ತು.