ನೀಟ್ ಪ್ರತಿಭಟನೆ ಬಳಿಕ ಮತ್ತೊಂದು ಹೋರಾಟಕ್ಕೆ ಸಜ್ಜಾದ ಅಭಿಜಿತ್ ದೀಪ್ಕೆ; ಸರ್ಕಾರಿ ಶಾಲೆಗಳ ದುಸ್ಥಿತಿ ಕುರಿತು ಹೇಳಿದ್ದೇನು?
ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ ಇದೀಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ದುಸ್ಥಿಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಪ್ರಶ್ನಿಸಿರುವ ಅವರು, ಶಾಲೆಗಳಲ್ಲಿ ಮೂಲಭೂತ ಸೌಕರ್ಯವಿಲ್ಲದಿರುವುದರ ಕುರಿತು ಟೀಕಿಸಿದರು.
ಅಭಿಜಿತ್ ದೀಪ್ಕೆ (ಸಂಗ್ರಹ ಚಿತ್ರ) -
ಮುಂಬೈ: ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷಾ ಅಕ್ರಮ ಹಾಗೂ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಸತತ ಹೋರಾಟ ನಡೆಸಿ ದೇಶದ ಗಮನ ಸೆಳೆದಿದ್ದ ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ, (Abhijeet Dipke)ಮತ್ತೊಂದು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಗ್ರಾಮೀಣ ಶಾಲೆಗಳ ದುಸ್ಥಿತಿ ಕುರಿತು ಶಾಲೆಗಳನ್ನು ಉಳಿಸಲು ಯೋಜನೆ ರೂಪಿಸಿರುವ ದೀಪ್ಕೆ, ಸ್ವಾತಂತ್ರ್ಯ ಬಂದು 80 ವರ್ಷಗಳು ಕಳೆದರೂ ದೇಶದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು(Government School) ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೀಗ ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ತಮ್ಮ ಹುಟ್ಟೂರಾದ ಮಹಾರಾಷ್ಟದ ಹಿಂಗೋಲಿ ಜಿಲ್ಲೆಯಿಂದ ‘ಸರ್ಕಾರಿ ಶಾಲೆಗಳನ್ನ ಸರಿಪಡಿಸಿ’ ಅಭಿಯಾನವನ್ನ ಪ್ರಾಂಭಿಸಿದ್ದಾರೆ. ಅಭಿಯಾನದ ಕುರಿತು ಮಾತನಾಡಿ ಅಭಿಜಿತ್ ದೀಪ್ಕೆ, ‘ದೇಶದಲ್ಲಿ ದೊಡ್ಡ ದೊಡ್ಡ ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿ ಹಣ ವೆಚ್ಚ ಮಾಡುವ ಸರ್ಕಾರಗಳು, ಗ್ರಾಮೀಣ ಭಾಗದ ಮಕ್ಕಳ ಮೂಲಭೂತ ಶಿಕ್ಷಣದ ಹಕ್ಕನನ್ನು ನಿರ್ಲಕ್ಷಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಸರಿಯಾದ ತರಗತಿ ಕೊಠಡಿಗಳು ಹಾಗೂ ಮುಖ್ಯವಾಗಿ ಹೆಣ್ಣುಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯೂ ಇಲ್ಲದಿರುವುದು ಅತ್ಯಂತ ಖಂಡನೀಯ ಎಂದು ಅವರು ಸರ್ಕಾರಗಳ ಖಾರ್ಯವೈಖರಿಯನ್ನು ದೂಷಿಸಿದರು.
ಗ್ರಾಮಸ್ಥರು ಹಾಗೂ ಪೋಷಕರು ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸುವುದಷ್ಟೇ ಅಲ್ಲ, ಸ್ವತಃ ತಾವೇ ಶಾಲೆಗೆ ಭೇಟಿ ನೀಡಿ ಅಲ್ಲಿನ ಕುಡಿಯುವ ನೀರು, ಬಿಸಿಊಟ, ವಿದ್ಯುತ್ ಮತ್ತು ನೈರ್ಮಲ್ಯದ ಸ್ಥಿತಿಯನ್ನು ಪರಿಶೀಲಿಸಿಬೇಕು. ಸರ್ಕಾರಿ ಶಾಲೆಗಳಲ್ಲಿನ ಕೊರತೆಗಳುನ್ನು ಪ್ರಶ್ನಿಸುವ ಜಾಗೃತಿಯನ್ನು ಪೋಷಕರಲ್ಲಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಆದ್ಯತೆ ಎಂದು ಹೇಳಿದರು. ರಾಜಕೀಯ ಕಾರ್ಯಕ್ರಮಗಳು ಮತ್ತು ಪ್ರಚಾರಕ್ಕಾಗಿ ಮಾಡುವ ಭಾರಿ ವೆಚ್ಚಗಳ ಕುರಿತು ಅಭಿಜಿತ್ ದೀಪ್ಕೆ ರಾಜಕೀಯ ನಾಯಕರನ್ನು ಪ್ರಶ್ನಿಸಿದ್ದಾರೆ.
ಛತ್ರಪತಿ ಸಂಭಾಜಿನಗರದಲ್ಲಿ ನಡೆದ ತಿರಂಗಾ ರ‍್ಯಾಲಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾಗವಹಿಸಿದ್ದರು. ಅವರ ಸ್ವಾಗತಕ್ಕಾಗಿ ರ‍್ಯಾಲಿ ವೇಳೆ ಬೃಹತ್ ಬ್ಯಾನರ್‌ಗಳನ್ನ ಹಾಕಲಾಗಿತ್ತು. ಇದನ್ನ ಪ್ರಶ್ನಿಸಿ, ರ‍್ಯಾಲಿ ಮಾಡುವುದು ಸರಿಯೇ ಆದರೆ, 40-50 ಅಡಿಯಷ್ಟು ದೊಡ್ಡ ದೊಡ್ಡ ಬ್ಯಾನರ್‌ಗಳಿಗೆ ಲಕ್ಷ-ಲಕ್ಷ ಹಣ ವ್ಯಯಿಸುವುದು ಎಷ್ಟು ಸರಿ, ಇದೇ ಹಣದಲ್ಲಿ ಗ್ರಾಮೀಣ ಶಾಲೆಗಳ ದುರಸ್ಥಿ ಕಾರ್ಯವನ್ನು ಮಾಡಬಹುದು ಎಂದು ಟೀಕಿಸಿದರು.
ಜಂತರ್ ಮಂತರ್‌ನಲ್ಲಿ ಸೀಸನ್ 2 ಹೋರಾಟ ಶೀಘ್ರದಲ್ಲೇ ಪ್ರಾರಂಭ: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಸುಳಿವು
ಪ್ರತಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ವ್ಯಾಪ್ತಿಗೆ ಒಳಪಡುವ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು. ತಮ್ಮ ಗ್ರಾಮದ ಶಾಲಾ ಸೌಕರ್ಯಗಳನ್ನು ಸಂಪೂರ್ಣವಾಗಿ ಸುಧಾರಿಸುವ ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸುವ ಗ್ರಾಮ ಸಭೆಗಳನ್ನು ಮಾಡಬೇಕು. ಸರ್ಪಂಚರನ್ನು ಅಭಿಯಾನದ ವತಿಯಿಂದ ಗುರುತಿಸಿ ಸನ್ಮಾನಿಸಲಾಗುವುದು ಎಂದು ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ತಿಳಿಸಿದರು.
ರಾಜಕೀಯ ಆದ್ಯತೆಗಳ ಬದಲಾವಣೆಗೆ ಆಗ್ರಹ
ಪ್ರಸ್ತುತ ದೇಶದಲ್ಲಿ ರಾಜಕೀಯ ರ‍್ಯಾಲಿಗಳು, ನಾಯಕರ ಪ್ರಚಾರ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕೆ ನೀಡುವ ಆದ್ಯತೆನ್ನು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಾಲೆಗಳಿಗೆ ನೀಡಬೇಕು. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸೋಶೀಯಲ್ ಮೀಡಿಯಾದಲ್ಲಿ ‘ಸ್ಕೂಲ್ ಠೀಕ್ ಕರೊ’ ಹ್ಯಾಶಟ್ಯಾಗ್ ಅಡಿಯಲ್ಲಿ ದೇಶದ ನಾನಾ ಭಾಗಗಳ ಶಾಲಾ ಸೌಕರ್ಯಗಳ ವೀಡಿಯೋಗಳು ಹಾಗೂ ಫೋಟೋಗಳು ವೈರಲ್ ಅಗುತ್ತಿದ್ದು, ಶಾಲಾ ಶಿಕ್ಷಣದ ಸುಧಾರಣೆಗೆ ಇದೊಂದು ಬಲವಾದ ಜನಾಂದೋಲನವಾಗಿದೆ.