ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅರುಣಾಚಲ ಪ್ರದೇಶದಲ್ಲಿ ಭೀಕರ ಪ್ರವಾಹ, ಭೂಕುಸಿತ: 5 ಸೇನಾ ಸಿಬ್ಬಂದಿ ನಾಪತ್ತೆ, 4 ಕಾರ್ಮಿಕರ ದುರ್ಮರಣ

landslides in Arunachal Pradesh: ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಐವರು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದು, ಕನಿಷ್ಠ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಅಪ್ಪರ್ ಸುಬನ್ಸಿರಿಯಲ್ಲಿರುವ ಕಿಯೋಜರಿಂಗ್-ಬೈಚಿಂಗ್ ರಸ್ತೆಯ ಅಗೆಯುವ ಸ್ಥಳದಲ್ಲಿ ಭೂಕುಸಿತ ಸಂಭವಿಸಿದೆ.

ಅರುಣಾಚಲ ಪ್ರದೇಶದಲ್ಲಿ ಭೀಕರ ಪ್ರವಾಹ; 5 ಸೇನಾ ಸಿಬ್ಬಂದಿ ನಾಪತ್ತೆ

ಅರುಣಾಚಲದಲ್ಲಿ ಭೀಕರ ಪ್ರವಾಹ, ಭೂಕುಸಿತ -

Priyanka P
Priyanka P Aug 15, 2026 4:37 PM

ಇಟಾನಗರ, ಆ. 15: ಆಗಸ್ಟ್‌ 14ರ ಸಂಜೆ ಅರುಣಾಚಲ ಪ್ರದೇಶದಲ್ಲಿ (Arunachal Pradesh) ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತ (landslide) ಮತ್ತು ಹಠಾತ್ ಪ್ರವಾಹದಲ್ಲಿ (flood) ಕನಿಷ್ಠ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಐದು ಮಂದಿ ಸೇನಾ ಸಿಬ್ಬಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದರೆ, ದಿಬಾಂಗ್ ಕಣಿವೆಯಲ್ಲಿ ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಿಂದ ಎರಡು ಆಶ್ರಯ ತಾಣಗಳು ಕೊಚ್ಚಿಹೋಗಿವೆ.

ಅಪ್ಪರ್ ಸುಬನ್ಸಿರಿಯಲ್ಲಿರುವ ಕಿಯೋಜರಿಂಗ್-ಬೈಚಿಂಗ್ ರಸ್ತೆಯ ಅಗೆಯುವ ಸ್ಥಳದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಮಾಧಿಯಾಗಿದ್ದಾರೆ. ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ, ಪಸು ಪಾನಿ ಸೇನಾ ಶಿಬಿರದಲ್ಲಿ 5ನೇ ಗ್ರೆನೇಡಿಯರ್‌ನ ಎರಡು ಆಶ್ರಯ ತಾಣಗಳಿಗೆ ಹಠಾತ್ ಪ್ರವಾಹ ಅಪ್ಪಳಿಸಿ ಅನಾಹುತ ಸಂಭವಿಸಿದೆ.

ಅರುಣಾಚಲ ಪ್ರದೇಶದಲ್ಲಿ ಕಂಡು ಬಂದ ದಿಢೀರ್‌ ಪ್ರವಾಹ:

Tragic news from Arunachal.
Flash floods and landslides have claimed four lives.
Five Indian Army personnel are missing after shelters were swept away in Dibang Valley.
Search and rescue is underway.
Prayers for the missing soldiers and the families of those lost. 🇮🇳🙏 https://t.co/J2RmhB6aeE
— Himanshu Jain (@HemanNamo) August 15, 2026

ಇಬ್ಬರನ್ನು ಸೇನಾ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದರೂ, ಐದು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ನೆರೆಯ ಪೋಸ್ಟ್‌ಗಳಿಂದ ಹಲವು ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈಶಾನ್ಯ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿ 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಅಸ್ಸಾಂನಲ್ಲಿ ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ, ಸಾವಿನ ಸಂಖ್ಯೆ 95ಕ್ಕೆ ಏರಿಕೆ

ಈ ತಿಂಗಳ ಆರಂಭದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ರಾಜ್ಯದಲ್ಲಿ ಪ್ರವಾಹ ಮತ್ತು ಭೂಕುಸಿತಗಳಿಂದ 235 ರಸ್ತೆಗಳು, 40 ಸೇತುವೆಗಳು, 75 ಕಲ್ವರ್ಟ್‌ಗಳು, 373 ನೀರು ಸರಬರಾಜು ವ್ಯವಸ್ಥೆಗಳು, 161 ವಿದ್ಯುತ್ ಮಾರ್ಗಗಳು, 823 ವಿದ್ಯುತ್ ಕಂಬಗಳು, 66 ನೀರಾವರಿ ಯೋಜನೆಗಳು, 122 ಸರ್ಕಾರಿ ಕಟ್ಟಡಗಳು, 41 ಶಾಲೆಗಳು, 12 ಜಲವಿದ್ಯುತ್ ಯೋಜನೆಗಳು, 26 ತಡೆಗೋಡೆಗಳು ಮತ್ತು 16 ಪ್ರವಾಹ ರಕ್ಷಣಾ ಗೋಡೆಗಳು ಸೇರಿ ಇತರ ಸಾರ್ವಜನಿಕ ಆಸ್ತಿಗಳು ಹಾನಿಗೊಳಗಾಗಿವೆ.

ಹಠಾತ್ ಪ್ರವಾಹ: ಸೇತುವೆ ಮುರಿದು ಕೊಚ್ಚಿ ಹೋದ ಬಿಆರ್‌ಒ ಚಾಲಕ

ಹಠಾತ್ ಪ್ರವಾಹ ಉಂಟಾಗಿ ಬಿಆರ್‌ಒ ವಾಹನ ಚಾಲಕನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ಉತ್ತರಾಖಂಡದ ಚಮೋಲಿಯಲ್ಲಿ ಇತ್ತೀಚೆಗೆ ನಡೆದಿತ್ತು. ಇದರ ಭಯಾನಕ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಸೇತುವೆ ಕುಸಿದಿರುವುದರಿಂದ ಸುಮಾರು 12ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದ್ದವು.

ಉತ್ತರಾಖಂಡದ ಕಣಿವೆ ಭಾಗಗಳಲ್ಲಿ ಭಾರಿ ಮಳೆ ಮತ್ತು ಹಠಾತ್ ಪ್ರವಾಹದಿಂದಾಗಿ ಚಮೋಲಿ ಜಿಲ್ಲೆಯಲ್ಲಿ ನೀರಿನ ಮಟ್ಟದಲ್ಲಿ ತೀವ್ರ ಏರಿಕೆಯಾಗಿದ್ದವು. ಇದರಿಂದ ಕೆಲವೆಡೆ ಹಠಾತ್ ಪ್ರವಾಹ ಉಂಟಾಗಿತ್ತು. ಏಕಾಏಕಿ ತುಂಬಿ ಹರಿದ ತಮಕ್ ಚರಂಡಿಯ ಮೇಲೆ ನಿರ್ಮಿಸಲಾದ ಸೇತುವೆ ಕೊಚ್ಚಿ ಹೋಗಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.