ರಾಜ್ಯದಲ್ಲಿನ ಕಾಂಗ್ರೆಸ್ ಸ್ಥಿತಿ ತಮಿಳುನಾಡಿನಲ್ಲಿ ಬಿಜೆಪಿಯದ್ದು; ಅಣ್ಣಾಮಲೈ ಬೆನ್ನಲ್ಲೇ ರಾಜೀನಾಮೆ ಘೋಷಿಸಿದ ಪ್ರಮುಖ ನಾಯಕರು
K Annamalai: ತಮಿಳುನಾಡಿನಲ್ಲಿ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ. ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಬೆನ್ನಲ್ಲೇ ಮತ್ತಿಬ್ಬರು ಪ್ರಮುಖ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಕರು ನಾಗರಾಜನ್ ಮತ್ತು ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ಪಕ್ಷ ತೊರೆಯವುದಾಗ ಘೋಷಿಸಿದ್ದಾರೆ.
ಕರು ನಾಗರಾಜನ್ ಮತ್ತು ಸುಮತಿ ವೆಂಕಟೇಶ್ (ಸಂಗ್ರಹ ಚಿತ್ರ) -
ಚೆನ್ನೈ, ಜೂ. 5: ಅಕ್ಕ-ಪಕ್ಕದ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿನ ಸದ್ಯದ ರಾಜಕೀಯ ಸ್ಥಿತಿ ಒಂದೇ ರೀತಿ ಇದೆ. ಇಲ್ಲಿ ಕಾಂಗ್ರೆಸ್ ಅನುಭವಿಸುತ್ತಿರುವ ಬಿಕ್ಕಟ್ಟು ತಮಿಳುನಾಡಿನಲ್ಲಿ ಬಿಜೆಪಿಗೆ ಎದುರಾಗಿದೆ. ಒಂದರ್ಥದಲ್ಲಿ ಈ ಬದ್ಧ ವೈರಿಗಳು ಈಗ ಒಂದೇ ದೋಣಿಯ ಪ್ರಯಾಣಿಗರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ (DK Shivakumar) ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಪಕ್ಷದೊಳಗಿನ ಅಸಮಾಧಾನ ಭುಗಿಲೆದ್ದಿದೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಇತ್ತ ತಮಿಳುನಾಡಿನಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (K Annamalai) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇನ್ನಷ್ಟು ಮುಖಂಡರು ಪಾರ್ಟಿ ತೊರೆಯುವುದಾಗಿ ಹೇಳಿದ್ದಾರೆ. ಆ ಮೂಲಕ ತಮಿಳುನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿರುವ ಪಕ್ಷಕ್ಕೆ ಸಂಕಷ್ಟ ಎದುರಾಗಿದೆ.
ಅಣ್ಣಾಮಲೈ ಅವರ ರಾಜೀನಾಮೆ ಅಧಿಕೃತವಾಗಿ ಅಂಗೀಕಾರಗೊಂಡ ಬೆನ್ನಲ್ಲೇ ಹಿರಿಯ ನಾಯಕರಿಬ್ಬರು ಪಕ್ಷದಿಂದ ಹೊರಗಡಿ ಇಟ್ಟಿದ್ದಾರೆ. ಆ ಮೂಲಕ ಕೇಸರಿ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿಯೇ ಸ್ಫೋಟಗೊಂಡಿದೆ.
ರಾಜೀನಾಮೆ ಬಗ್ಗೆ ಬಿಜೆಪಿ ನಾಯಕಿ ಸುಮತಿ ವೆಂಕಟೇಶ್ ಅವರ ಮಾತು:
Chennai, Tamil Nadu: After K. Annamalai's arrival, BJP State Secretary, Sumathi Venkatesh says, ''I am the State Secretary, State Secretary Sumathi Venkatesh. I have resigned from my parent body position..'' pic.twitter.com/C2PuTI80sC
— IANS (@ians_india) June 5, 2026
ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಕರು ನಾಗರಾಜನ್ ಮತ್ತು ರಾಜ್ಯ ಕಾರ್ಯದರ್ಶಿ ಸುಮತಿ ವೆಂಕಟೇಶ್ ರಾಜೀನಾಮೆ ಘೋಷಿಸಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ನಾಯಕರಿಗೆ ಸದ್ಯದಲ್ಲೇ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಕರು ನಾಗರಾಜನ್ ತಿಳಿಸಿದ್ದಾರೆ. ಅಲ್ಲದೆ ದೆಹಲಿಯಿಂದ ಹಿಂದಿರುಗಿದ ಅಣ್ಣಾಮಲೈ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಮೂಲಕ ಪಕ್ಷಕ್ಕೆ ಪರೀಕ್ಷವಾಗಿ ತಿರುಗೇಟು ನೀಡಿದ್ದಾರೆ. ಇತ್ತ ಸುಮತಿ, ಸಾಕಷ್ಟು ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದಾಗಿಯೂ, ಪಕ್ಷ ತೊರೆಯುವ ಬಗ್ಗೆ ನೋವು ಇರುವುದಾಗಿಯೂ ತಿಳಿಸಿದ್ದಾರೆ. ಆ ಮೂಲಕ ಅವರೂ ಅಣ್ಣಾಮಲೈ ಅವರಿಗೆ ಬೆಂಬಲ ಸೂಚಿಸಿದಂತಾಗಿದೆ.
ಲೋಕಸಭಾ ಚುನಾವಣೆ ತಯಾರಿ, ಬಿಜೆಪಿ ತೊರೆದ ತಕ್ಷಣವೇ ರಾಜಕೀಯ ಚಳುವಳಿ ಪ್ರಾರಂಭಿಸಿದ ಅಣ್ಣಾಮಲೈ
ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ನಾಗರಾಜನ್ ಟಿವಿ ಚಾನೆಲ್‌ಗಳ ಚರ್ಚೆಯಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದರು. 2016ರ ವಿಧಾನಸಭಾ ಚುನಾವಣೆಯಲ್ಲಿ ಮೈಲಪೋರೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2017ರ ಆರ್.ಕೆ. ನಗರ್ ಉಪಚುನಾವಣೆಯಲ್ಲೂ ಕಣಕ್ಕಿಳಿದಿದ್ದರು. ಅದಾಗ್ಯೂ ಈ ಎರಡೂ ಚುನಾವಣೆಗಳಲ್ಲಿ ಸೋಲುಂಡಿದ್ದರು. ಅದಾಗ್ಯೂ ಜನರ ಗಮನ ಸೆಳೆಯುತ್ತಿದ್ದ ಈ ಇಬ್ಬರು ನಾಯಕರೂ ಪಕ್ಷದಿಂದ ಹೊರ ನಡೆದಿದ್ದು ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಬಿಜೆಪಿ; ಇಂದೇ ಹೊಸ ಪಕ್ಷದ ಘೋಷಣೆ ಮಾಡ್ತಾರಾ ಸಿಂಗಂ?
ಅಣ್ಣಾಮಲೈ ರಾಜೀನಾಮೆ ಅಂಗೀಕಾರ
ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ ಜತೆ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿದ್ದರೂ ಮನವೊಲಿಸಲು ಸಾಧ್ಯವಾಗಲಿಲ್ಲ. ಅಣ್ಣಾಮಲೈ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯದ ಕಾರಣ ಅವರ ರಾಜೀನಾಮೆಯನ್ನು ಬಿಜೆಪಿ ಅಂಗೀಕರಿಸಿದೆ. ಇದರ ಬೆನ್ನಲ್ಲೇ ಅವರು ತಮಿಳುನಾಡಿನಲ್ಲಿ ರಾಜಕೀಯ ಚಳುವಳಿಗೆ ಕರೆ ನೀಡಿದ್ದಾರೆ. ಇದು ತಮ್ಮ ಸಾರ್ವಜನಿಕ ಜೀವನ ಮತ್ತು ರಾಜಕೀಯ ಪ್ರಯಾಣದ ಮುಂದಿನ ಹಂತ ಎಂದು ಬಣ್ಣಿಸಿರುವ ಅವರು, ಯುವಕರು ಮತ್ತು ಸಾಮಾನ್ಯ ಜನರು ತಮ್ಮೊಂದಿಗೆ ಸೇರುವಂತೆ ಮನವಿ ಮಾಡಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.