Agni-6 ICBM Test: ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಲು ಭಾರತ ಸಜ್ಜು; ಅಗ್ನಿ-6 ಐಸಿಬಿಎಂ ಪರೀಕ್ಷೆ ಶೀಘ್ರ
ಭಾರತ ತನ್ನ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಅಗ್ನಿ-6 ಎಂದೇ ಕರೆಯಲ್ಪಡುವ ಇಂಟರ್ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಬಂಗಾಳಕೊಲ್ಲಿಯ 3,550 ಕಿ.ಮೀ. ಅನ್ನು ನಿಷೇಧಿತ ವಲಯವಾಗಿ ಭಾರತ ಘೋಷಿಸಿದೆ.

-

ನವದೆಹಲಿ: ತನ್ನ ರಕ್ಷಣಾ ಸಾಮರ್ಥ್ಯವನ್ನು (Defence capabilities) ಹೆಚ್ಚಿಸಿಕೊಳ್ಳುತ್ತಿರುವ ಭಾರತ ಇದೀಗ ಬಂಗಾಳಕೊಲ್ಲಿಯ (Bay Of Bengal) 3,550 ಕಿ.ಮೀ. ವ್ಯಾಪ್ತಿಯನ್ನು ಹಾರಾಟ ನಿಷೇಧಿತ ವಲಯವನ್ನಾಗಿ ಘೋಷಿಸಿದೆ. ಹಂತಹಂತವಾಗಿ ನಿಷೇಧಿತ ವಲಯವನ್ನು (No-Fly Zone) ವಿಸ್ತರಣೆ ಮಾಡಿರುವ ಭಾರತ ಅಕ್ಟೋಬರ್ 6ರಂದು 1,480 ಕಿ.ಮೀ.ನಿಂದ ಅಕ್ಟೋಬರ್ 7ರಂದು 2,520 ಕಿ.ಮೀ. ಮತ್ತು ಈಗ 3,550 ಕಿ.ಮೀ.ಗೆ ವಿಸ್ತರಿಸಿದೆ. ಇದು ದೀರ್ಘ ಶ್ರೇಣಿಯ ಕ್ಷಿಪಣಿ (long-range missile) ಪರೀಕ್ಷೆಯ (Agni-6 ICBM Test) ತಯಾರಿ ಎನ್ನಲಾಗುತ್ತಿದೆ.
ರಕ್ಷಣಾ ವ್ಯವಸ್ಥೆಯಲ್ಲಿ ಇದೀಗ 5ನೇ ತಲೆಮಾರಿನ ಯುದ್ಧ ಜೆಟ್‌ಗಳು, ಸುಧಾರಿತ ಕ್ಷಿಪಣಿಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಸೇರ್ಪಡೆಗೊಳಿಸುತ್ತಿರುವ ಭಾರತ ಡಿಆರ್‌ಡಿಒ ಮತ್ತು ಎಚ್‌ಎಎಲ್ ತೇಜಸ್ ಎಂಕೆ-1ಎ ಜೆಟ್ ಅನ್ನು ವಾಯುಪಡೆಗೆ ಸೇರಿಸಲು ಸಿದ್ಧತೆ ನಡೆಸುತ್ತಿವೆ.
ಬಂಗಾಳಕೊಲ್ಲಿಯಲ್ಲಿ 3,550 ಕಿ.ಮೀ. ಅನ್ನು ವಾಯುಪಡೆ ತನ್ನ ವಶಕ್ಕೆ ಪಡೆದಿದೆ. ಇದು ಬುಧವಾರದಿಂದ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಂಗಾಳಕೊಲ್ಲಿಯಲ್ಲಿ 3,550 ಕಿ.ಮೀ. ಹಾರಾಟ ನಿಷೇಧಿತ ವಲಯವಾಗಿ ಪರಿವರ್ತಿಸಲಾಗುತ್ತದೆ. ಈ ವಲಯದೊಳಗೆ ಅಕ್ಟೋಬರ್ 17ರವರೆಗೆ ವಿಮಾನಗಳು ಮತ್ತು ಹಡಗುಗಳು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. 3,550 ಕಿ. ಮೀ. ಅನ್ನು ನಿಷೇಧಿತ ವಲಯವಾಗಿ ಮಾಡಿರುವುದನ್ನು ನೋಡಿದರೆ ಅಗ್ನಿ-6 ಎಂದೇ ಕರೆಯಲ್ಪಡುವ ಇಂಟರ್ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆ (ICBM) ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ರಕ್ಷಣಾ ತಜ್ಞರು ಊಹಿಸಿದ್ದಾರೆ.
5,000 ಕಿ.ಮೀ.ಗಳಿಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-5ಕ್ಕಿಂತ ಅಗ್ನಿ-6 ಇನ್ನೂ ಹೆಚ್ಚಿನ ದಾಳಿಯ ಸಾಮರ್ಥ್ಯವನ್ನು ಹೊಂದಿದೆ. ಅಕ್ಟೋಬರ್ 17ರ ಮೊದಲು ಬಂಗಾಳಕೊಲ್ಲಿಯ ಮೇಲೆ ದೀರ್ಘ ಶ್ರೇಣಿ ಕ್ಷಿಪಣಿಯ ಪರೀಕ್ಷೆ ನಡೆಸಲು ಭಾರತ ಸಜ್ಜಾಗಿದೆ. ಈ ಪ್ರಯೋಗವು ದೇಶದ ದೀರ್ಘ ಶ್ರೇಣಿಯ ದಾಳಿ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ.
ಅಗ್ನಿ-6ರ ಪರೀಕ್ಷೆಗೆ ಸಿದ್ಧತೆ?
ಬಂಗಾಳಕೊಲ್ಲಿಯಲ್ಲಿ ಯಾವ ಕ್ಷಿಪಣಿ ಪರೀಕ್ಷಿಸಲಾಗುವುದು ಎನ್ನುವ ಕುರಿತು ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಇದು ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಭಾರತದ ಪ್ರಾಥಮಿಕ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿಯ ಅಗ್ನಿ ಸರಣಿಯಾಗಿರಬಹುದು ಎಂದು ಊಹಿಸಲಾಗಿದೆ.
ಅಗ್ನಿ ಸರಣಿಯು 700 ಕಿ.ಮೀ. ವ್ಯಾಪ್ತಿಯಿಂದ 5,000 ಕಿ.ಮೀ. ವರೆಗಿನ ಸಾಮರ್ಥ್ಯವನ್ನು ಹೊಂದಿದ್ದು, ಇದರ ನೋಟಾಮ್ ಶ್ರೇಣಿಯು ಅಗ್ನಿ-5ರ ಯ ಸುಧಾರಿತ ಆವೃತ್ತಿಯಾಗಿದೆ. ಇದು ಕಳೆದ ಹಲವು ಸಮಯಗಳಿಂದ ಸಂಶೋಧನೆಯಲ್ಲಿದೆ.
ಅಗ್ನಿ-6 ಬಹು ಸ್ವತಂತ್ರವಾಗಿ ಗುರಿಯನ್ನು ನಿರ್ಧರಿಸಲಿದ್ದು,ಇದರಲ್ಲಿ ಮರು-ಪ್ರವೇಶ ವಾಹನ (MIRV) ತಂತ್ರಜ್ಞಾನ, ವರ್ಧಿತ ಘನ-ಇಂಧನ ಪ್ರೊಪಲ್ಷನ್ ಮತ್ತು ವಿಸ್ತೃತ ಶ್ರೇಣಿಯನ್ನು ಒಳಗೊಂಡಿದೆ. ಸೆಪ್ಟೆಂಬರ್ 25ರಂದು ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಭಾರತ ಪರೀಕ್ಷೆ ನಡೆಸಿತ್ತು. ಇದು 2,000 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುವ ಎರಡು ಹಂತದ ಕ್ಷಿಪಣಿಯಾಗಿದೆ.
ಬಂಗಾಳಕೊಲ್ಲಿ ಮತ್ತು ಪೂರ್ವ ಸಮುದ್ರ ತೀರದ ಸುತ್ತಲಿನ ನೋಟಾಮ್ ಮತ್ತು ಕಡಲ ಎಚ್ಚರಿಕೆ ವಲಯಗಳು ಭಾರತದ ಕ್ಷಿಪಣಿಯ ಪರೀಕ್ಷೆಯನ್ನು ಸೂಚಿಸುತ್ತವೆ. ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ಹಾರಿಸುವ ನಿರೀಕ್ಷೆಯಿದ್ದು, ಇದರ ಗುರಿ ಪ್ರದೇಶವು ಸಾಗರದಲ್ಲಿ ಆಳದಲ್ಲಿದೆ.
ಇದನ್ನೂ ಓದಿ: Priyank Kharge: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ, ಆಡಿಯೋ ರೆಕಾರ್ಡ್ ರಿಲೀಸ್ ಮಾಡಿದ ಖರ್ಗೆ
ಇನ್ನು ಭಾರತದ ಕ್ಷಿಪಣಿ ಪರೀಕ್ಷೆಗಳ ಕುರಿತು ಸುಧಾರಿತ ರಾಡಾರ್ ಮತ್ತು ಟೆಲಿಮೆಟ್ರಿ ವ್ಯವಸ್ಥೆಗಳನ್ನು ಹೊಂದಿರುವ ಚೀನಾದ ಟ್ರ್ಯಾಕಿಂಗ್ ಹಡಗು ಯುವಾನ್ ವಾಂಗ್ 5, ಮಲೇಷ್ಯಾದ ಪೋರ್ಟ್ ಕ್ಲಾಂಗ್ ಮೇಲ್ವಿಚಾರಣೆ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಹಿಂದೂ ಮಹಾಸಾಗರದಲ್ಲಿ ಕಣ್ಗಾವಲು ಹೆಚ್ಚಾಗಲಿದೆ. ಇನ್ನು ಅಮೆರಿಕದ ಟ್ರ್ಯಾಕಿಂಗ್ ಹಡಗು ಓಷನ್ ಟೈಟಾನ್ ಕೂಡ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದು ಕೂಡ ಮಾಹಿತಿ ಸಂಗ್ರಹ ಕಾರ್ಯ ನಡೆಸುತ್ತಿದೆ ಎನ್ನಲಾಗುತ್ತಿದೆ.