Amit Shah: ಹತ್ಯೆಗೀಡಾದ ಮೂವರೂ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು-ಅಮಿತ್ ಶಾ
ಲೋಕಸಭೆಯಲ್ಲಿ ಆಪರೇಶನ್ ಸಿಂದೂರ್ ಬಗ್ಗೆ ಚರ್ಚೆಯ ಮಾಡಿದ್ದು, ನೂರಾರು ಅಮಾಯಕರನ್ನು ಬಲಿ ತೆಗೆದುಕೊಂಡ ಸುಲೇಮಾನ್, ಆಫ್ಘಾನ್, ಮತ್ತು ಗಿಬ್ರಾನ್ ಎಂಬ ಮೂವರು ಭಯೋತ್ಪಾದಕರನ್ನು ಸೇನೆ, CRPF, ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ ಅಮಿತ್ ಶಾ ಮಾಹಿತಿ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ: ಏಪ್ರಿಲ್ 22ರ ಪಹಲ್ಗಾಮ್ (Pahalgam Terror attack) ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಮೂವರು ಭಯೋತ್ಪಾದಕರನ್ನು (Three Terrorists) ಜಮ್ಮು ಮತ್ತು ಕಾಶ್ಮೀರದ (Jammu and Kashmir) ಆಪರೇಶನ್ ಮಹಾದೇವ್‌ನಲ್ಲಿ (Operation Mahadev) ಭದ್ರತಾ ಪಡೆಗಳು ಸೋಮವಾರ ಹತ್ಯೆ ಮಾಡಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಸಂಸತ್ತಿನಲ್ಲಿ ದೃಢಪಡಿಸಿದ್ದಾರೆ.
ಲೋಕಸಭೆಯಲ್ಲಿ ಆಪರೇಶನ್ ಸಿಂದೂರ್ ಚರ್ಚೆಯ ವೇಳೆ ಸುಲೇಮಾನ್, ಆಫ್ಘಾನ್, ಮತ್ತು ಗಿಬ್ರಾನ್ ಎಂಬ ಮೂವರು ಭಯೋತ್ಪಾದಕರನ್ನು ಸೇನೆ, CRPF, ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ ಎಂದರು. ಸುಲೇಮಾನ್ ಲಷ್ಕರ್-ಎ-ತೊಯ್ಬಾದ ಉನ್ನತ ಕಮಾಂಡರ್ ಆಗಿದ್ದು, 26 ನಿರಪರಾಧಿಗಳನ್ನು ಕೊಂದ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎಂದು ಗುಪ್ತಚರ ಏಜೆನ್ಸಿಗಳಿಗೆ ಸಾಕ್ಷ್ಯ ಸಿಕ್ಕಿದೆ.
“ಬೈಸಾರನ್ ವ್ಯಾಲಿಯಲ್ಲಿ ನಮ್ಮ ನಾಗರಿಕರನ್ನು ಕೊಂದವರಲ್ಲಿ ಈ ಮೂವರು ಇದ್ದರು, ಇವರನ್ನು ತಟಸ್ಥಗೊಳಿಸಲಾಗಿದೆ” ಎಂದು ಅಮಿತ್ ಶಾ, ಆಪರೇಶನ್ ಮಹಾದೇವ್‌ನ ಯಶಸ್ಸಿಗೆ ಭದ್ರತಾ ಸಿಬ್ಬಂದಿಯನ್ನು ಶ್ಲಾಘಿಸಿದರು. ಪಹಲ್ಗಾಮ್ ದಾಳಿಯ ನಂತರ ಶ್ರೀನಗರಕ್ಕೆ ಆಗಮಿಸಿ, ರಾತ್ರಿ ಮತ್ತು ಮರುದಿನ ಬೆಳಗ್ಗೆ ಅಮಿತ್ ಶಾ ಭದ್ರತಾ ಸಭೆ ನಡೆಸಿದ್ದರು. “ಭಯೋತ್ಪಾದಕರು ಪಾಕಿಸ್ತಾನಕ್ಕೆ ತಪ್ಪಿಸಿಕೊಳ್ಳದಂತೆ ತಡೆಯಲಾಯಿತು” ಎಂದರು.
ಮೇ 22ರಂದು ಗುಪ್ತಚರ ಏಜೆನ್ಸಿಗಳಿಗೆ ದಾಚಿಗಾಮ್‌ನಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಬಗ್ಗೆ ಮಾಹಿತಿ ದೊರೆತಿತು. ವಿಶೇಷ ಸಾಧನಗಳ ಮೂಲಕ ಭಯೋತ್ಪಾದಕರ ಸಂವಹನವನ್ನು ಗುರುತಿಸಲಾಯಿತು. ಜುಲೈ 22ರಂದು ಇವರ ಉಪಸ್ಥಿತಿ ದೃಢಪಟ್ಟ ನಂತರ ಜಂಟಿ ಕಾರ್ಯಾಚರಣೆ ಆರಂಭವಾಯಿತು. NIA ಈ ಹಿಂದೆ ಭಯೋತ್ಪಾದಕರಿಗೆ ಆಶ್ರಯ ನೀಡಿದವರನ್ನು ಬಂಧಿಸಿತ್ತು, ಶವಗಳನ್ನು ಶ್ರೀನಗರಕ್ಕೆ ತಂದಾಗ ಗುರುತಿನ ದೃಢೀಕರಣ ನಡೆಯಿತು.
ಈ ಸುದ್ದಿಯನ್ನು ಓದಿ: Sanjay Dutt Birthday: ಬಾಲಿವುಡ್ ಖಳ್ನಾಯಕ್ಗೆ ಹುಟ್ಟುಹಬ್ಬದ ಸಂಭ್ರಮ
ಪಹಲ್ಗಾಮ್ ದಾಳಿಯ ಬುಲೆಟ್ ಶೆಲ್‌ಗಳ ಫೊರೆನ್ಸಿಕ್ ವರದಿಯನ್ನು ಬಳಸಿ ಗುರುತಿನ ದೃಢೀಕರಣ ಮಾಡಲಾಯಿತು. “ಹತರಾದ ಭಯೋತ್ಪಾದಕರ ರೈಫಲ್‌ಗಳನ್ನು (ಒಂದು M9, ಎರಡು AK-47) ಚಂಡೀಗಢಕ್ಕೆ ವಿಶೇಷ ವಿಮಾನದಲ್ಲಿ ಕಳುಹಿಸಿ, ಬುಲೆಟ್ ಶೆಲ್‌ಗಳನ್ನು ಪರೀಕ್ಷಿಸಲಾಯಿತು. ಇವು ಪಹಲ್ಗಾಮ್‌ನ ಶೆಲ್‌ಗಳೊಂದಿಗೆ 100% ಹೊಂದಾಣಿಕೆಯಾಗಿವೆ” ಎಂದು ಅಮಿತ್ ಶಾ ತಿಳಿಸಿದರು. ಆರು ವಿಜ್ಞಾನಿಗಳು ಈ ಬ್ಯಾಲಿಸ್ಟಿಕ್ ವರದಿಯನ್ನು ದೃಢೀಕರಿಸಿದ್ದಾರೆ.
ಆಪರೇಶನ್ ಸಿಂಧೂರ್‌ನಲ್ಲಿ ಪ್ರಧಾನಿ ಮೋದಿ ಭಯೋತ್ಪಾದನೆಯ ಮಾಸ್ಟರ್‌ಮೈಂಡ್‌ಗಳನ್ನು ತೊಡೆದುಹಾಕಿದರೆ, ಈಗ ಸೇನೆ ಮತ್ತು CRPF ಭಯೋತ್ಪಾದಕರನ್ನು ಕೊಂದಿದೆ ಎಂದು ಅಮಿತ್ ಶಾ ಹೇಳಿದರು. ವಿಪಕ್ಷವನ್ನು ಟೀಕಿಸಿ, “ಭಯೋತ್ಪಾದಕರ ಸಾವನ್ನು ಎಲ್ಲರೂ ಆಚರಿಸಬೇಕಿತ್ತು, ಆದರೆ ವಿಪಕ್ಷದವರ ಮುಖ ಕಪ್ಪಾಗಿದೆ,” ಎಂದರು.