ʼʼಚರ್ಚೆಗೆ ನಾವು ಸಿದ್ಧ, ನಿಮ್ಮ ತಿರ್ಮಾನವೇನು?ʼʼ ಸಂಸತ್ತಿನಲ್ಲಿ ವಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ ನೇರ ಸವಾಲು
Amit Shah: ಜಾರ್ಖಂಡ್ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ನೀಟ್ ಪರೀಕ್ಷೆ ಗೊಂದಲಗಳ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ವಿಪಕ್ಷಗಳು ನಡೆಸುತ್ತಿರುವ ತೀವ್ರ ಗದ್ದಲ ಹಾಗೂ ಪ್ರತಿಭಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಕ್ ಪ್ರತ್ಯತ್ತರ ನೀಡಿದ್ದು, ಎಲ್ಲ ವಿಚಾರಗಳ ಚರ್ಚೆಗೆ ಸಿದ್ಧ ಎಂದಿದ್ದಾರೆ.
ಅಮಿತ್ ಶಾ (ಸಂಗ್ರಹ ಚಿತ್ರ) -
ದೆಹಲಿ, ಆ. 12: ಜಾರ್ಖಂಡ್ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ನೀಟ್ ಪರೀಕ್ಷೆ ಗೊಂದಲಗಳ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ವಿಪಕ್ಷಗಳು ನಡೆಸುತ್ತಿರುವ ತೀವ್ರ ಗದ್ದಲ ಹಾಗೂ ಪ್ರತಿಭಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಖಡಕ್ ಪ್ರತ್ಯತ್ತರ ನೀಡಿದ್ದಾರೆ. ‘ʼಸರ್ಕಾರಕ್ಕೆ ಯಾವುದೇ ವಿಷಯದ ಬಗ್ಗೆಯೂ ಚರ್ಚಿಸಲು ಭಯವಿಲ್ಲ. 24 ಗಂಟಗಳ ಕಾಲ ನಿರಂತರ ಚರ್ಚೆಗೆ ನಾವು ಸಿದ್ಧʼʼ ಎಂದು ವಿಪಕ್ಷಗಳಿಗೆ ನೇರ ಸವಾಲು ಹಾಕಿದ್ದಾರೆ. ಸಂಸತ್ತಿನ ಕಲಾಪಕ್ಕೆ ವಿಪಕ್ಷಗಳು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳನ್ನ ಉದ್ದೇಶಿಸಿ ಅಮಿತ್ ಶಾ ಸರ್ಕಾರದ ನಿಲುವನ್ನು ವ್ಯಕ್ತಪಡಿಸಿದರು.
ದೆಹಲಿಯ ಜಂತರ್-ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪೊಲೀಸರ ವರ್ತನೆ ಮತ್ತು ಪೆಲೆಟ್ ಗನ್‌ಗಳ ಬಳಕೆಯ ಆರೋಪಗಳ ಕುರಿತು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಗಲಾಟೆ ನಡೆಸಿದ್ದರಿಂದ ಸಂಸತ್ತಿನ ಮಳೆಗಾಲ ಅಧೀವೇಶನ ಬಹುತೇಕ ರದ್ದಾಗಿತ್ತು.
ಆಗಸ್ಟ್ 10ರಂದು ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಮತ್ತು ರಾಸ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗಳನ್ನು ಅಮಿತ್ ಶಾ ಮಂಡಿಸಲಿದ್ದಾರೆ ಎಂದು ಮೊದಲೇ ತಿಳಿಸಲಾಗಿತ್ತು. ಬಳಿಕ ಕೇಂದ್ರ ರಾಜ್ಯ ಸಚಿವ ನಿತ್ಯಾನಂದ ರಾಯ್ ಮತ್ತು ಮುರಳೀಧರ ಮೊಹೋಲ್ ಈ ಮಸೂದೆಗಳನ್ನು ಮಂಡಿಸಿದ್ದರು.
ಗೃಹ ಸಚಿವರು ಸಂಸತ್ತಿನ ಕಲಾಪದಿಂದ ನಾಪತ್ತೆಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಆದರೆ ವಿಪಕ್ಷಗಳ ಈ ಆರೋಪವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ.
‘ʼಸಂಸತ್ತಿನಲ್ಲಿ ಅಧಿವೇಶನ ಪ್ರಾರಂಭವಾದ ವೇಳೆ ನಾನು ಪ್ರತಿ ದಿನ ಬಂದು ನನ್ನ ಚೇಂಬರ್‌ನಲ್ಲೇ ಕೂಳಿತುಕೋಳ್ಳುತ್ತಿದ್ದೆನೆ. ಆದರೆ ಉಭಯ ಸದನಗಳಲ್ಲೂ ವಿಪಕ್ಷ ನಾಯಕರು ಕಲಾಪ ನಡೆಯಲು ಬಿಡದೆ ಗದ್ದಲ ಮಾಡುತ್ತಿದ್ದರೆ. ನಾನು ಸದನದೊಳಗೆ ಹೋಗಿ ಏನು ಮಾಡಲು ಸಾಧ್ಯ?’ʼ ಎಂದು ಶಾ ಪ್ರಶ್ನಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಸೇರಿ ಎಲ್ಲ ವಿಷಯಗಳ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂಬುವುದನ್ನು ಈಗಾಗಲೇ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪಷ್ಟವಾಗಿ ತಿಳಿಸಿದ್ದಾರೆ.
ವಿಪಕ್ಷಗಳು ಚರ್ಚೆಗೆ ಸಮಯ ನಿಗದಿಪಡಿಸಬೇಕು ಮತ್ತು ಸರ್ಕಾರ ತನ್ನ ತಪ್ಪು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿವೆ. ʼʼಸಂಸತ್ತಿನಲ್ಲಿ ಎದ್ದಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ನಾನು ಸಿದ್ಧ ಎಂಬುವುದು ಸ್ಪಷ್ಟಪಡಿಸಿದ್ದೇನೆ. ಆದರೆ ಅವರಿಗೆ ಚರ್ಚೆ ನಡೆಯುವುದು ನಿಜವಾಗಿಯು ಬೇಕಾಗಿಲ್ಲʼ’ ಎಂದು ಅಮಿತ್ ಶಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.