ಬಾಂಗ್ಲಾದೇಶ ಜೆನ್ಝೀ ಹೋರಾಟ ನಮಗೆ ಸ್ಫೂರ್ತಿ: ನೇಹಾ ಬೋರಾ ವಿವಾದ
Neha Bora: ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಬಂಧನ ವಿರುದ್ಧ ದೆಹಲಿಯ ಕನಾಟ್ ಪ್ರದೇಶದಲ್ಲಿರುವ ಸೆಂಟ್ರಲ್ ಪಾರ್ಕ್ನಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ಸಿಜೆಪಿ ಮುಖ್ಯಸ್ಥ ಅಭಿಜೀತ್ ದೀಪ್ಕೆ ‘ತ್ರಿವರ್ಣ ಧ್ವಜ ಹಾರಿಸಿ’ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಮಾಡಿದ್ದಾರೆ.
Neha Bora -
ನವದೆಹಲಿ, ಅ.16: ಅಖಿಲ ಭಾರತ ವಿದ್ಯಾರ್ಥಿ ಸಂಸ್ಥೆ (ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆ ಮತ್ತು ಹೋರಾಟಗಾರ್ತಿ ನೇಹಾ ಬೋರಾ ಅವರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ‘ಬಾಂಗ್ಲಾದೇಶದ ಹೋರಾಟವೇ ನಮಗೆ ಸ್ಫೂರ್ತಿ’ ಎಂದಿರುವುದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ‘ದೇಶದಲ್ಲಿ ಅರಾಜಕತೆ ಸೃಷ್ಟಿಗೆ ನಡೆದ ಹುನ್ನಾರ ಇದು’ ಎಂದಿದೆ.
ನೇಹಾ, ನೇಹಾ ಹೇಳಿಕೆಯನ್ನು ಜಿರಳೆ ಪಕ್ಷದ ಬೆಂಬಲಿಗ ಹಾಗೂ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಮರ್ಥಿಸಿ, ‘ದೇಶದಲ್ಲಿ ಸರ್ಕಾರ ಬದಲಾವಣೆ ಆಗಬೇಕು. ಇದು ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕು’ ಎಂದು ಹೇಳಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಎಸ್ಐಆರ್ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ನೇಹಾ ಬೋರಾ, ಬಾಂಗ್ಲಾದ ಅತಿದೊಡ್ಡ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಸಮಾಜವಾದಿ ವಿದ್ಯಾರ್ಥಿ ರಂಗದ (ಎಸ್ಎಸ್ಎಸ್) ಸಮ್ಮೇಳನವನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡುತ್ತಾ, ‘ಭಾರತದಲ್ಲಿ ಬೆಳೆಯುತ್ತಿರುವ ಜೆನ್ ಝೀ (ಯುವಕರ) ಪ್ರತಿಭಟನೆಗಳಿಗೆ ಬಾಂಗ್ಲಾದೇಶದ ಯುವಜನರ ಹೋರಾಟವೇ ಸ್ಪೂರ್ತಿ, ಬಾಂಗ್ಲಾದೇಶದ ಅನುಭವವು ಭಾರತದ ಯುವಕರಿಗೆ ದಾರಿ ತೋರಿಸುತ್ತದೆ’ ಎಂದು ಹೇಳಿದ್ದರು ಎನ್ನಲಾಗಿದೆ.
Neha Bora, Rahul Gandhi's poster girl says-‘Bangladesh showed us the way’ for Revolution! This is Open Admission of Regime Change! Rahul Gandhi& Co are a threat to Indian Democracy! https://t.co/Eoi7QVzAtW
— Pradeep Bhandari(प्रदीप भंडारी)🇮🇳 (@pradip103) October 14, 2026
ಇಂದು ದೆಹಲಿಯಲ್ಲಿ ʼತ್ರಿವರ್ಣ ಧ್ವಜ ಹಾರಿಸಿ’ ಧರಣಿ
ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಬಂಧನ ವಿರುದ್ಧ ದೆಹಲಿಯ ಕನಾಟ್ ಪ್ರದೇಶದಲ್ಲಿರುವ ಸೆಂಟ್ರಲ್ ಪಾರ್ಕ್ನಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ಸಿಜೆಪಿ ಮುಖ್ಯಸ್ಥ ಅಭಿಜೀತ್ ದೀಪ್ಕೆ ‘ತ್ರಿವರ್ಣ ಧ್ವಜ ಹಾರಿಸಿ’ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ದಿಗ್ಗಜ ಆಟಗಾರ್ತಿ ಪೂನಂ ರಾವತ್
ಜ್ಞಾನೇಶ್ ಕುಮಾರ್ಗೆ ನೋಟಿಸ್ ಜಾರಿ
ಎಸ್ಐಆರ್ ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ 12 ಪ್ರತಿಪಕ್ಷ ನಾಯಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ, ಸುಪ್ರೀಂ ಕೋರ್ಟ್ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಎಸ್ಐಆರ್ ಪ್ರಕ್ರಿಯೆ ಪ್ರಶ್ನಿಸಿ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಎಸ್ಐಆರ್ ವಿರೋಧಿಸಿ ಇತ್ತೀಚೆಗೆ ನಡೆದ ಸುಪ್ರೀಂ ಕೋರ್ಟ್ ಚಲೋ ಪ್ರಶ್ನಿಸಿ ಹಲವು ಅರ್ಜಿಗಳು ಪ್ರತ್ಯೇಕವಾಗಿ ಸಲ್ಲಿಕೆ ಆಗಿದ್ದವು. ಇವುಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ. ಜಯಮಾಲ್ಯ ಬಾಗ್ಜಿ ಅವರಿದ್ದ ಪೀಠವು ಮೊದಲು ಸಿಇಸಿ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತು.