Crime News: ಪ್ರೇಯಸಿಗಾಗಿ ಪತ್ನಿಯನ್ನೇ ಕೊಂದ ಬಿಜೆಪಿ ನಾಯಕ
ಬಿಜೆಪಿ ಮುಖಂಡ ರೋಹಿತ್ ಸೈನಿ ತನ್ನ ಗೆಳತಿಯ ಒತ್ತಾಯದ ಮೇರೆಗೆ ಪತ್ನಿ ಸಂಜು ಸೈನಿಯನ್ನು ಕೊಂದಿರುವ ಘಟನೆ ರಾಜಸ್ಥಾನದ ಅಜ್ಮೇರ್‌ನಲ್ಲಿ ನಡೆದಿದೆ. 2025ರ ಆಗಸ್ಟ್ 10ರಂದು ನಡೆದ ಈ ಕೃತ್ಯವನ್ನು ಆರಂಭದಲ್ಲಿ ದರೋಡೆ ಎಂಬಂತೆ ಬಿಂಬಿಸಲಾಗಿತ್ತು.


ಜೈಪುರ: ರಾಜಸ್ಥಾನದ (Rajasthan) ಅಜ್ಮೇರ್‌ನಲ್ಲಿ (Ajmer) ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸ್ಥಳೀಯ ಬಿಜೆಪಿ ಮುಖಂಡ (BJP Leader) ರೋಹಿತ್ ಸೈನಿ (Rohit Saini) ತನ್ನ ಗೆಳತಿಯ ಒತ್ತಾಯದ ಮೇರೆಗೆ ಪತ್ನಿ ಸಂಜು ಸೈನಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ (Crime News). 2025ರ ಆಗಸ್ಟ್ 10ರಂದು ನಡೆದ ಈ ಕೃತ್ಯವನ್ನು ಆರಂಭದಲ್ಲಿ ದರೋಡೆ ಎಂಬಂತೆ ಬಿಂಬಿಸಲಾಗಿತ್ತು.
ಘಟನೆಯ ವಿವರ
ಆಗಸ್ಟ್ 10ರಂದು ಸಂಜು ಸೈನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ ಎಂದು ವರದಿಯಾಯಿತು. ರೋಹಿತ್ ಸೈನಿ ಪ್ರತಿಕ್ರಿಯಿಸಿ ಗುರುತು ತಿಳಿಯದ ಕಳ್ಳರು ತನ್ನ ಪತ್ನಿಯನ್ನು ಕೊಂದು ಒಡವೆಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಆರಂಭದಲ್ಲಿ ದೂರಿದ್ದ. ಆದರೆ ಪೊಲೀಸ್ ತನಿಖೆಯಲ್ಲಿ ರೋಹಿತ್‌ನ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ತೀವ್ರ ವಿಚಾರಣೆಯ ನಂತರ, ರೋಹಿತ್ ತಾನೇ ತನ್ನ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡು ಒಳಸಂಚನ್ನು ಬಯಲಿಗೆಳೆದ.
राजस्थान के अजमेर में पत्नी की हत्या का सनसनीखेज मामला सामने आया है। पुलिस ने खुलासा किया है कि बीजेपी नेता रोहित सैनी ने अपनी पत्नी संजू को अपनी प्रेमिका रितु सैनी के कहने पर मार डाला!
— Kishor Joshi (@KishorJoshi02) August 16, 2025
📌 वारदात को पहले लूटपाट का रूप देने की कोशिश की गई थी, लेकिन पुलिस ने महज़ 24 घंटे में पूरी… pic.twitter.com/FLZg4cO5VJ
ಈ ಸುದ್ದಿಯನ್ನೂ ಓದಿ: Crime News: ಛೇ ಎಂಥಾ ಕೃತ್ಯ; ಅಳುತ್ತದೆ ಎಂದು ಹೆತ್ತ ಮಗುವನ್ನೇ ಕೊಂದ ತಾಯಿ!
ಒಳಸಂಚು ಬಹಿರಂಗ
ಪೊಲೀಸರ ಪ್ರಕಾರ, ರೋಹಿತ್ ತನ್ನ ಗೆಳತಿ ರೀತು ಜತೆ ತುಂಬಾ ದಿನಗಳಿಂದ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಸಂಬಂಧಕ್ಕೆ ಅಡ್ಡಿಯಾಗಿದ್ದರಿಂದ, ಪತ್ನಿ ಸಂಜು ಅವರನ್ನು ಕೊಲೆ ಮಾಡುವಂತೆ ಎಂದು ರೋಹಿತ್‌ಗೆ ರೀತು ಒತ್ತಡ ಹೇರಿದ್ದಳು. ಈ ಒತ್ತಡಕ್ಕೆ ಮಣಿದ ರೋಹಿತ್, ಕೊಲೆ ಮಾಡಿ, ದಡೋಡೆ ಹತ್ಯೆ ಮಾಡಲಾಗಿದೆ ಎಂದು ಬಿಂಬಿಸಲು ಯತ್ನಿಸಿದ್ದಾನೆ.
ಪೊಲೀಸರು ರೋಹಿತ್ ಸೈನಿಯನ್ನು ಪ್ರಮುಖ ಆರೋಪಿಯಾಗಿ ಮತ್ತು ಆತನ ಗೆಳತಿ ರೀತುವನ್ನು ಬಂಧಿಸಿದ್ದಾರೆ. ಇಬ್ಬರಿಂದಲೂ ಇನ್ನಷ್ಟು ವಿವರಗಳನ್ನು ಕಲೆಹಾಕಲು ವಿಚಾರಣೆ ನಡೆಸಲಾಗುತ್ತಿದೆ. ಈ ಕೃತ್ಯದ ಹಿಂದಿನ ಸಂಪೂರ್ಣ ಒಳಸಂಚು ಮತ್ತು ಉದ್ದೇಶಗಳನ್ನು ಕಂಡುಹಿಡಿಯಲು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ಅಜ್ಮೇರ್‌ನ ಸ್ಥಳೀಯ ಸಮುದಾಯದಲ್ಲಿ ಆತಂಕವನ್ನು ಉಂಟುಮಾಡಿದೆ.