ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣರಾಜ್ಯೋತ್ಸವಕ್ಕೆ ಮುನ್ನ ನೋಯ್ಡಾ, ಅಹಮದಾಬಾದ್ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್

Bomb threat to schools: ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ನೋಯ್ಡಾ ಮತ್ತು ಅಹಮದಾಬಾದ್‍ನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್‌ ಬಂದಿದ್ದು, ಆತಂಕ ಸೃಷ್ಟಿಸಿದೆ. ಮುನ್ನೆಚ್ಚರಿಕ ಕ್ರಮವಾಗಿ ಶಾಲಾ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದ್ದು, ಪೊಲೀಸರು ಹಾಗೂ ಭದ್ರತಾ ಪಡೆಗಳು ಪರಿಶೀಲನೆ ನಡೆಸಿವೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ನೋಯ್ಡಾ, ಅಹಮದಾಬಾದ್ ಶಾಲೆಗಳಿಗೆ ಬಾಂಬ್ ಬೆದರಿಕೆ

ನೋಯ್ಡಾ, ಅಹಮದಾಬಾದ್ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ -

Priyanka P
Priyanka P Jan 23, 2026 3:42 PM

ಲಖನೌ, ಜ. 23: ದೇಶದ ಹಲವೆಡೆ ಇತ್ತೀಚಿಗೆ ಬಾಂಬ್ ಬೆದರಿಕೆ ಸಂದೇಶ ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತರ ಪ್ರದೇಶದ ನೋಯ್ಡಾದ ಶಿವ ನಾಡರ್ ಶಾಲೆ ಮತ್ತು ಫಾದರ್ ಆಗ್ನೆಲ್ ಶಾಲೆ ಮತ್ತು ಅಹಮದಾಬಾದ್‌ನ ಹಲವು ಖಾಸಗಿ ಶಾಲೆಗಳಿಗೆ ಶುಕ್ರವಾರ (ಜನವರಿ 23) ಬಾಂಬ್ ಬೆದರಿಕೆ ಇ-ಮೇಲ್‌ ಬಂದಿವೆ. ಇದರ ಬೆನ್ನಲ್ಲೇ ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಬೇಗನೆ ಮನೆಗೆ ಕಳುಹಿಸಿದ್ದಾರೆ. ಗಣರಾಜ್ಯೋತ್ಸವಕ್ಕೆ (Republic Day) ಕೇವಲ ಮೂರು ದಿನಗಳ ಮೊದಲು ಈ ಬೆದರಿಕೆ ಬಂದಿರುವುದು ಆತಂಕ ಸೃಷ್ಟಿಸಿದೆ.

ನೋಯ್ಡಾದಲ್ಲಿ ಬೆದರಿಕೆ ಇ-ಮೇಲ್‌ಗೆ ಪ್ರತಿಕ್ರಿಯೆಯಾಗಿ ಭದ್ರತಾ ಸಿಬ್ಬಂದಿ ತಂಡವು ಎರಡು ಶಾಲೆಗಳಿಗೂ ದೌಡಾಯಿಸಿತು. ತನಿಖೆ ನಡೆಸಲು ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು ಆವರಣದಲ್ಲಿ ನಿಯೋಜಿಸಲಾಯಿತು. ನೋಯ್ಡಾದ ಶಿವ ನಾಡರ್ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ನಿಗದಿತ ಸ್ಥಳಗಳಿಗೆ ಸುರಕ್ಷಿತವಾಗಿ ಕರೆದೊಯ್ಯಲು ಬಸ್ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳನ್ನು ಕರೆದುಕೊಂಡು ಹೋಗುವ ವೇಳೆ ಬಸ್ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿರಲು ಪೋಷಕರಿಗೆ ಮನವಿ ಮಾಡಲಾಯಿತು. ಪೋಷಕರ ಸಹಕಾರಕ್ಕಾಗಿ ಶಿವ ನಾಡರ್ ಶಾಲೆಯ ಪ್ರಾಂಶುಪಾಲ ಅಂಜು ಸೋನಿ ಮನವಿ ಮಾಡಿದರು.

ಯುವಕನಿಂದ ಪ್ರೀತಿ ಭಂಗ; ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಕರೆ

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ನೋಯ್ಡಾ ಪೊಲೀಸರು, ಸ್ಥಳ ಪರಿಶೀಲನೆಯ ಜತೆಗೆ ಇ-ಮೇಲ್‌ಗಳ ತಾಂತ್ರಿಕ ತನಿಖೆಯನ್ನು ಸೈಬರ್ ತಂಡವೂ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಶಾಲೆಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲಾಗಿದೆ ಎಂದು ದೃಢಪಡಿಸಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡಬಾರದೆಂದು ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಅಹಮದಾಬಾದ್‍ನಲ್ಲಿ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಶಾಲಾ ಆಡಳಿತ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಲು ಅಹಮದಾಬಾದ್ ಪೊಲೀಸ್, ಬಾಂಬ್ ಸ್ಕ್ವಾಡ್ ಹಾಗೂ ಅಗ್ನಿಶಾಮಕ ದಳದ ತಂಡಗಳು ಶಾಲಾ ಆವರಣಕ್ಕೆ ಆಗಮಿಸಿವೆ.

ಇನ್ನು ಅಹಮದಾಬಾದ್‌ ನಗರದ 10ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬಾಂಬ್ ದಾಳಿ ಬೆದರಿಕೆ ಇ-ಮೇಲ್‌ಗಳು ಬಂದಿವೆ. ಶಾಲೆ ಪುನರಾರಂಭವಾದ ತಕ್ಷಣ, ಮಕ್ಕಳ ಸುರಕ್ಷತೆಗಾಗಿ ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ತಕ್ಷಣವೇ ಮನೆಗೆ ಕಳುಹಿಸಿ ಪೊಲೀಸರಿಗೆ ಮಾಹಿತಿ ನೀಡಿತು. ಪೊಲೀಸರು, ಶ್ವಾನ ದಳ, ಬಾಂಬ್ ನಿಷ್ಕ್ರಿಯದಳ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದವು. ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

ಗೋರಖ್‌ಪುರ-ಮುಂಬೈ ರೈಲಿಗೆ ಬಾಂಬ್ ಬೆದರಿಕೆ; ಅನುಮಾನಾಸ್ಪದ ಬ್ಯಾಗ್ ಬರಿಕೈಯಲ್ಲೇ ಹಿಡಿದು ಹೊರಟ ಪೊಲೀಸ್ ಅಧಿಕಾರಿ

ಇತ್ತೀಚಿನ ದಿನಗಳಲ್ಲಿ, ವಿಮಾನಗಳ ಮೇಲೂ ಬಾಂಬ್ ಬೆದರಿಕೆಗಳು ಹೆಚ್ಚುತ್ತಿವೆ. ಜನವರಿ 18ರಂದು ದೆಹಲಿಯಿಂದ ಸಿಲಿಗುರಿಯ ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಗುರುವಾರ ದೆಹಲಿಯಿಂದ ಪುಣೆಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ.

ದೆಹಲಿ-ಪುಣೆ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ

ಈ ಇಂಡಿಗೋ ವಿಮಾನವು ರಾತ್ರಿ 8:40ಕ್ಕೆ ಪುಣೆ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಅದು 9:24ಕ್ಕೆ ಪುಣೆಯಲ್ಲಿ ಇಳಿಯಿತು. ನಿಗದಿತ ಸಮಯಕ್ಕಿಂತ 44 ನಿಮಿಷ ತಡವಾಗಿ. ಪ್ರಯಾಣಿಕರು ಇಳಿದ ನಂತರ, ವಾಯು ಸಂಚಾರ ನಿಯಂತ್ರಣ ಮಂಡಳಿಯು ಬಾಂಬ್ ಬೆದರಿಕೆಯ ಬಗ್ಗೆ ಏಪ್ರನ್‌ಗೆ ಎಚ್ಚರಿಕೆ ನೀಡಿತು.