Children's Day 2025 Wishes: ಮಕ್ಕಳ ದಿನಾಚರಣೆ 2025; ಮುದ್ದು ಮಗುವಿಗೆ ಶುಭ ಕೋರಲು ಇಲ್ಲಿದೆ ಶುಭ ಸಂದೇಶಗಳು
Childrens Day Wish: ಪ್ರತಿವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನಮ್ಮ ಬದುಕಿನಲ್ಲಿ ಸಂತೋಷ ಖುಷಿಯನ್ನು ನೀಡುವ ಚಿಣ್ಣರಿಗೆ ಮೀಸಲಾದ ದಿನವಿದು. ಈ ಖುಷಿಯ ದಿನದಂದು ಅವರ ಬದುಕಲ್ಲಿ ಬೆಳಕು ಮೂಡಿ ಒಳ್ಳೆಯದಾಗಲಿ ಎಂದು ಹಾರೈಸಲು ಸಹಾಯವಾಗುವ ಶುಭಾಶಯದ ಸಂದೇಶಗಳು ಇಲ್ಲಿವೆ.
ಸಾಂಧರ್ಬಿಕ ಚಿತ್ರ -
ಬೆಂಗಳೂರು: ಜೀವನದಲ್ಲಿ ಏನೇ ದುಃಖ ಇರಲಿ, ಬೇಜಾರು ಇರಲಿ, ನೋವಿರಲಿ ಮಕ್ಕಳ ಮುಖ ನೋಡಿದ್ರೆ ಎಲ್ಲವೂ ಮಾಯವಾಗಿ ಬಿಡುತ್ತದೆ. ಅವರ ನಗುವಿಗೆ ಚಿಂತೆಗಳನ್ನು, ದುಗಡಗಳನ್ನು, ಜಿಜ್ಞಾಸೆಗಳನ್ನು ಮರೆಸುವ ಶಕ್ತಿ ಇದೆ. ಅವರಲ್ಲಿನ ಮುಗ್ಧತೆ, ತುಂಟಾಟ ನಮ್ಮ ಎಷ್ಟೋ ಸಂಕಷ್ಟಗಳಿಗೆ ಮದ್ದಾಗಲಿದ್ದು, ನಮ್ಮ ಮನ ಮನೆಯಲ್ಲಿ ಖುಷಿ ತುಂಬುವ ಮಕ್ಕಳನ್ನು ಸಂಭ್ರಮಿಸುವ ದಿನ. ಅವರ ಹಕ್ಕುಗಳ ಕುರಿತು, ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸುವ ದಿನ. ಇಂತಹ ಸುದಿನ ದಿನದಂದು ಮಕ್ಕಳ ಖುಷಿಯನ್ನು ಹೆಚ್ಚಿಸುವಾಗೇ ಮಕ್ಕಳ ದಿನಾಚರಣೆಯ(Children's Day) ಈ ರೀತಿ ಶುಭಾಶಯ(Wishes) ತಿಳಿಸಿ.
ಮಕ್ಕಳಿಗೆ ಹೀಗಿರಲಿ ನಿಮ್ಮ ಶುಭಾಶಯಗಳು
* ಉಜ್ವಲ ನಾಳೆಗಾಗಿ ಮಕ್ಕಳಿಕೆ ಶಕ್ತಿ ತುಂಬಿ. ಮಕ್ಕಳ ದಿನದ ಶುಭಾಶಯಗಳು
* ಮಗು ಎಂದರೆ ಜೀವನದ ನಿಜವಾದ ಉಡುಗೊರೆ. ಅವರು ಇಲ್ಲದೇ ನಾಳೆ ಇಲ್ಲ. ಮಕ್ಕಳ ದಿನದ ಶುಭಾಶಯಗಳು
* ಮಕ್ಕಳೆಂದರೆ ಹೆತ್ತವರ ಪಾಲಿಗೆ ಶಾಶ್ವತವಾಗಿ ಅರಳುವ ಹೂವುಗಳು. ಮಗುವು ಮನೆಗೆ ಸಂತೋಷ ತರುತ್ತದೆ. ಮಕ್ಕಳ ದಿನದ ಶುಭಾಶಯಗಳು
* ನಾವು ದೇಶದ ಎಲ್ಲಾ ಮಕ್ಕಳನ್ನು ಗೌರವದಿಂದ ಕಾರಣಬೇಕು, ಅವರಿಗೆ ರಕ್ಷಣೆ ನೀಡಬೇಕು. ಮಕ್ಕಳ ದಿನವು ನಮ್ಮ ಈ ಜವಾಬ್ದಾರಿಯನ್ನು ನಮಗೆ ಜ್ಞಾಪಿಸುತ್ತದೆ.
* ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ನಾವು ಸದಾ ಕೆಲಸ ಮಾಡುತ್ತೇವೆ ಎಂಬ ಭರವಸೆ ನೀಡೋಣ.
* ಒಂದು ಮಗುವಿಗೆ ಶಿಕ್ಷಣ ನೀಡುವುದು ಎಂದರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡುವುದು. ಮಗುವನ್ನು ಎಂದಿಗೂ ತಾತ್ಸಾರದಿಂದ ಕಾಣಬೇಡಿ. ಮಕ್ಕಳ ದಿನಾಚರಣೆಯ ಶುಭಾಶಯಗಳು.
* ಪ್ರತಿಯೊಂದು ಮಗುವೂ ವಿಭಿನ್ನ ರೀತಿಯ ಹೂವುಗಳು ಮತ್ತು ಈ ಹೂವುಗಳೆಲ್ಲಾ ಒಟ್ಟಾಗಿ ಈ ಜಗತ್ತನ್ನು ಸುಂದರವಾದ ಉದ್ಯಾನವನ್ನಾಗಿ ಮಾಡುತ್ತಾರೆ. ಮಕ್ಕಳ ದಿನಾಚರಣೆಯ ಶುಭಾಶಯಗಳು.
* ನಿಮ್ಮ ಮುಗ್ಧತೆ ನಮಗೆ ಹೀಗೆಯೇ ಸ್ಫೂರ್ತಿದಾಯಕವಾಗಿ ಮುಂದುವರಿಯಲಿ ಹಾಗೂ ನಿಮ್ಮ ನಗು ಎಲ್ಲಾ ನೋವು ಮರೆಸಲಿ. ನಿಮಗೆ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಈ ಸುದ್ದಿಯನ್ನು ಓದಿ: Children’s Day Speech in Kannada: ಮಕ್ಕಳ ದಿನಾಚರಣೆಗೆ ಈ ರೀತಿ ಭಾಷಣ ಮಾಡಿ! ಟಿಪ್ಸ್ ಇಲ್ಲಿದೆ ಓದಿ
* ಮಕ್ಕಳ ದಿನದ ಈ ಸಂದರ್ಭದಲ್ಲಿ ಎಲ್ಲಾ ಹೆಣ್ಣುಮಕ್ಕಳಿಗೆ ಹೃದಯ ತುಂಬಿದ ಶುಭಾಶಯಗಳು. ನಿಮ್ಮ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ ಎಂಬ ಹಾರೈಕೆ ನಮ್ಮದು.
* ಮಕ್ಕಳ ಸುರಕ್ಷತೆ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಮುಂದೆ ಬರೋಣ. ಮಕ್ಕಳ ದಿನದ ಶುಭಾಶಯಗಳು
* ನಮ್ಮ ದೇಶದಲ್ಲಿ ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡೋಣ, ಸಕಲ ಸಹಾಯ ಮಾಡೋಣ. ಶಿಕ್ಷಣ ಅವರ ಹಕ್ಕು. ಮಕ್ಕಳ ದಿನಾಚರಣೆಯ ಶುಭಾಶಯಗಳು.
ಇನ್ನು ಭಾರತದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ನಿಧನದ ನಂತರ, ಅವರ ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಚಾಚಾ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ. ಮಕ್ಕಳೇ ದೇಶದ ಭವಿಷ್ಯ ಎನ್ನುತ್ತಿದ್ದರು. ಹೀಗಾಗಿ ಅವರ ಜನ್ಮದಿನವನ್ನೇ ಮಕ್ಕಳ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆದು ಬಂದಿದೆ.
ಅಲ್ಲದೇ ಅವರು ನಮ್ಮ ಭಾರತದ ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು, ಯಾರೂ ಕೂಡ ವಿದ್ಯಾಭ್ಯಾಸದಿಂದ ವಂಚಿತರಾಗಿ ಕುಟುಂಬದಲ್ಲಿ ಅನಕ್ಷರತೆ ತಲೆ ದೂರಬಾರದು ಎಂದು ಮೊದಲು ಹೇಳಿದ್ದರು. ಈ ವಿಷಯಕ್ಕಾಗಿಯೇ ಜವಾಹರ್ ಲಾಲ್ ನೆಹರುರವರನ್ನು ಮಕ್ಕಳು ಪ್ರೀತಿಯಿಂದ " ಚಾಚಾ " ಎಂದು ಕರೆಯುತ್ತಿದ್ದರು.