Congress Poster: ʻಗಾಯಾಬ್ʼ ಪೋಸ್ಟರ್ ಶೇರ್... ಮೋದಿಯನ್ನು ದೂಷಿಸಲು ಹೋಗಿ ಮತ್ತೆ ವಿವಾದಕ್ಕೆ ಸಿಲುಕಿದ ಕಾಂಗ್ರೆಸ್
Pahalgam Terror Attack: ಪಹಲ್ಗಾಮ್‌ನಲ್ಲಿ ಬದುಕುಳಿದವರ ಖಾತೆಗಳನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಮಹಾರಾಷ್ಟ್ರ ಶಾಸಕ ಟೀಕೆಗೆ ಒಳಗಾದ ಬಳಿಕ ಮಂಗಳವಾರ ಕಾಂಗ್ರೆಸ್ ಮತ್ತೊಂದು ಹೊಸ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದೆ. ಕಾಂಗ್ರೆಸ್ ಪಕ್ಷದ ಪ್ರಾದೇಶಿಕ ಖಾತೆಗಳಿಂದ ಹಂಚಿಕೊಂಡಿರುವ 'ಗಯಾಬ್' ಪೋಸ್ಟರ್ ಅನ್ನು ಪಾಕಿಸ್ತಾನದ ಮಾಜಿ ಸಚಿವ 'ನಾಟಿ ಕಾಂಗ್ರೆಸ್' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಮರುಹಂಚಿಕೊಂಡಿದ್ದು, ಕಾಂಗ್ರೆಸ್ ವಿವಾದದಲ್ಲಿ ಸಿಲುಕುವಂತೆ ಮಾಡಿದೆ.


ನವದೆಹಲಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Pahalgam terror attack) ಬಳಿಕ ಸಾಮಾಜಿಕ ಜಾಲತಾಣಗಳು (Social media) ಚರ್ಚೆಯ ವೇದಿಕೆಯಾಗಿದೆ. ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ (Pakistan) ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ನಿರ್ಣಯಗಳಿಗೆ ಪ್ರತಿಕ್ರಿಯೆಯಾಗಿ ವಿವಿಧ ರಾಜಕೀಯ ಪಕ್ಷಗಳು ಪರವಿರೋಧ ಹೇಳಿಕೆಗಳನ್ನು ನೀಡುತ್ತಿವೆ. ಈ ನಡುವೆ ಕೇಂದ್ರ ಸರ್ಕಾರವನ್ನು ಟೀಕಿಸಲು ಹೋಗಿ ಕಾಂಗ್ರೆಸ್ ಸ್ವತಃ ಮುಜುಗರಕ್ಕೀಡಾಗುತ್ತಿರುವ ಕೆಲವು ಘಟನೆಗಳು ಈಗಾಗಲೇ ನಡೆದಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಕಾಂಗ್ರೆಸ್ ಹಾಕಿದ ಪೋಸ್ಟ್‌ವೊಂದಕ್ಕೆ ಪಾಕಿಸ್ತಾನ ಮಾಜಿ ಸಚಿವರು ಬೆಂಬಲ ನೀಡಿರುವುದು ಬಿಜೆಪಿ ನಾಯಕರ ಸಿಟ್ಟಿಗೆ ಕಾರಣವಾಗಿದೆ.
ಪಹಲ್ಗಾಮ್‌ನಲ್ಲಿ ಬದುಕುಳಿದವರ ಖಾತೆಗಳನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಮಹಾರಾಷ್ಟ್ರ ಶಾಸಕ ಟೀಕೆಗೆ ಒಳಗಾದ ಬಳಿಕ ಮಂಗಳವಾರ ಕಾಂಗ್ರೆಸ್ ಮತ್ತೊಂದು ಹೊಸ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದೆ. ಕಾಂಗ್ರೆಸ್ ಪಕ್ಷದ ಪ್ರಾದೇಶಿಕ ಖಾತೆಗಳಿಂದ ಹಂಚಿಕೊಂಡಿರುವ 'ಗಾಯಾಬ್' ಪೋಸ್ಟರ್ ಇದೀಗ ಹೊಸ ವಿವಾದವನ್ನು ಉಂಟು ಮಾಡಿದೆ. ಈ ಪೋಸ್ಟರ್ ಮೂಲಕ ಕಾಂಗ್ರೆಸ್ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಹೇಳಿದೆ.
'ಗಯಾಬ್' ಪೋಸ್ಟರ್ ನಲ್ಲಿ ಕುರ್ತಾ, ಪೈಜಾಮಾ ಮತ್ತು ಕಪ್ಪು ಪಾದರಕ್ಷೆಯ ವ್ಯಕ್ತಿಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಮುಖವಿಲ್ಲ. ಆದರೆ ಇದು ಪ್ರಧಾನಿಯನ್ನು ಹೋಲುತ್ತದೆ ಎಂದು ಎಲ್ಲರು ಬಹು ಬೇಗನೆ ಗುರುತಿಸಿದ್ದಾರೆ. ಪಾಕಿಸ್ತಾನದ ಮಾಜಿ ಸಚಿವ 'ನಾಟಿ ಕಾಂಗ್ರೆಸ್' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಈ ಪೋಸ್ಟರ್ ಅನ್ನು ಮರುಹಂಚಿಕೊಂಡಾಗ ಕಾಂಗ್ರೆಸ್ ವಿವಾದಲ್ಲಿ ಸಿಲುಕಿಕೊಂಡಿತು. ಬಳಿಕ ಬಿಜೆಪಿ ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಂದ ಕಾಂಗ್ರೆಸ್ ತೀವ್ರ ಟೀಕೆಯನ್ನು ಎದುರಿಸುತ್ತಿದೆ. ಕಾಂಗ್ರೆಸ್ "ಪಾಕಿಸ್ತಾನದಿಂದ ಆದೇಶಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ಪಾಕಿಸ್ತಾನದ ಮಾಜಿ ಸಚಿವ ಹೇಳಿದ್ದೇನು?
ಪಕ್ಷದ ಪೋಸ್ಟರ್ ಅನ್ನು ಮರು ಹಂಚಿಕೊಂಡ ಮಾಜಿ ಸಚಿವ ಫವಾದ್ ಅಹ್ಮದ್ ಹುಸೇನ್ ಚೌಧರಿ, ಕತ್ತೆಯ ತಲೆಯಿಂದ ಕೊಂಬುಗಳು ಕಾಣೆಯಾಗಿವೆ ಎಂದು ಕೇಳಿದ್ದೆ, ಆದರೆ ಇಲ್ಲಿ ಮೋದಿ ಕಾಣೆಯಾಗಿದ್ದಾರೆ ಎಂದು ಬರೆದಿದ್ದಾರೆ. ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡಿದಾಗಲೆಲ್ಲಾ ಕಾಂಗ್ರೆಸ್ ಕಣ್ಮರೆಯಾಗಿತ್ತು ಎಂದು ಟೀಕಿಸಿದರು.

ಅನೇಕ ಬಿಜೆಪಿ ನಾಯಕರು ಕೂಡ ಇದಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ಅವರು ಪಕ್ಷವು ಪಾಕಿಸ್ತಾನದಂತೆ ಮಾತನಾಡುವುದಲ್ಲದೆ ಅವರ ಕಾರ್ಯ, ಸಂಸ್ಕೃತಿ ಮತ್ತು ಪದ್ಧತಿಗಳು ಇಸ್ಲಾಮಾಬಾದ್‌ನಂತೆಯೇ ಮಾತನಾಡಲು ಪ್ರಾರಂಭಿಸಿವೆ. ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರ ತಲೆ ಕಾಣೆಯಾಗಿರುವ ಚಿತ್ರವನ್ನು ಹಂಚಿಕೊಂಡಿದೆ. ಇದು ಭಾರತೀಯರ ಮೇಲೆ ಪಾಕಿಸ್ತಾನಿ ರಾಯಭಾರಿ ಮಾಡಿರುವ ಕತ್ತು ಸೀಳಿದ ಸನ್ನೆಯಂತೆ. ಕಾಂಗ್ರೆಸ್ ಭಯೋತ್ಪಾದಕರಂತೆ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ "ಸರ್ತನ್ ಸೆ ಜುದಾ" ಎಂದರೆ 'ಶಿರಚ್ಛೇದ ಎಂಬುದನ್ನು ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಸ್ಲೀಪರ್ ಸೆಲ್‌ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಗುಜರಾತ್ ಗೃಹ ಸಚಿವ ಹರ್ಷ್ ಸಂಘವಿ ಪೋಸ್ಟರ್ ಅನ್ನು ಪ್ರಧಾನಿ ಮೋದಿಯವರ 'ಸರ್ತನ್ ಸೆ ಜುದಾ' ಚಿತ್ರ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ತಲೆಯಿಲ್ಲದ ಕುರ್ತಾವನ್ನು ಪ್ರದರ್ಶಿಸುತ್ತಿದೆ. ಇದು ಉಗ್ರಗಾಮಿ ಘೋಷಣೆಯನ್ನು ಪ್ರತಿಧ್ವನಿಸುತ್ತದೆ ಎಂದು ಬಿಜೆಪಿಯ ಅಧಿಕೃತ ಎಕ್ಸ್ ನಲ್ಲಿ ಟ್ವಿಟ್ ಮಾಡಲಾಗಿದೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು ಪ್ರತಿಕ್ರಿಯಿಸಿ ಪಾಕಿಸ್ತಾನ ಮತ್ತು ಕಾಂಗ್ರೆಸ್ ಒಂದೇ ರೀತಿ ಯೋಚಿಸುತ್ತದೆ. ಕಾಂಗ್ರೆಸ್ ಪಾಕಿಸ್ತಾನದಿಂದ ಆದೇಶಗಳನ್ನು ತೆಗೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ಅದೇ ಪೋಸ್ಟ್ ಅನ್ನು ಪಾಕಿಸ್ತಾನದ ಮಾಜಿ ಸಚಿವರು ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಪಾಕಿಸ್ತಾನದ ನಡುವೆ 'ಜುಗಲ್ಬಂದಿ' ನಡೆಯುತ್ತಿದೆ ಎಂದು ಹೇಳಿದ್ದಾರೆ.
ಎಫ್‌ಐಆರ್ ದಾಖಲು
ಉಗ್ರಗಾಮಿ ಘೋಷಣೆಯನ್ನು ಅಪಾಯಕಾರಿಯಾಗಿ ವೈಭವೀಕರಿಸುವ ಪ್ರಚೋದನಕಾರಿ ಚಿತ್ರದ ವಿರುದ್ಧ ದೆಹಲಿಯಲ್ಲಿ ವಕೀಲರೊಬ್ಬರು ಎಫ್‌ಐಆರ್ ದಾಖಲಿಸಿದ್ದಾರೆ.