ವೀಸಾ ಸಂದರ್ಶನಕ್ಕಾಗಿ ದಾಖಲೆ ಮರೆತ ಮಹಿಳೆಗೆ ನೆರವಾದ ಬ್ಲಿಂಕ್‌ಇಟ್; ಸಾಲಿನಲ್ಲಿ ನಿಂತಿದ್ದಾಗಲೇ ಸಿಕ್ತು ಪ್ರಿಂಟ್‌ಔಟ್
Viral News: ಬ್ಲಿಂಕ್‌ಇಟ್, ಜಿಯೋ ಮಾರ್ಟ್, ರಿಲಯನ್ಸ್ ಡಿಜಿಟಲ್ ಮಾರ್ಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಆ್ಯಪ್ ಬಳಕೆ ಹೆಚ್ಚಾಗುತ್ತಿದೆ. ಈ ಅನ್‌ಲೈನ್ ಶಾಪಿಂಗ್ ತಾಣಗಳು ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ಮಾಡುವುದಕ್ಕೆ ಸೀಮಿತವಾಗಿಲ್ಲ, ಕಷ್ಟದ ಸಮಯದಲ್ಲಿ ದಾಖಲೆಗಳನ್ನು ಒದಗಿಸುವ ಮೂಲಕವೂ ನೆರವಾಗುತ್ತವೆ ಎನ್ನುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಇತ್ತೀಚೆಗೆ ದಾಖೆಲೆ ಮರೆತು ಅಮೆರಿಕ ವೀಸಾದ ಸಂದರ್ಶನಕ್ಕೆ ತೆರಳಿದ ಮಹಿಳೆಗೆ ಅದರ ಪ್ರಿಂಟ್‌ಔಟ್ ಒದಗಿಸುವ ಮೂಲಕ ಬ್ಲಿಂಕ್‌ಇಟ್ ನೆರವಾಗಿದೆ.
ಸಾಂದರ್ಭಿಕ ಚಿತ್ರ. -
ನವದೆಹಲಿ, ಡಿ. 26: ಇಂದು ಆನ್‌ಲೈನ್ ಶಾಪಿಂಗ್ ಪ್ರವೃತ್ತಿ ಜನಪ್ರಿಯವಾಗುತ್ತಿದೆ. ಹಣ್ಣು, ತರಕಾರಿಯಂತ ಆಹಾರ ಸಾಮಗ್ರಿಯಿಂದ ಹಿಡಿದು ದೊಡ್ಡ ಮೊತ್ತದ ವ್ಯವಹಾರಕ್ಕೂ ಆನ್‌ಲೈನ್ ಮಾರ್ಕೆಂಟಿಗ್ ಬಳಕೆಯಾಗುತ್ತಿದೆ. ಬ್ಲಿಂಕ್‌ಇಟ್, ಜಿಯೋ ಮಾರ್ಟ್, ರಿಲಯನ್ಸ್ ಡಿಜಿಟಲ್ ಮಾರ್ಟ್ ಸೇರಿದಂತೆ ಅನೇಕ ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳ ಬಳಕೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಈ ಅನ್‌ಲೈನ್ ಶಾಪಿಂಗ್ ತಾಣಗಳು ಗ್ರಾಹಕರ ವಸ್ತುಗಳ ಡೆವರಿಗೆ ಮಾತ್ರ ಸೀಮಿತವಾಗಿಲ್ಲ. ಅದು ಕಷ್ಟದ ಸಮಯದಲ್ಲೂ ನೆರವಾಗುತ್ತದೆ ಎನ್ನುವುದಕ್ಕೆ ದೆಹಲಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಅಮೆರಿಕ ವೀಸಾ ಸಂದರ್ಶನಕ್ಕಾಗಿ ತೆರಳಿದ ಯುವತಿ ದಾಖಲೆ ಮರೆತು ಕಂಗಾಲಾಗಿ ನಿಂತಿದ್ದಾಗ ನೆರವಾಗಿದ್ದು ಬ್ಲಿಂಕಿಟ್ ಆ್ಯಪ್. ಈ ಬಗ್ಗೆ ಮಹಿಳೆಯೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ (Viral News) ಮಾಡಿದ್ದು, ಬ್ಲಿಂಕ್‌ಇಟ್‌ನಿಂದಾಗಿ ತನ್ನ ದೊಡ್ಡ ತಲೆನೋವೊಂದು ನಿವಾರಣೆಯಾಗಿದೆ ಎಂದಿದ್ದಾರೆ.
ದೆಹಲಿ ಅಮೆರಿಕ ರಾಯಭಾರ ಕಚೇರಿಯಲ್ಲಿ ಗೌರಿ ಗುಪ್ತಾ ತಮ್ಮ O-1 ವೀಸಾ ಸಂದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದರು. ಬಹಳಷ್ಟು ಜನರು ಅಲ್ಲಿ ನೆರೆದಿದ್ದರು. ಈ ಸಾಲಿನಲ್ಲಿ ನಿಂತಿದ್ದಾಗಲೇ ಗೌರಿ ಗುಪ್ತಾಗೆ ಶಾಕ್ ಕಾದಿತ್ತು. ವೀಸಾಗೆ ಬೇಕಾದ ಕೆಲವು ಪ್ರಮುಖ ದಾಖಲೆಗಳನ್ನು ತರಲು ಮರೆತಿರುವುದು ಆಗ ಅವರ ಗಮನಕ್ಕೆ ಬಂತು. ಈ ಸಂದರ್ಶನಕ್ಕೆ ಕೆಲವೇ ಸಮಯ ಬಾಕಿ ಉಳಿದಿತ್ತು. ಹೀಗಾಗಿ ಸಾಲಿನಿಂದ ತೆರಳಿದರೆ ಅವಕಾಸ ತಪ್ಪುವ ಭೀತಿ ಇತ್ತು. ಹೀಗಾಗಿ ಅವರಿಗೆ ಸಾಕಷ್ಟು ಗೊಂದಲ, ಆತಂಕ ಕಾಡಿತ್ತು.
ಗೌರಿ ಗುಪ್ತಾ ವರ ಪೋಸ್ಟ್:
I was standing in the queue for my O-1 visa interview at the Delhi US Embassy when I realized I might be missing a couple of documents that Google says are kind of important for O-1 approval.
— Gauri Gupta (@gauri__gupta) December 25, 2025
The queue was already insanely long even for an 8AM slot, and there was no time to run… pic.twitter.com/ivf3SHNHnc
ಅವರ ಆತಂಕವನ್ನು ಗಮನಿಸಿದ ಭದ್ರತಾ ಸಿಬ್ಬಂದಿಯೊಬ್ಬರು ದಾಖಲೆಗಳನ್ನು ತಲುಪಿಸಲು ಬ್ಲಿಂಕ್‌ಇಟ್ ಬಳಸುವಂತೆ ಸೂಚಿಸಿದರು. ಬ್ಲಿಂಕ್‌ಇಟ್ ಆ್ಯಪ್ ಮೂಲಕ ಪ್ರಿಂಟ್‌ಔಟ್ ಆರ್ಡರ್ ಮಾಡುವಂತೆ ಸಲಹೆ ನೀಡಿದ್ದಾರೆ. ಆದ್ದರಿಂದ ಗೌರಿ ಸಾಲಿನಲ್ಲಿ ನಿಂತಿದ್ದಾಗಲೇ ದಾಖಲೆಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದೆ ಪ್ರಿಂಟ್‌ಔಟ್ ತಲುಪಿಸುವಂತೆ ಸೂಚಿಸಿದರು. ಅಚ್ಚರಿಯೆಂದರೆ, ಕೇವಲ 15 ನಿಮಿಷಗಳಲ್ಲಿ ದಾಖಲೆಯ ಪ್ರಿಂಟ್ ಅವರ ಕೈ ಸೇರಿತು.
ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ ಬುಲ್ ನಾಯಿಯ ಡೆಡ್ಲಿ ಅಟ್ಯಾಕ್
ಸಮಯಕ್ಕೆ ಸರಿಯಾಗಿ ಬೇಕಾದ ದಾಖಲೆಗಳು ಸಿಕ್ಕಿದ್ದರಿಂದ ಗೌರಿ ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿದರು. ಇದೀಗ ಅವರಿಗೆ ವೀಸಾ ಕೂಡ ಸಿಕ್ಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. "ಬ್ಲಿಂಕ್‌ಇಟ್ ನನ್ನ ದಿನವನ್ನು ಉಳಿಸಿದೆ. ಕೊನೆಯ ನಿಮಿಷದಲ್ಲಿ ಈ ಆ್ಯಪ್ ನಿಜವಾಗಿಯೂ ನೆರವಾಗಿದೆ. ಭಾರತದಲ್ಲಿನ ಇಂತಹ ಸೇವೆಗಳು ನಿಜವಾದ ಸವಲತ್ತುʼʼ ಎಂದು ಅವರು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು ಭಾರತದ ಆಧುನಿಕ ತಂತ್ರಜ್ಞಾನ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ರೀತಿಯ ತಂತ್ರಜ್ಞಾನವು ನಿಜಕ್ಕೂ ಜೀವರಕ್ಷಕ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ತಂದೆಯ ಚಿಕಿತ್ಸೆಗಾಗಿ ಸರದಿಯಲ್ಲಿ ಕಾಯುತ್ತಿದ್ದಾಗ ತುರ್ತಾಗಿ ಕೆಲವು ದಾಖಲೆಗಳ ಅಗತ್ಯ ಇತ್ತು. ನಾನು ಬೇರೆ ನಗರದಲ್ಲಿ ಇದ್ದುಕೊಂಡೆ ಪ್ರಿಂಟ್‌ಔಟ್‌ಗಳನ್ನು ಆರ್ಡರ್ ಮಾಡಿದೆ. ನಿಜವಾಗಿಯೂ ಇದರಿಂದ ತುಂಬ ಅನುಕೂಲವಾಗಿದೆ ಎಂದು ಇನ್ನೊಬ್ಬರು ತನಗಾದ ಅನುಭವ ಶೇರ್ ಮಾಡಿದ್ದಾರೆ.