ದೆಹಲಿ ಗಾಳಿಯ ಗುಣಮಟ್ಟ ‘ಅತ್ಯಂತ ಕಳಪೆ’: 387ಕ್ಕೆ ತಲುಪಿದ AQI ಸೂಚ್ಯಂಕ
Delhi AQI:38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 18 ಕೇಂದ್ರಗಳಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದಿದ್ದು, QI ಮಟ್ಟವನ್ನು 400 ಕ್ಕಿಂತ ಹೆಚ್ಚಿಸಿವೆ. ಅವುಗಳಲ್ಲಿ ವಾಜಿರ್‌ಪುರ, ಜಹಾಂಗೀರ್‌ಪುರಿ ಮತ್ತು ವಿವೇಕ್ ವಿಹಾರ್ ಅತ್ಯಂತ ಕಲುಷಿತ ತಾಣಗಳಾಗಿವೆ.
Delhi -
ನವದೆಹಲಿ, ಡಿ.13: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi AQI) ಗಾಳಿಯ ಗುಣಮಟ್ಟ ಇಂದು (ಶನಿವಾರ) ಅತ್ಯಂತ 'ಕಳಪೆ' ಮಟ್ಟಕ್ಕೆ ಕುಸಿದಿದೆ. ಬೆಳಿಗ್ಗೆ 9 ಗಂಟೆಗೆ ವಾಯು ಗುಣಮಟ್ಟದ ಸೂಚ್ಯಂಕವು (ಎಕ್ಯೂಐ) 387ರಷ್ಟಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. ಇದು ತೀವ್ರ ಕಳವಳವನ್ನು ಹುಟ್ಟುಹಾಕಿದೆ. ಮಂಜಿನಿಂದ ಆವೃತವಾಗಿದ್ದು, ಇದು ಹಲವಾರು ಪ್ರದೇಶಗಳಲ್ಲಿ ಗೋಚರತೆಯನ್ನು ಕಡಿಮೆ ಮಾಡಿದೆ.
ದೆಹಲಿ ವಿಮಾನ ನಿಲ್ದಾಣವೂ ಕಡಿಮೆ ಗೋಚರತೆ ಇರುವ ಕಾರಣದಿಂದಾಗಿ ವಿಶೇಷ ಕಾರ್ಯಾಚರಣೆಗಳು ಜಾರಿಯಲ್ಲಿವೆ ಎಂದು ಅಧಿಕಾರಿಗಳು ಪ್ರಕಟಣೆ ನೀಡಿದ್ದು, ಪ್ರಯಾಣಿಕರು ತಮ್ಮ ವಿಮಾನದ ಮಾಹಿತಿಗಾಗಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ ದೆಹಲಿ ಮಾಲಿನ್ಯ: ಪ್ರಮುಖ ಟೂರ್ನಮೆಂಟ್‌ನ ನಾಕೌಟ್ ಹಂತಗಳನ್ನು ದೆಹಲಿಯಿಂದ ಮುಂಬೈಗೆ ಸ್ಥಳಾಂತರಿಸಿದ ಬಿಸಿಸಿಐ
38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 18 ಕೇಂದ್ರಗಳಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದಿದ್ದು, QI ಮಟ್ಟವನ್ನು 400 ಕ್ಕಿಂತ ಹೆಚ್ಚಿಸಿವೆ. ಅವುಗಳಲ್ಲಿ ವಾಜಿರ್‌ಪುರ, ಜಹಾಂಗೀರ್‌ಪುರಿ ಮತ್ತು ವಿವೇಕ್ ವಿಹಾರ್ ಅತ್ಯಂತ ಕಲುಷಿತ ತಾಣಗಳಾಗಿವೆ.
ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ ‘ಉತ್ತಮ’ ಎಂದು, 51ರಿಂದ 100ರಷ್ಟಿದ್ದರೆ ‘ಸಮಾಧಾನಕರ’, 101ರಿಂದ 200ರಷ್ಟಿದ್ದರೆ ‘ಸಾಧಾರಣ’, 201 ರಿಂದ 300ರಷ್ಟಿದ್ದರೆ ‘ಕಳಪೆ’ ಹಾಗೂ 301ರಿಂದ 400ರಷ್ಟಿದ್ದರೆ ‘ಅತ್ಯಂತ ಕಳಪೆ’ ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ ‘ತೀವ್ರ ಕಳಪೆ’ ಹಾಗೂ 450ಕ್ಕಿಂತ ಹೆಚ್ಚಾದರೆ ‘ತೀವ್ರಕ್ಕಿಂತಲೂ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.
Update issued at 06:54 hours.
— Delhi Airport (@DelhiAirport) December 13, 2025
Kind attention to all flyers!#Fog #FogAlert #DelhiAirport pic.twitter.com/PvOE36WUY3
IMD ಈ ವಾರಾಂತ್ಯದಲ್ಲಿ ತಾಪಮಾನವು ಸ್ವಲ್ಪ ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಕನಿಷ್ಠ ತಾಪಮಾನವು 10-12°C ಮತ್ತು ಗರಿಷ್ಠ ತಾಪಮಾನವು 23-25°C ರಷ್ಟಿರಬಹುದು. ಮಧ್ಯಮ ಮಂಜು ಮುಂದುವರಿಯುವ ನಿರೀಕ್ಷೆಯಿದ್ದು, ಇದು ವಾಯು ಗುಣಮಟ್ಟವನ್ನು ಮತ್ತಷ್ಟು ಹದಗೆಡಿಸುತ್ತದೆ. ನಾಗರಿಕರು ಆರೋಗ್ಯ ಸಲಹೆಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಿದೆ.
ಸತತ ಒಂಬತ್ತು ದಿನಗಳ ಕಾಲ 'ತುಂಬಾ ಕಳಪೆ' ಗಾಳಿಯನ್ನು ಸಹಿಸಿಕೊಂಡ ನಂತರ, ರಾಜಧಾನಿ ಮಂಗಳವಾರ ಸ್ವಲ್ಪ ಮಟ್ಟಿಗೆ ಉಸಿರಾಟದ ತೊಂದರೆ ಅನುಭವಿಸಿತು. ಸರಾಸರಿ AQI 282 ಕ್ಕೆ ಇಳಿದು 'ಕಳಪೆ' ವರ್ಗಕ್ಕೆ ಇಳಿಯಿತು. ಬುಧವಾರ ಪರಿಸ್ಥಿತಿ ಸ್ವಲ್ಪ ಸುಧಾರಿಸಿ 259 ರ AQI ಇತ್ತು, ನಂತರ ಗುರುವಾರ ಮತ್ತೆ 307 ಕ್ಕೆ ಕುಸಿದು ಶುಕ್ರವಾರ 349 ಕ್ಕೆ ತೀವ್ರವಾಗಿ ಹದಗೆಟ್ಟಿತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಸಮೀರ್ ಅಪ್ಲಿಕೇಶನ್‌ನ ಮಾಹಿತಿಯು ತಿಳಿಸಿದೆ.