ಜೆನ್ ಝೀ ಎಫೆಕ್ಟ್: ಬಿಜೆಪಿ ಸೇರಿದ ಮೇಲೆ 10 ಲಕ್ಷ ಫಾಲೋವರ್ಸ್ಗಳನ್ನು ಕಳೆದುಕೊಂಡ ರಾಘವ್ ಚಡ್ಡಾ
ಆಪ್ ಸಂಸದರಾಗಿದ್ದ ರಾಘವ್ ಚಡ್ಡಾ ಬಿಜೆಪಿ ಸೇರಿದ ಬಳಿಕ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ 10 ಲಕ್ಷ ಫಾಲೋವರ್ಸ್ಗಳನ್ನು ಕಳೆದುಕೊಂಡಿದ್ದಾರೆ. ರಾಘವ್ ಚಡ್ಡಾ ಅವರ ನಡೆಯು ಜೆನ್ ಝೀ ಇಷ್ಟವಾಗಿಲ್ಲ ಎನ್ನಲಾಗಿದೆ. ಯುವಜನರ ಮೆಚ್ಚಿನ ನಾಯಕನಾಗಿ ಹೊರಹೊಮ್ಮಿದ್ದ ಅವರು ಕಳೆದ 24 ಗಂಟೆಗಳಲ್ಲಿ ಅವರು 10 ಲಕ್ಷ ಫಾಲೋವರ್ಸ್ಗಳನ್ನು ಕಳೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ರಾಜ್ಯಸಭಾ (Rajya sabha) ಸಂಸದ ರಾಘವ್ ಚಡ್ಡಾ (MP Raghav Chadha) ಅವರು ಕಳೆದ 24 ಗಂಟೆಗಳಲ್ಲಿ ಅವರು 10 ಲಕ್ಷ ಫಾಲೋವರ್ಸ್ಗಳನ್ನು ಕಳೆದುಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಹುದ್ದೆಯಿಂದ ವಜಾಗೊಂಡ ಆಪ್ (AAP) ಸಂಸದ ರಾಘವ್ ಚಡ್ಡಾ ಅವರು ಶುಕ್ರವಾರ ಪಕ್ಷ ತ್ಯಜಿಸಿ ಬಿಜೆಪಿ (BJP) ಸೇರಿಕೊಂಡರು. ಅವರ ಈ ನಡೆಯು ಜೆನ್ ಝೀಗಳನ್ನು ಪ್ರಭಾವಿತಗೊಳಿಸಿಲ್ಲ. ಯಾಕೆಂದರೆ ಅವರು ಬಿಜೆಪಿ ಸೇರಿದ ಬಳಿಕ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ 10 ಲಕ್ಷ ಫಾಲೋವರ್ಸ್ಗಳನ್ನು ಕಳೆದುಕೊಂಡರು.
ಆಪ್ ಸಂಸದರಾಗಿದ್ದ ರಾಘವ್ ಚಡ್ಡಾ ಬಿಜೆಪಿ ಸೇರಿರುವುದು ಅನೇಕರಿಗೆ ಆಘಾತಕಾರಿಯಾಗಿದೆ. ಅವರು ಅಪ್ ತೊರೆದ ತಕ್ಷಣ ರಾಷ್ಟ್ರ ರಾಜಧಾನಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಕಂಡು ಬಂದಿತ್ತು. ರಾಘವ್ ಚಡ್ಡಾ ಅವರು ತಮ್ಮೊಂದಿಗೆ ಇತರ ಆರು ಆಪ್ ರಾಜ್ಯಸಭಾ ಸಂಸದರನ್ನು ಕೂಡ ಬಿಜೆಪಿಗೆ ಸೇರಿಸಿದರು. ಇದರಿಂದಾಗಿ ಇದೀಗ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷವು ತನ್ನ ನಾಯಕರನ್ನು ಹಿಡಿದಿಡಲು ಪ್ರಯತ್ನಿಸುತ್ತಿದೆ.
ರಾಘವ್ ಚಡ್ಡಾ ಬಿಜೆಪಿ ಸೇರಿದ ಬಳಿಕ ಮೊದಲ ಬಾರಿಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?
ವಾರಗಳ ಹಿಂದೆಯಷ್ಟೇ ರಾಘವ್ ಚಡ್ಡಾ ಅವರನ್ನು ಆಪ್ ರಾಜ್ಯಸಭಾ ಉಪ ನಾಯಕ ಸ್ಥಾನದಿಂದ ತೆಗೆದು ಹಾಕಿತ್ತು. ಬಳಿಕ ಅವರು ಬಿಜೆಪಿ ಸೇರ್ಪಡೆಗೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಚಡ್ಡಾ ಅವರು ಬಿಜೆಪಿಗೆ ಸೇರಿದ 24 ಗಂಟೆಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು ಒಂದು ಕೋಟಿ ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ.
ಅವರು ಶುಕ್ರವಾರ 14.6 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಶನಿವಾರ ಮಧ್ಯಾಹ್ನ 1 ಗಂಟೆಗೆ ಅವರ ಅನುಯಾಯಿಗಳ ಸಂಖ್ಯೆ 13.5 ಮಿಲಿಯನ್‌ಗೆ ಇಳಿಕೆಯಾಗಿದೆ. ಚಡ್ಡಾ ಅವರು ಬಿಜೆಪಿ ಸೇರಿದ್ದರಿಂದ ಜೆನ್ ಝೀ ಆಕ್ರೋಶಿತರಾಗಿದ್ದರೆ ಎಂಬುದನ್ನು ಈ ಅಂಕಿ ಅಂಶಗಳು ತೋರಿಸಿವೆ. ಎನ್ನುತ್ತಾರೆ ರಾಜಕೀಯ ವಿಮರ್ಶಕರು.
ಇನ್‌ಸ್ಟಾಗ್ರಾಮ್‌ನಲ್ಲಿ ರಾಘವ್ ಚಡ್ಡಾ ವಿರುದ್ಧ ಜೆನ್ ಝೀ ಗಳು ಅನ್‌ಫಾಲೋ ಅಭಿಯಾನವನ್ನು ಪ್ರಾರಂಭಿಸಿರುವುದು ಕಳೆದ 24 ಗಂಟೆಗಳಲ್ಲಿ ಅವರ ಅನುಯಾಯಿಗಳ ಸಂಖ್ಯೆ ಇಳಿಮುಖವಾಗಲು ಪ್ರಮುಖ ಕಾರಣವಾಗಿದೆ ಎಂದು ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್ ಗವಾಂಡೆ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಇವತ್ತು ಇಂಟರ್ನೆಟ್ ನಿಮ್ಮನ್ನು ರಾತ್ರೋರಾತ್ರಿ ಹೀರೋ ಮಾಡಬಹುದು ಅಥವಾ ರಾತ್ರೋರಾತ್ರಿ ಶೂನ್ಯಕ್ಕೆ ಇಳಿಸಬಹುದು ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಹೇಳಿದ್ದಾರೆ.
ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ ಸಾಮಾನ್ಯ ಜನರ ಪರವಾಗಿ ಧ್ವನಿ ಎತ್ತಿ ಎಲ್ಲರ ಗಮನ ಸೆಳೆದಿದ್ದರು. ಜನರ ದೈನಂದಿನ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಗಳನ್ನು ಅವರು ನಿರಂತರವಾಗಿ ಸಂಸತ್ತಿನಲ್ಲಿ ಎತ್ತಿ ಯುವ ಜನರ ಮೆಚ್ಚುಗೆ ಗಳಿಸಿದ್ದರು.
West Bengal Election ground report by Raghav Sharma Nidle: ಮಮತಾ ದೀದಿಯ ನಿದ್ದೆಗೆಡಿಸಿದ್ದ ಅಭಯಾಳ ಸುತ್ತ...
ಪಿತೃತ್ವ ರಜೆ, ಸಂಚಾರ ಬಿಕ್ಕಟ್ಟು, ಟೆಲಿಕಾಂ ಕಂಪನಿಗಳಿಂದ ದೈನಂದಿನ ಡೇಟಾ ಮಿತಿಗಳು, ವಿಮಾನ ನಿಲ್ದಾಣಗಳಲ್ಲಿ ದುಬಾರಿ ಸಮೋಸಾಗಳು ಮತ್ತು 10 ನಿಮಿಷಗಳ ವಿತರಣಾ ಮಾದರಿಗಳ ಮೂಲಕ ಗಿಗ್ ಕಾರ್ಮಿಕರ ಶೋಷಣೆ ಇವುಗಳಲ್ಲಿ ಮುಖ್ಯವಾದವುಗಳು. ಇದರಿಂದ ಆಪ್ ಅವರನ್ನು ಉಪನಾಯಕನ ಸ್ಥಾನದಿಂದ ತೆಗೆದು ಹಾಕಿದ ಬಳಿಕ ಅವರಿಗೆ ಅಪಾರ ಬೆಂಬಲ ದೊರೆಯಿತು. ಅನೇಕರು ಅವರು ತಮ್ಮದೇ ಆದ ಪಕ್ಷ ಸ್ಥಾಪಿಸಲಿ ಎನ್ನುವ ಸಲಹೆಯನ್ನು ಕೂಡ ನೀಡಿದ್ದರು. ಆದರೆ ಚಡ್ಡಾ ಅವರು ಬಿಜೆಪಿ ಸೇರಿ ಜೆನ್ ಝೀಗಳನ್ನು ನಿರಾಶೆಗೊಳಿಸಿದ್ದಾರೆ.