Bihar Assembly Election: 1 ಕೋಟಿ ಸರ್ಕಾರಿ ಉದ್ಯೋಗ, 10 ಲಕ್ಷ ರೂ. ಸಹಾಯ ಧನ; ಬಿಹಾರ ಚುನಾವಣೆಗೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ
ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮುಂದಿನ ತಿಂಗಳು ನಡೆಯಲಿರುವ 2025 ರ ಬಿಹಾರ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದರು. ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಬಿಸಿ) ಜನರಿಗೆ 10 ಲಕ್ಷ ರೂ. ನೀಡುವುದಾಗಿ ಎನ್‌ಡಿಎ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಅಷ್ಟೇ ಅಲ್ಲದೇ 1 ಕೋಟಿ ಸರ್ಕಾರಿ ಉದ್ಯೋಗ, 1 ಕೋಟಿ ಲಕ್‌ಪತಿ ದೀದಿ ಯೋಜನೆಗಳ ಭರವಸೆಯನ್ನು ನೀಡಲಾಗಿದೆ.
 
                                -
 Vishakha Bhat
                            
                                Oct 31, 2025 11:35 AM
                                
                                Vishakha Bhat
                            
                                Oct 31, 2025 11:35 AM
                            ಪಟನಾ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮುಂದಿನ ತಿಂಗಳು ನಡೆಯಲಿರುವ 2025 ರ ಬಿಹಾರ ವಿಧಾನಸಭಾ (Bihar Assembly Election) ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದರು. ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪೇಂದ್ರ ಕುಶ್ವಾಹ, ಚಿರಾಗ್ ಪಾಸ್ವಾನ್, ಸಾಮ್ರಾಟ್ ಚೌಧರಿ, ಜಿತನ್ ರಾಮ್ ಮಾಧಿ ಮತ್ತು ಮೈತ್ರಿಕೂಟದ ಇತರ ನಾಯಕರು ಉಪಸ್ಥಿತರಿದ್ದರು. "ಪಂಚ ಪಾಂಡವರ ಗ್ಯಾರಂಟಿ" ಎಂದು ಇದನ್ನು ಉಲ್ಲೇಖಿಸಲಾಗಿದೆ.
ಈ ಮುಖ್ಯ ಚುನಾವಣಾ ಪ್ರಣಾಳಿಕೆಯನ್ನು ಶ್ಲಾಘಿಸಿದ ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್, "ಬಿಹಾರದ ಪ್ರಣಾಳಿಕೆಯು ಪ್ರಧಾನಿ ನರೇಂದ್ರ ಮೋದಿಯವರ ಭರವಸೆ, ನಿತೀಶ್ ಕುಮಾರ್ ಅವರ ವಿಶ್ವಾಸ ಮತ್ತು ಸಂಯುಕ್ತ ಬಿಹಾರದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ಈ ಪ್ರಣಾಳಿಕೆಯು ಬಲವಾದ ಏಕತೆಯ ಮೂಲಕ ಅಭಿವೃದ್ಧಿ ಹೊಂದಿದ ಬಿಹಾರದ ಕನಸನ್ನು ನನಸಾಗಿಸುವ ಮಾರ್ಗಸೂಚಿಯಾಗಿದೆ" ಎಂದು ಹೇಳಿದರು. ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಬಿಸಿ) ಜನರಿಗೆ 10 ಲಕ್ಷ ರೂ. ನೀಡುವುದಾಗಿ ಎನ್‌ಡಿಎ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ ಎಂದು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ.
ಪಾಟ್ನಾ ಜೊತೆಗೆ, ನಗರದ ನಾಲ್ಕು ಹೆಚ್ಚುವರಿ ನಗರಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಪರಿಚಯಿಸಲಾಗುವುದು ಎಂದು ಚೌಧರಿ ಘೋಷಿಸಿದರು. ಬಿಹಾರದ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ, ಬಿಹಾರದಲ್ಲಿ 10 ಹೊಸ ಕೈಗಾರಿಕಾ ಪಾರ್ಕ್‌ಗಳನ್ನು ತೆರೆಯಲಾಗುವುದು ಎಂದು ಹೇಳಿದರು. ಎನ್‌ಡಿಎ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಿಸಲಿದೆ ಎಂದು ಅವರು ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ 1 ಕೋಟಿ ಸರ್ಕಾರಿ ಉದ್ಯೋಗ, 1 ಕೋಟಿ ಲಕ್‌ಪತಿ ದೀದಿ ಯೋಜನೆಗಳ ಭರವಸೆಯನ್ನು ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ: Narendra Modi: 'ಛತ್ ಪೂಜೆಯನ್ನು ಅವಮಾನಿಸಿದವರಿಗೆ ಬಿಹಾರದ ಜನರೇ ಉತ್ತರ ನೀಡುತ್ತಾರೆ'; ಕಾಂಗ್ರೆಸ್- RJD ವಿರುದ್ಧ ಮೋದಿ ಕಿಡಿ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದ ಮಹಾಘಟಬಂಧನ್ ನಡುವೆ ಭಾರೀ ಸ್ಪರ್ಧೆ ಏರ್ಪಡಲಿದೆ. ಎನ್‌ಡಿಎ ಮೈತ್ರಿಯಲ್ಲಿ ಬಿಜೆಪಿ, ಲೋಕ್ ಜನಶಕ್ತಿ ಪಾರ್ಟಿ (ರಾಮ ವಿಲಾಸ್), ಹಿಂದುಸ್ತಾನಿ ಆವಾಮ್ ಮೋರ್ಚಾ, ರಾಷ್ಟ್ರೀಯ ಲೋಕಮೋರ್ಚಾ ಪಕ್ಷಗಳಿವೆ. ಇನ್ನು ಇಂಡಿಯಾ ಒಕ್ಕೂಟದ ಮಹಾಘಟಬಂಧನ್ ಮೈತ್ರಿಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಾಂಗ್ರೆಸ್, ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್), ಕಮ್ಯೂನಿಸ್ಟ್ (ಸಿಪಿಐ), ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಎಂ), ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ (ಮುಕೇಶ್ ಸಹಾನಿ) ಪಾರ್ಟಿಗಳು ಮೈತ್ರಿಯಾಗಿ ಬಿಹಾರ ಚುನಾವಣೆಗೆ ಸ್ಪರ್ಧಿಸುತ್ತಿದೆ.
 
            