ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunjay Kapur Death: ಪೋಲೋ ಆಡುತ್ತಿದ್ದಾಗಲೇ ಹೃದಯಾಘಾತ- ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ನಿಧನ

ಬಾಲಿವುಡ್ ನಟಿ ಕರಿಷ್ಮಾ ಕಪೂರ್ (Bollywood actress Karisma Kapoor) ಅವರ ಮಾಜಿ ಪತಿ (ex-husband), ಉದ್ಯಮಿ ಸಂಜಯ್ ಕಪೂರ್ (industrialist Sunjay Kapur) ಹೃದಯಾಘಾತದಿಂದ (heart attack) ಗುರುವಾರ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಪೋಲೋ ಆಡುತ್ತಿದ್ದಾಗಲೇ ಅವರಿಗೆ ಹೃದಯಾಘಾತವಾಗಿದೆ.

ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ನಿಧನ

ನವದೆಹಲಿ: ಬಾಲಿವುಡ್ ನಟಿ ಕರಿಷ್ಮಾ ಕಪೂರ್ (Bollywood actress Karisma Kapoor) ಅವರ ಮಾಜಿ ಪತಿ (ex-husband), ಉದ್ಯಮಿ ಸಂಜಯ್ ಕಪೂರ್ (industrialist Sunjay Kapur) ಹೃದಯಾಘಾತದಿಂದ (heart attack) ಗುರುವಾರ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಪೋಲೋ ಆಡುತ್ತಿದ್ದಾಗಲೇ ಅವರಿಗೆ ಹೃದಯಾಘಾತವಾಗಿದೆ. ಸಂಜಯ್ ಕಪೂರ್ ಗುರುವಾರ ಮಧ್ಯಾಹ್ನ ಅವರು ಏರ್ ಇಂಡಿಯಾ ವಿಮಾನ ದುರಂತಕ್ಕೆ (Air India crash) ದುಃಖವನ್ನು ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದರು. ಇದು ಅವರ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಕೊನೆಯ ಪೋಸ್ಟ್ ಆಗಿದೆ. ಇದಾಗಿ ಕೆಲವು ಗಂಟೆಗಳ ಬಳಿಕ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಗುಜರಾತ್ ನಲ್ಲಿ ಗುರುವಾರ ಮಧ್ಯಾಹ್ನ ಉಂಟಾದ ಏರ್ ಇಂಡಿಯಾ ದುರಂತಕ್ಕೆ ದುಃಖ ವ್ಯಕ್ತಪಡಿಸಿದ ಕರಿಷ್ಮಾ ಕಪೂರ್ ಅವರ ಮಾಜಿ ಪತಿ, ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಕೆಲವೇ ಗಂಟೆಗಳ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ ಪೋಲೋ ಆಡುತ್ತಿದ್ದಾಗಲೇ ಹೃದಯಾಘಾತವಾಗಿದೆ.

ಆಟೋ ಕಾಂಪೊನೆಂಟ್ಸ್ ಕಂಪನಿ ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷರಾಗಿದ್ದ ಸಂಜಯ್ ಕಪೂರ್ ಈ ಹಿಂದೆ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರನ್ನು ವಿವಾಹವಾಗಿದ್ದರು. 2003ರಲ್ಲಿ ಮದುವೆಯಾಗಿದ್ದ ಕರಿಷ್ಮಾ ಮತ್ತು ಸಂಜಯ್ 2016ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಇವರಿಗೆ ಸಮೈರಾ ಮತ್ತು ಕಿಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಯುಕೆಯಲ್ಲಿ ಪೋಲೊ ಆಟವಾಡುತ್ತಿದ್ದಾಗಲೇ ಸಂಜಯ್ ಅನಾರೋಗ್ಯಕ್ಕೆ ಒಳಗಾಗಿದ್ದು, ಬಳಿಕ ನಿಧನರಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಉದ್ಯಮಿ ಸುಹೇಲ್ ಸೇಠ್ ಅವರು ಟ್ವಿಟ್ ಮಾಡಿದ್ದು, ಸಂಜಯ್ ಕಪೂರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ: ಅವರು ಇಂದು ಮುಂಜಾನೆ ಇಂಗ್ಲೆಂಡ್‌ನಲ್ಲಿ ನಿಧನರಾದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: UP Crime: ಅಶ್ಲೀಲ ಕೃತ್ಯವನ್ನು ಪ್ರಶ್ನಿಸಿದ್ದೇ ತಪ್ಪಾಯಿತು: ದಂಪತಿಯ ಹತ್ಯೆಗೈದ ʼಮೆಂಟಲ್ʼ

ಇದರೊಂದಿಗೆ ಸಂಜಯ್ ಓದಿದ್ದ ಡೂನ್ ಶಾಲೆಯು ಸಂಜಯ್ ಕಪೂರ್ ಸ್ಮರಣಾರ್ಥ ಗೌರವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಂಜಯ್ ಕಪೂರ್ ಅವರ ನಿಧನದಿಂದ ನಮಗೆ ತುಂಬಾ ದುಃಖವಾಗಿದೆ. ಇವರು ಶಾಲೆಯ ಗೌರವಾನ್ವಿತ ಹಳೆಯ ವಿದ್ಯಾರ್ಥಿ, ಆಡಳಿತ ಮಂಡಳಿಯ ಸದಸ್ಯರು ಮತ್ತು ಡೂನ್ ಶಾಲೆಯಲ್ಲಿ ಕ್ರೀಡಾ ಮತ್ತು ಐಟಿ ಸಮಿತಿಗಳ ಅಧ್ಯಕ್ಷರಾಗಿದ್ದರು. ಸೋನಾ ಕಾಮ್‌ಸ್ಟಾರ್ ಲಿಮಿಟೆಡ್‌ನ ಅಧ್ಯಕ್ಷರು ಮತ್ತು ಜಾಗತಿಕ ಉದ್ಯಮದ ವ್ಯಾಪಾರ ನಾಯಕರಾಗಿದ್ದರು. ಭಾರತ, ಯುಕೆ ಮತ್ತು ಯುಎಸ್‌ನಲ್ಲಿ ಶಿಕ್ಷಣ ಪಡೆದ ಅವರು ಉತ್ಸಾಹಭರಿತ ಉದ್ಯಮಿ ಮತ್ತು ಉದ್ಯಮಿಗಳ ಸಂಘಟನೆಯ ಮೊದಲ ಭಾರತೀಯ ಜಾಗತಿಕ ಅಧ್ಯಕ್ಷರಾಗಿದ್ದರು. ಇವರ ನಿಧನಕ್ಕೆ ದಿ ಡೂನ್ ಶಾಲೆಯು ಆಳವಾದ ಸಂತಾಪವನ್ನು ಸೂಚಿಸುತ್ತದೆ ಎಂದು ಹೇಳಿದೆ.