ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-Pakistan Conflict: ಪಾಕಿಸ್ತಾನ ಹೇಳಿರುವ 7 ದೊಡ್ಡ ಸುಳ್ಳುಗಳು! ಸಾಕ್ಷಿ ಸಮೇತ ಮುಖವಾಡ ಕಳಚಿದ ಭಾರತ

ಉಗ್ರರ ನೆಲೆಯನ್ನು (Terror camp) ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ಮೇ 7ರಂದು ಆಪರೇಷನ್ ಸಿಂದೂರ್ (operation Sindoor ) ಕಾರ್ಯಾಚರಣೆ ಪ್ರಾರಂಭಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ತೀವ್ರವಾಯಿತು. ಮೇ 7ರಿಂದ 10ರವರೆಗೆ ನಡೆದ ಬೆಳವಣಿಗೆಯಲ್ಲಿ ಪಾಕಿಸ್ತಾನವು ಸುಳ್ಳು ಮಾಹಿತಿಯನ್ನು ನೀಡಿ ಜಗತ್ತಿನ ಮುಂದೆ ಬೆತ್ತಲಾಗಿದೆ.

ಸಾಲು ಸಾಲು ಸುಳ್ಳು- ಜಗತ್ತಿನೆದುರು ಬೆತ್ತಲಾದ ಪಾಕಿಸ್ತಾನ!

ನವದೆಹಲಿ: ಕಾಶ್ಮೀರದ (Jammu-kashmir) ಪಹಲ್ಗಾಮ್ (Pahalgam Terror Attack) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ (terror attack) ಬಳಿಕ ಭಾರತೀಯ ಸೇನೆಯು ಪ್ರಾರಂಭಿಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯಿಂದ ಉಂಟಾದ 100 ಗಂಟೆಗಳ ಭಾರತ ಮತ್ತು ಪಾಕಿಸ್ತಾನದ ಸಂಘರ್ಷದ (India-Pakistan Conflict) ವೇಳೆ ದೊಡ್ಡ ಮಟ್ಟದ ಸುಳ್ಳು ಹೇಳಿಕೆಗಳನ್ನು ನೀಡಿರುವ ಪಾಕಿಸ್ತಾನದ ನಿಜ ಬಣ್ಣವನ್ನು ಈಗ ಭಾರತೀಯ ಸೇನೆ ಬಯಲು ಮಾಡಿದೆ. ಭಾರತದ ಪ್ರಮುಖ ನಗರಗಳು ಮತ್ತು ಮಿಲಿಟರಿ ಚಟುವಟಿಕೆ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ಸುಳ್ಳು ಹೇಳಿ ಜಗತ್ತಿನ ಎದುರು ಮುಖಭಂಗ ಎದುರಿಸುವಂತೆ ಮಾಡಿದೆ.

ಉಗ್ರರ ನೆಲೆಯನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ಮೇ 7ರಂದು ಆಪರೇಷನ್ ಸಿಂದೂರ್ ಕಾರ್ಯಾಚರಣೆ ಪ್ರಾರಂಭಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ತೀವ್ರವಾಯಿತು. ಮೇ 7ರಿಂದ 10ರವರೆಗೆ ನಡೆದ ಬೆಳವಣಿಗೆಯಲ್ಲಿ ಪಾಕಿಸ್ತಾನವು ಸುಳ್ಳು ಮಾಹಿತಿಯನ್ನು ನೀಡಿ ಜಗತ್ತಿನ ಮುಂದೆ ಬೆತ್ತಲಾಗಿದೆ. ಹಲವಾರು ಸುಳ್ಳುಗಳನ್ನು ಹೇಳಿರುವ ಪಾಕಿಸ್ತಾನ ಏಳು ಪ್ರಮುಖ ದೊಡ್ಡ ಸುಳ್ಳುಗಳ ಬಗ್ಗೆ ಭಾರತೀಯ ಸೇನೆ ವಿಶ್ವದ ಮುಂದೆ ಇರಿಸಿದೆ. ಇದರಲ್ಲಿ ಮುಖ್ಯವಾಗಿ ಭಾರತೀಯ ಪ್ರಮುಖ ನಗರ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ, ಭಾರತೀಯ ವಾಯು ನೆಲೆಗೆ ಹಾನಿ, ಭಾರತದ ಎಸ್-400 ನಾಶ ಸೇರಿದಂತೆ ಇನ್ನು ಹಲವು ಸುಳ್ಳುಗಳನ್ನು ಹೇಳಿವೆ.

ಭಾರತದ ಪತ್ರಿಕಾ ಮಾಹಿತಿ ಬ್ಯೂರೋ (PIB) ಸಂಘರ್ಷದ ಆರಂಭದಿಂದಲೇ ಹಲವಾರು ಸುದ್ದಿಗಳ ಬಗ್ಗೆ ಸತ್ಯ ಪರಿಶೀಲನೆ ನಡೆಸಿ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡಿತ್ತು. ಇದಲ್ಲದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯವು ಮಾಹಿತಿ ಪ್ರಸಾರ ಮತ್ತು ಪಾಕಿಸ್ತಾನದ ಸುಳ್ಳುಗಳನ್ನು ಬಯಲು ಮಾಡಲು ಪತ್ರಿಕಾಗೋಷ್ಠಿಗಳನ್ನು ನಡೆಸಿದೆ. ಇದರಲ್ಲಿ ಬಯಲು ಮಾಡಿರುವ ಏಳು ಪ್ರಮುಖ ಸುಳ್ಳು ಸುದ್ದಿಗಳ ಸತ್ಯಾಂಶ ಇಲ್ಲಿದೆ.

1.ಭಾರತದ ಬ್ರಹ್ಮೋಸ್ ಸಂಗ್ರಹಣಾ ನೆಲೆ ನಾಶ

ಪಾಕಿಸ್ತಾನದ ಸಶಸ್ತ್ರ ಪಡೆಗಳು ಭಾರತದ ಬಿಯಾಸ್ ನಲ್ಲಿರುವ ಬ್ರಹ್ಮೋಸ್ ಕ್ಷಿಪಣಿ ಸಂಗ್ರಹಣಾ ಸ್ಥಳವನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ. ಇದನ್ನು ಪಾಕಿಸ್ತಾನಿ ಮಿಲಿಟರಿ ಮೂಲಗಳು ಪ್ರಚಾರ ಮಾಡಿದ್ದವು. ಆದರೆ ಇದು ಸುಳ್ಳು ಸುದ್ದಿ ಎಂದು ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ವಿದೇಶಾಂಗ ಸಚಿವಾಲಯವು ಛಾಯಾಚಿತ್ರಗಳು ಸೇರಿದಂತೆ ದೃಶ್ಯ ಪುರಾವೆಗಳನ್ನು ಸಲ್ಲಿಸಿದರು.

2.ಭಾರತದ ಎಸ್-400 ವ್ಯವಸ್ಥೆ ಧ್ವಂಸ

ಪಾಕಿಸ್ತಾನದ ಜೆಎಫ್-17 ಯುದ್ಧ ವಿಮಾನಗಳು ಪಂಜಾಬ್‌ನ ಅದಮ್‌ಪುರದಲ್ಲಿರುವ ಭಾರತದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಇದನ್ನು ಪಾಕಿಸ್ತಾನ ಸರ್ಕಾರಿ ಸ್ವಾಮ್ಯದ ಪ್ರಸಾರಕ ಪಿಟಿವಿ ವರದಿ ಮಾಡಿದ್ದು ಮಾತ್ರವಲ್ಲದೆ ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ಕೂಡ ಪ್ರಸಾರ ಮಾಡಿತ್ತು. ಆದರೆ ಇದೊಂದು ದೊಡ್ಡ ಸುಳ್ಳು ಎಂದು ಭಾರತ ಹೇಳಿದೆ ಮಾತ್ರವಲ್ಲದೆ ಇದಕ್ಕೆ ಸಂಬಂಧಿಸಿ ಪುರಾವೆಗಳನ್ನು ವಿದೇಶಾಂಗ ಸಚಿವಾಲಯವು ಸಹ ಪ್ರಸ್ತುತಪಡಿಸಿದೆ. ಪಿಐಬಿ ಕೂಡ ಫ್ಯಾಕ್ಟ್ ಚೆಕ್ ನಡೆಸಿ ಇದು ಸುಳ್ಳು ಸುದ್ದಿ ಎಂದು ತಿಳಿಸಿದೆ.

3.ಭಾರತ ತನ್ನದೇ ನಗರಗಳ ಮೇಲೆ ಕ್ಷಿಪಣಿ ಹಾರಿಸಿದೆ

ಭಾರತೀಯ ಸಶಸ್ತ್ರ ಪಡೆಗಳು ಅಮೃತಸರದಂತಹ ತನ್ನದೇ ನಗರಗಾಲ ಮೇಲೆ ದಾಳಿ ನಡೆಸಿ ಇಸ್ಲಾಮಾಬಾದ್ ಅನ್ನು ದೂಷಿಸಿದೆ ಎಂದು ಪಾಕಿಸ್ತಾನ ಹೇಳಿದೆ. ಇದನ್ನು ಭಾರತೀಯ ಸೇನೆ ನಿರಾಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ತಮ್ಮದೇ ನಗರಗಳ ಮೇಲೆ ದಾಳಿ ಮಾಡುವ ಕೃತ್ಯವು ಪಾಕಿಸ್ತಾನ ಮಾತ್ರ ಯೋಚಿಸಬಹುದಾದ ವಿಷಯ ಎಂದು ಹೇಳಿದ್ದಾರೆ.

4.ಪಾಕಿಸ್ತಾನ ಮಸೀದಿಗಳ ಮೇಲೆ ದಾಳಿ

ಆಪರೇಷನ್ ಸಿಂದೂರ್ ಕಾರ್ಯಾಚರಣೆ ವೇಳೆ ಭಾರತ ಉದ್ದೇಶಪೂರ್ವಕವಾಗಿ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿರುವ ಮಸೀದಿಗಳನ್ನು ಗುರಿ ಮಾಡಿದೆ ಅಲ್ಲಿನ ಮಾಧ್ಯಮಗಳು, ಅಧಿಕಾರಿಗಳು ಮಾತ್ರವಲ್ಲ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಆಪರೇಷನ್ ಸಿಂದೂರ್‌ ದಾಳಿಯಲ್ಲಿ ಭಯೋತ್ಪಾದಕ ಶಿಬಿರಗಳು ಮತ್ತು ಅದಕ್ಕಾಗಿ ಬಳಸಲಾಗುವ ಕಟ್ಟಡಗಳ ಮೇಲೆ ಮಾತ್ರ ದಾಳಿ ಮಾಡಲಾಗಿದೆ ಎಂದು ಹೇಳಿದೆ.

ಭಾರತೀಯ ಸೇನೆ ಪಾಕಿಸ್ತಾನದ ಮಸೀದಿಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳಿರುವುದು ಸುಳ್ಳು ಆರೋಪ. ಭಾರತ ಜಾತ್ಯತೀತ ರಾಷ್ಟ್ರ ಮತ್ತು ಭಾರತೀಯ ಸಶಸ್ತ್ರ ಪಡೆಗಳು ಸಾಂವಿಧಾನಿಕ ಮೌಲ್ಯಗಳ ಪ್ರತಿಬಿಂಬ. ಎಲ್ಲಾ ಧರ್ಮಗಳ ಪ್ರತಿಯೊಂದು ಪೂಜಾ ಸ್ಥಳವನ್ನೂ ಅತ್ಯುನ್ನತ ಗೌರವದಲ್ಲಿ ಕಾಣುತ್ತೇವೆ. ಭಯೋತ್ಪಾದಕ ಶಿಬಿರ ಮತ್ತು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿರುವ ಸೌಲಭ್ಯಗಳ ಮೇಲೆ ಮಾತ್ರ ಭಾರತ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

5.ಆತ್ಮರಕ್ಷಣೆಗಾಗಿ ಡ್ರೋನ್ ದಾಳಿ

ಸಂಘರ್ಷದಲ್ಲಿ ತಾನು ಬಲಿಪಶು ಎಂದು ಬಿಂಬಿಸುತ್ತಿರುವ ಪಾಕಿಸ್ತಾನವು ಭಾರತೀಯ ಸೇನೆಯು ತನ್ನ ಭೂಪ್ರದೇಶದ ಮೇಲೆ ಡ್ರೋನ್ ದಾಳಿ ಮಾಡಿವೆ ಎಂದು ಆರೋಪಿಸಿದೆ. ಇಸ್ಲಾಮಾಬಾದ್ ಮೇಲಾಗಿರುವ ಹಲವಾರು ಭಾರತೀಯ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ. ಇದು ತನ್ನ ಆತ್ಮರಕ್ಷಣೆಗಾಗಿ ಮಾಡಿರುವುದು ಎಂದು ಬಿಂಬಿಸಲು ಪ್ರಯತ್ನಿಸಿದೆ. ಆದರೆ ಇದನ್ನು ಭಾರತವು ಪುರಾವೆಗಳೊಂದಿಗೆ ನಿರಾಕರಿಸಿದೆ.

6.ಭಾರತೀಯ ವಾಯುನೆಲೆಗಳಿಗೆ ಹಾನಿ

ಪಾಕಿಸ್ತಾನದ ಸೇನಾಪಡೆಯು ಹಲವಾರು ಭಾರತೀಯ ವಾಯುನೆಲೆಗಳ ಮೇಲೆ ಹೆಚ್ಚಿನ ಹಾನಿ ಮಾಡಿದೆ. ಇದರಲ್ಲಿ ಆದಂಪುರ, ಸಿರ್ಸಾ, ಪಠಾಣ್‌ಕೋಟ್, ಭುಜ್, ಬಟಿಂಡಾ, ಉಧಂಪುರ ಮತ್ತು ಶ್ರೀನಗರದಲ್ಲಿನ ವಾಯುನೆಲೆಗಳನ್ನು ಧ್ವಂಸ ಮಾಡಿರುವುದಾಗಿ ತಿಳಿಸಿದೆ. ಆದರೆ ಇದನ್ನು ಭಾರತ ನಿರಾಕರಿಸಿದ್ದು, ಇದಕ್ಕೆ ಪುರಾವೆಯನ್ನು ಒದಗಿಸಿದೆ. ಉಧಂಪುರ, ಪಠಾಣ್‌ಕೋಟ್, ಅದಂಪುರ ಮತ್ತು ಭುಜ್ ಸೇರಿದಂತೆ ಕೆಲವು ವಾಯುನೆಲೆಗಳನ್ನು ಪಾಕಿಸ್ತಾನವು ಹೈ-ಸ್ಪೀಡ್ ಕ್ಷಿಪಣಿಗಳಿಂದ ಗುರಿ ಮಾಡಿಕೊಂಡಿತ್ತು ಎಂಬುದನ್ನು ಭಾರತೀಯ ಸೇನೆ ಒಪ್ಪಿಕೊಂಡಿದೆ. ಆದರೆ ಅದನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ತಡೆದಿದೆ. ಈ ವೇಕೆ ಉಪಕರಣ ಮತ್ತು ಸಿಬ್ಬಂದಿಗೆ ಹಾನಿಯಾಗಿದೆ ಎಂಬುದನ್ನು ಒಪ್ಪಿಕೊಂಡಿದೆ.

ಇದನ್ನೂ ಓದಿ: Operation Sindoor: ನಾಲ್ಕು ದಿನಗಳಲ್ಲಿ ಆಪರೇಶನ್‌ ಸಿಂದೂರ್‌ ಪಾಕ್‌ಗೆ ಮಾಡಿದ ಹಾನಿ ಎಷ್ಟು?

7.ಭಾರತೀಯ ಕ್ಷಿಪಣಿಯಿಂದ ಅಫ್ಘಾನ್ ಗೆ ದಾಳಿ

ಭಾರತದ ಕ್ಷಿಪಣಿಗಳಲ್ಲಿ ಒಂದು ಅಫ್ಘಾನ್ ಪ್ರದೇಶದೊಳಗೆ ಬಿದ್ದಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಇದನ್ನು ಅಫ್ಘಾನಿಸ್ತಾನ ಮತ್ತು ಭಾರತ ಎರಡೂ ಸುಳ್ಳು ಎಂದು ಹೇಳಿದೆ. ಕಾಬೂಲ್‌ನಲ್ಲಿರುವ ತಾಲಿಬಾನ್ ನೇತೃತ್ವದ ಸರ್ಕಾರವು ಪಾಕಿಸ್ತಾನದ ಹೇಳಿಕೆಗಳನ್ನು ಸುಳ್ಳು ಮತ್ತು ಆಧಾರ ರಹಿತ ಎಂದು ಕರೆದಿದೆ. ಅಫ್ಘಾನಿಸ್ತಾನ ಸುರಕ್ಷಿತವಾಗಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿಸಿದೆ.

ಒಟ್ಟಿನಲ್ಲಿ ಪಾಕಿಸ್ತಾನ ಮಾಡಿರುವ ಈ ಏಳು ಪ್ರಮುಖ ಆರೋಪಗಳನ್ನು ತಳ್ಳಿ ಹಾಕಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇದೊಂದು ಸಂಪೂರ್ಣವಾಗಿ ಹಾಸ್ಯಾಸ್ಪದ ಎಂದು ಹೇಳಿದರು.