ಸೋತರೂ ಬುದ್ಧಿ ಕಲಿಯದ ದೀದಿ: ನಡು ರಸ್ತೆಯಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತನ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ; ವಿಡಿಯೊ ವೈರಲ್
Mamata Banerjee: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಮತಾ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಟಿಎಂಸಿ ಹಮ್ಮಿಕೊಂಡಿದ್ದ ಪ್ರತಿಭನೆ ವೇಳೆ ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದ ಕಾರ್ಯಕರ್ತೊಬ್ಬರ ಕೆನ್ನೆಗೆ ಹೊಡೆದಿದ್ದು, ವಿಡಿಯೊ ವೈರಲ್ ಆಗಿದೆ.
ಕೋಲ್ಕತಾದಲ್ಲಿ ಟಿಎಂಸಿ ಕಾರ್ಯಕರ್ತೊಬ್ಬರ ಕೆನ್ನೆಗೆ ಹೊಡೆದ ಮಮತಾ ಬ್ಯಾನರ್ಜಿ -
ಕೋಲ್ಕತಾ, ಜು. 8: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ (TMC) ಭಾರಿ ಮುಖಭಂಗವಾಗಿದ್ದು, ದೀದಿಗೆ ಇನ್ನೂ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹತಾಶರಾಗಿ ಅವರು ಬಿಜೆಪಿ ಮೋಸದಿಂದ ಅಧಿಕಾರಕ್ಕೆ ಬಂದಿದೆ ಎಂದು ಒಂದಷ್ಟು ನಾಟಕವಾಡಿದ್ದ ಮಮತಾ ಬ್ಯಾನರ್ಜಿ ಇದೀಗ ತಮ್ಮದೇ ಪಕ್ಷದ ಕಾರ್ಯಕರ್ತರೊಬ್ಬರ ಕೆನ್ನೆಗೆ ನಡುರಸ್ತೆಯಲ್ಲೇ ಹೊಡೆದಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು (Viral Video), ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾದಲ್ಲಿ ಬುಧವಾರ (ಜುಲೈ 8) ಟಿಎಂಸಿ (ಮಮತಾ ಬಣ) ವತಿಯಿಂದ ಆಯೋಜಿಸಿದ್ದ ರ‍್ಯಾಲಿ ವೇಳೆ ಸಂಯಮ ಕಳೆದುಕೊಂಡ ಮಮತಾ ಬ್ಯಾನರ್ಜಿ ಕಾರ್ಯಕರ್ತರೊಬ್ಬರ ಕೆನ್ನೆಗೆ ಬಾರಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
Mamata Banerjee loses it! Slaps her own TMC worker in public during Kalighat chaos.
— Raghu (@IndiaTales7) July 8, 2026
Frustrated Didi couldn’t control the crowd 😂 pic.twitter.com/5N2YiamauG
ಕಾಳಿಘಟ್‌ನಲ್ಲಿರುವ ಮಮತಾ ಅವರ ನಿವಾಸದ ಹೊರಗೆ ಈ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಇತ್ತೀಚೆಗೆ ರಾಜ್ಯದಲ್ಲಿ ನಡೆದ 11 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಕೋಲ್ಕತಾದಲ್ಲಿ ಟಿಎಂಸಿ ರ‍್ಯಾಲಿ ನಡೆಸಿತ್ತು. ಇದನ್ನು ಬಿಜೆಪಿ ಕಾರ್ಯಕರ್ತರು ತಡೆದಿದ್ದರು. ಈ ವೇಳೆ ನೂಕು ನುಗ್ಗಲು ಏರ್ಪಟ್ಟು ಒಂದಷ್ಟು ಟಿಎಂಸಿ ಕಾರ್ಯಕರ್ತರು ಗಾಯಗೊಂಡಿದ್ದರು. ಗಾಯಗೊಂಡ ತಮ್ಮ ಪಕ್ಷದ ಕಾರ್ಯಕರ್ತರನ್ನು ಆಸ್ಪತ್ರೆಗೆ ಸಾಗಿಸಲು ಮಮತಾ ಬ್ಯಾನರ್ಜಿ ವಾಹನ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಕಾರ್ಯಕರ್ತರಿಗೆ ಮಮತಾ ನಿರ್ದೇಶನ ನೀಡುತ್ತಿದ್ದರು.
ಪಕ್ಷಕ್ಕೆ ದ್ರೋಹ ಮಾಡುವುದು ತಾಯಿಯನ್ನು ತ್ಯಜಿಸಿದಂತೆ ಎಂದ ಮಮತಾ ಬ್ಯಾನರ್ಜಿ
ಈ ವೇಳೆ ತಾಳ್ಮೆ ಕಳೆದುಕೊಂಡ ಅವರು ತಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದ ತಮ್ಮದೇ ಪಕ್ಷದ ಕಾರ್ಯಕರ್ತರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ನೂರಾರು ಕಾರ್ಯಕರ್ತರ, ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಲವರು ಮಮತಾ ನಡೆಯನ್ನು ಟೀಕಿಸಿದ್ದಾರೆ. ಇದುವರೆಗೆ ಟಿಎಂಸಿ ಈ ಘಟನೆ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ಬಿಜೆಪಿ ವಿರುದ್ಧ ಟಿಎಂಸಿ ಆರೋಪ
ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಟಿಎಂಸಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿ ಟಿಎಂಸಿ ವಿರುದ್ಧ ಘೋಷಣೆ ಕೂಗಿದರು. ಕೆಲವು ಟಿಎಂಸಿ ಕಾರ್ಯಕರ್ತರು ಬಿಜೆಪಿಯವರ ವಿರುದ್ಧ ಎಸೆಯಲು ಮೊಟ್ಟೆಯನ್ನೂ ಹಿಡಿದುಕೊಂಡಿದ್ದರು. ಮಮತಾ ಅವರ ನಿವಾಸದ ಎದುರು ಭಾರಿ ಸಂಖ್ಯೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಎದುರು ಬದುರಾದಾಗ ಘರ್ಷಣೆ ಆರಂಭವಾಯ್ತು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಜನರ ಮಧ್ಯೆ ಧಾವಿಸಿದ ಮಮತಾ ಟಿಎಂಸಿ ಕಾರ್ಯಕರ್ತರೊಬ್ಬರ ಮೇಲೆ ದಾಳಿ ನಡೆಸಿದರು.
ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್; ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಟಿಎಂಸಿಯ ಸುಷ್ಮಿತಾ ದೇವ್ ರಾಜೀನಾಮೆ
ಬಿಜೆಪಿಯವರ ವಿರುದ್ದ ವಾಗ್ದಾಳಿ ನಡೆಸಿದ ಮಮತಾ, ʼʼಪ್ರತಿಭಟನೆ ವೇಳೆ ನಡೆದ ಸಂಘರ್ಷಕ್ಕೆ ಬಿಜೆಪಿಯೇ ಕಾರಣ. ಈ ವೇಳೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿ ನಿಂತಿದ್ದರುʼʼ ಎಂದು ದೂರಿದ್ದಾರೆ. ʼʼನಾವು ಪ್ರತಿಭಟನೆ ನಡೆಸಲು ಅನುಮತಿ ಪಡೆದಿದ್ದೆವು. ಅದಾಗ್ಯೂ ಬಿಜೆಪಿ ಕಾರ್ಯಕರ್ತರು ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ್ದಾರೆʼʼ ಎಂದು ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.