Raghavendra Swamy Mutt: ಮಂತ್ರಾಲಯ ಹುಂಡಿಯಲ್ಲಿ 10 ಲಕ್ಷ ರುಪಾಯಿ ಮೌಲ್ಯದ ನಾಣ್ಯ!
Mantralayam Mutt: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜೂನ್-ಜುಲೈಯ 22 ದಿನಗಳ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಒಟ್ಟು 3 ಕೋಟಿ 71 ಲಕ್ಷ ರುಪಾಯಿ ದಾಖಲೆಯ ನಗದು ಸಂಗ್ರಹವಾಗಿದೆ. ನಗದಿನ ಪೈಕಿ ಸುಮಾರು 10 ಲಕ್ಷ ರುಪಾಯಿ ಮೌಲ್ಯದ ನಾಣ್ಯ ಕಂಡು ಬಂದಿದೆ.
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾಣಿಕೆಯನ್ನು ಎಣಿಕೆ ಮಾಡಲಾಯಿತು. -
ರಾಯಚೂರು, ಜು. 15: ತುಂಗಭದ್ರಾ ನದಿ ದಡದಲ್ಲಿರುವ, ಕಲಿಯುಗದ ಕಾಮಧೇನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ (Mantralayam Mutt) ಜೂನ್-ಜುಲೈಯ 22 ದಿನಗಳ ಹುಂಡಿ ಎಣಿಕೆ ಕಾರ್ಯ (Hundi Counting) ಮುಕ್ತಾಯವಾಗಿದ್ದು, ಒಟ್ಟು 3 ಕೋಟಿ 71 ಲಕ್ಷ ರುಪಾಯಿ ದಾಖಲೆಯ ನಗದು ಸಂಗ್ರಹವಾಗಿದೆ. ಜತೆಗೆ 23 ಗ್ರಾಂ ಚಿನ್ನ ಮತ್ತು 1,085 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ನಗದಿನ ಪೈಕಿ ಸುಮಾರು 10 ಲಕ್ಷ ರುಪಾಯಿ ಮೌಲ್ಯದ ನಾಣ್ಯ ಕಂಡು ಬಂದಿದೆ.
ಜೂನ್-ಜುಲೈ ನಡುವಿನ 22 ದಿನಗಳಲ್ಲಿ ಒಟ್ಟು 3,60,37,959 ರುಪಾಯಿ ಸಂಗ್ರಹವಾಗಿದೆ. ಈ ಪೈಕಿ 10,97,300 ರುಪಾಯಿ ಮೌಲ್ಯದ ನಾಣ್ಯ ಇದ್ದರೆ, 3,60,37,959 ರುಪಾಯಿ ನೋಟು ಹುಂಡಿಗೆ ಬಿದ್ದಿದೆ. ಮಂತ್ರಾಲಯ ರಾಯರ ಮಠದ ಆವರಣದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದರು. ಮುಜರಾಯಿ ಇಲಾಖೆ ಅಧಿಕಾರಿಗಳು, ಮಠದ ಅಧಿಕಾರಿಗಳು ಹಾಜರಿದ್ದರು. ಜತೆಗೆ ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದ್ದು, ಬಿಗಿ ಭದ್ರತೆಯಲ್ಲಿ ಎಣಿಕೆ ಕಾರ್ಯ ನಡೆಯಿತು.

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ:
ಕಳೆದ ಬಾರಿಯ ಅಂದರೆ ಜೂನ್ನಲ್ಲಿ ನಡೆಸಿದ 21 ದಿನಗಳ ಕಾಣಿಕೆ ಹುಂಡಿ ಎಣಿಕೆಯಲ್ಲಿ 3.72 ಕೋಟಿ ರುಪಾಯಿ ಕಂಡು ಬಂದಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ನಗದು ಸಂಗ್ರಹ ಕೊಂಚ ಕಡಿಮೆಯಾಗಿದೆ. ಇನ್ನುಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3,61,40,030 ರುಪಾಯಿ ಕರೆನ್ಸಿ ನೋಟುಗಳಿದ್ದರೆ 11,02,500 ರುಪಾಯಿ ನಾಣ್ಯ ಕಂಡು ಬಂದಿತ್ತು. 67 ಗ್ರಾಂ ಚಿನ್ನ, 511 ಗ್ರಾಂ ಬೆಳ್ಳಿಯನ್ನ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದರು.
ಮಂತ್ರಾಲಯ ಹುಂಡಿ ಎಣಿಕೆ; 30 ದಿನದಲ್ಲಿ 3.48 ಕೋಟಿ ರೂ. ಸಂಗ್ರಹ
ಕಳೆದ ವರ್ಷ ದಾಖಲೆಯ ಮೊತ್ತದ ಕಾಣಿಕೆ ಸಂಗ್ರಹ
ವಿಶೇಷ ಎಂದರೆ ಕಳೆದ ವರ್ಷ ಜುಲೈಯಲ್ಲಿ ನಡೆದ ಎಣಿಕೆ ಕಾರ್ಯದ ವೇಳೆ ದಾಖಲೆ ಪ್ರಮಾಣದ ಕಾಣಿಕೆ ಕಂಡು ಬಂದಿತ್ತು. 5 ಕೋಟಿ ರುಪಾಯಿಗೂ ಅಧಿಕ ನಗದು ಮತ್ತು ಚಿನ್ನ ಹಾಗೂ ಬೆಳ್ಳಿ ಕಾಣಿಕೆಯನ್ನು ಸಂಗ್ರಹವಾಗಿತ್ತು.
ಶ್ರೀಮಠದ ಸಿಬ್ಬಂದಿಯಿಂದ ಬೆಳಗ್ಗೆಯಿಂದ ಆರಂಭವಾದ ಎಣಿಕೆ ಕಾರ್ಯ ಸಂಜೆ ಮುಕ್ತಾಯವಾಗಿತ್ತು. 5 ಕೋಟಿ 30 ಲಕ್ಷದ 97 ಸಾವಿರದ 555 ರೂಪಾಯಿ ಕರೆನ್ಸಿ (5,30,97,555), 15 ಲಕ್ಷದ 14 ಸಾವಿರ ನಾಣ್ಯಗಳು ಸೇರಿ ಒಟ್ಟು 5 ಕೋಟಿ 46 ಲಕ್ಷದ 6 ಸಾವಿರದ 555 ರೂಪಾಯಿ (5,46,06,555) ನಗದು ಸಂಗ್ರವಾಗಿತ್ತು. ಅಲ್ಲದೆ 127 ಗ್ರಾಂ ಚಿನ್ನ ಹಾಗೂ 1,820 ಗ್ರಾಂ ಬೆಳ್ಳಿಯನ್ನು ಭಕ್ತರು ರಾಘವೇಂದ್ರ ಸ್ವಾಮಿ ಹುಂಡಿಗೆ ಸಮರ್ಪಿಸಿದ್ದರು.
ಉಗ್ರರ ದಾಳಿ; ಮೃತ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ತಲಾ 1 ಲಕ್ಷ ಪರಿಹಾರ
ಲಕ್ಷಾಂತರ ಭಕ್ತರ ಭೇಟಿ
ಕರ್ನಾಟಕದ ರಾಯಚೂರಿಗೆ ಹೊಂದಿಕೊಂಡಂತಿರುವ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಸನ್ನಿಧಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.