Operation Sindoor: ನೋಡ ನೋಡುತ್ತಿದ್ದಂತೆ ಕ್ಷಿಪಣಿಗಳ ಎಂಟ್ರಿ; ವೈಮಾನಿಕ ದಾಳಿಗೆ ಬೆಚ್ಚಿದ ಪಾಕ್, ಹೇಗಿತ್ತು ಗೊತ್ತಾ ಆಪರೇಷನ್ ಸಿಂಧೂರ್? ದೃಶ್ಯಗಳು ವೈರಲ್
ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದಲ್ಲಿರುವ 9 ಉಗ್ರರ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದೆ. ಇದೀಗ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ರಾತ್ರಿಯಿಡೀ ನಡೆಸಿದ ' ಆಪರೇಷನ್ ಸಿಂಧೂರ್ ದಾಳಿಯ ದೃಶ್ಯಗಳನ್ನು ಸರ್ಕಾರ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಹಂಚಿಕೊಂಡಿದೆ .


ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದಲ್ಲಿರುವ 9 ಉಗ್ರರ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದೆ. ಇದೀಗ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ರಾತ್ರಿಯಿಡೀ ನಡೆಸಿದ ' ಆಪರೇಷನ್ ಸಿಂಧೂರ್ ದಾಳಿಯ ದೃಶ್ಯಗಳನ್ನು ಸರ್ಕಾರ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಹಂಚಿಕೊಂಡಿದೆ . ಭಾರತದ ರೌದ್ರಾವತಾರಕ್ಕೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಸದ್ಯ ವಿಡಿಯೋದಲ್ಲಿ ವೈಮಾನಿಕ ದಾಳಿಯಾಗುವ ಸಂದರ್ಭವನ್ನು ಕಾಣಬಹುದಾಗಿದೆ.
ವೀಡಿಯೊದಲ್ಲಿ ಜನದಟ್ಟಣೆಯ ರಸ್ತೆಯಲ್ಲಿ ಜನರು ಗುಂಪುಗೂಡಿದ್ದಾರೆ. ಆಗಸದಲ್ಲಿ ದೊಡ್ಡ ಶಬ್ಧವಾಗಿ ಕಿತ್ತಳೆ ಬಣ್ಣದ ಬೆಂಕಿಯ ಉಂಡೆಗಳ ರೀತಿಯಲ್ಲಿ ಕಾಣಿಸಿಕೊಂಡಿದೆ. ದೂರದಲ್ಲಿ ಹೊಗೆ ಕಾಣುತ್ತಿದೆ. ಕೆಲವು ಸೆಕೆಂಡುಗಳ ನಂತರ, ಭಾರತೀಯ ಕ್ಷಿಪಣಿ, ದೀರ್ಘ-ಶ್ರೇಣಿಯ SCALP ಅಥವಾ ಹ್ಯಾಮರ್, ಸ್ಟ್ಯಾಂಡ್-ಆಫ್ ಸ್ಮಾರ್ಟ್ ಬಾಂಬ್‌ಗಳ ಸ್ಫೋಟವಾಗಿದೆ. ನಂತರ ಅಲ್ಲಿರುವ ಜನರು ಬೆಚ್ಚಿ ಬಿದ್ದಿದ್ದಾರೆ. ಹಲವರು ದೇವರನ್ನು ಪ್ರಾರ್ಥಿಸುತ್ತಿದ್ದಾರೆ.
Not just missiles. It's a statement.
— Berlin (Parody) (@Toxicity_______) May 6, 2025
OPERATION SINDOOR 🇮🇳🔥 pic.twitter.com/zIJ1FcF3xS
ಮತ್ತೊಂದು ವೀಡಿಯೊ, ಪೊಲೀಸ್ ಚೆಕ್ ಪೋಸ್ಟ್‌ಗಳನ್ನು ದಾಟಿ ಹೋಗುವಾಗ ಕಾರಿನ ಡ್ಯಾಶ್‌ಬೋರ್ಡ್‌ನಿಂದ ತೆಗೆದುಕೊಳ್ಳಲಾಗಿದೆ. ಚಾಲಕನು ಪ್ರಯಾಣಿಕನೊಂದಿಗೆ ಮಾತನಾಡುತ್ತಿರುವುದನ್ನು ಕೇಳಬಹುದು. ಮತ್ತು ಒಬ್ಬ ವ್ಯಕ್ತಿ 'ಬಾಂಬ್' ಎಂಬ ಪದವನ್ನು ಉಚ್ಚರಿಸುತ್ತಿದ್ದಂತೆ, ದೂರದಲ್ಲಿ ಎರಡನೇ ಸ್ಫೋಟ ಮತ್ತು ಬೆಂಕಿಯ ಉಂಡೆಗಳು ಕಾಣಿಸಿಕೊಂಡಿವೆ.
#WATCH | Poonch, Jammu and Kashmir: Visuals from Line of Control (LoC) as the Indian Armed Forces launched ‘Operation Sindoor’, hitting terrorist infrastructure in Pakistan and Pakistan-occupied Jammu and Kashmir from where terrorist attacks against India have been planned and… pic.twitter.com/A7DG8dRZ6v
— ANI (@ANI) May 6, 2025
ಈ ಸುದ್ದಿಯನ್ನೂ ಓದಿ: Operation Sindoor: ಉಗ್ರರ ನೆಲೆಗೆ ನುಗ್ಗಿ ಹೊಡೆದ ಭಾರತ; ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹೇಗಿತ್ತು?
ತನ್ನ ನೆಲಕ್ಕೆ ಬಂದು ದಾಳಿ ನಡೆಸಿದ್ದ ಉಗ್ರರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಸೇನಾ ದಾಳಿಗಳನ್ನು ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಬೆಳಗಿನ ಜಾವ 1.44 ಕ್ಕೆ ಹೇಳಿಕೆಯಲ್ಲಿ ತಿಳಿಸಿದೆ. "ನಮ್ಮ ಕ್ರಮಗಳು ಕೇಂದ್ರೀಕೃತವಾಗಿವೆ, ನಿಖರವಾಗಿವೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ನಾವು ಗುರಿಯಾಗಿಸಿಕೊಂಡಿಲ್ಲ. ಗುರಿಗಳ ಆಯ್ಕೆ ಮತ್ತು ದಾಳಿಯ ವಿಧಾನದಲ್ಲಿ ಭಾರತ ಗಣನೀಯ ಸಂಯಮವನ್ನು ಪ್ರದರ್ಶಿಸಿದೆ" ಎಂದು ಭಾರತ ಹೇಳಿದೆ. "ಈ ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ" ಎಂದಿದೆ. ಭಾರತ ನಡೆಯನ್ನು ವಿರೋಧಿಸಿರುವ ಪಾಕಿಸ್ತಾನ ಯುದ್ಧ ಸಿದ್ಧ ಎಂದು ಹೇಳಿಕೆ ನೀಡಿದೆ. ಇಂದು ತಡರಾತ್ರಿ ಕೂಡ LOC ಬಳಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ 3 ನಾಗರಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.