ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಸೀದಿಯಲ್ಲಿ ಅಡಗಿದ್ದ ಮೋಸ್ಟ್‌ ವಾಂಟೆಂಡ್‌ ಉಗ್ರ ಲತೀಫ್‌ ಭಟ್‌ ಎನ್‌ಕೌಂಟರ್‌; ಸೇನಾ ಕಾರ್ಯಾಚರಣೆ ಹೇಗಿತ್ತು?

Lateef Bhatt Encounter: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೊಯ್ಬಾ (LeT) ಉಗ್ರ ಲತೀಫ್ ಭಟ್ ಹತನಾಗಿದ್ದಾನೆ. ಮಸೀದಿಯೊಂದರ ಒಳಗೆ ಅಡಗಿಕೊಂಡು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸುತ್ತಿದ್ದ ಈತನನ್ನು ಬುಧವಾರ ಮುಂಜಾನೆ ಹೊಡೆದುರುಳಿಸಲಾಗಿದೆ.

ಮೋಸ್ಟ್‌ ವಾಂಟೆಂಡ್‌ ಉಗ್ರ ಲತೀಫ್‌ ಭಟ್‌ ಎನ್‌ಕೌಂಟರ್‌

ಉಗ್ರ ಲತೀಫ್‌ ಭಟ್‌ ಎನ್‌ಕೌಂಟರ್‌ -

Vishakha Bhat Heggar
Vishakha Bhat Heggar Nov 18, 2026 11:23 AM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೊಯ್ಬಾ (LeT) ಉಗ್ರ ಲತೀಫ್ ಭಟ್ (Lateef Bhatt) ಹತನಾಗಿದ್ದಾನೆ. ಮಸೀದಿಯೊಂದರ ಒಳಗೆ ಅಡಗಿಕೊಂಡು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸುತ್ತಿದ್ದ ಈತನನ್ನು ಬುಧವಾರ ಮುಂಜಾನೆ ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆ ಆರಂಭಕ್ಕೂ ಮುನ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅನಾಯತ್ ಅಲಿ ಅವರು ವಿಡಿಯೋ ಕಾಲ್ ಮೂಲಕ ಲತೀಫ್ ಭಟ್ ಜೊತೆ ಮಾತನಾಡಿ ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದ್ದರು. "

ಲತೀಫ್‌ ಜೊತೆ ಮಾತನಾಡಿ, " ನಾವು ನಿನ್ನ ಜೊತೆಗಿದ್ದೇವೆ, ನಿನಗಿನ್ನೂ ಚಿಕ್ಕ ವಯಸ್ಸು, ಮುಂದೆ ಒಳ್ಳೆಯ ಭವಿಷ್ಯವಿದೆ" ಎಂದು ಅಧಿಕಾರಿಗಳು ತಿಳಿಹೇಳಿದ್ದರು. ಆದರೆ, ಆತ "ನಾನು ಅಲ್ಲಾಹನನ್ನು ಭೇಟಿಯಾಗಬೇಕು, ನನಗೆ ತುಂಬಾ ಸಂತೋಷವಾಗಿದೆ" ಎಂದು ಹೇಳಿ ಶರಣಾಗಲು ಆತ ನಿರಾಕರಿಸಿದ್ದಾನೆ. ಮಸೀದಿಯ ಹೊರಗಿನಿಂದಲೂ ಧ್ವನಿವರ್ಧಕಗಳ ಮೂಲಕ ಶರಣಾಗತಿಗೆ ಸೂಚನೆ ನೀಡಲಾಗಿತ್ತು.

ವಿಡಿಯೋ ನೋಡಿ



ಮುಂಜಾನೆ 2:45 ರ ಸುಮಾರಿಗೆ ಉಗ್ರ ಭಟ್ ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಗುಂಡಿನ ಚಕಮಕಿ ಆರಂಭವಾಯಿತು. ಉಗ್ರ ಮಸೀದಿಯ ಒಳಗಿದ್ದ ಕಾರಣ ಪವಿತ್ರ ಸ್ಥಳಕ್ಕೆ ಯಾವುದೇ ಹಾನಿಯಾಗದಂತೆ ಭದ್ರತಾ ಪಡೆಗಳು ಅತ್ಯಂತ ಸಂಯಮದಿಂದ ಕಾರ್ಯಾಚರಣೆ ನಡೆಸಿ ಆತನನ್ನು ಹತ್ಯೆಗೈದಿವೆ ಎಂದು ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ. ನವೆಂಬರ್ 11 ರಂದು ಕುಲ್ಗಾಮ್‌ನ ಅಖ್ರಾನ್‌ನಲ್ಲಿ ಸಿಆರ್‌ಪಿಎಫ್ (CRPF) ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಈತ ಪ್ರಮುಖ ಆರೋಪಿಯಾಗಿದ್ದನು. ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು.

ದಾಳಿಗೂ ಮುನ್ನ ಈತ ತನ್ನ ಸಹಚರ ಉಮರ್ ನಿಸಾರ್ ದಾರ್ (ಸೋಮವಾರದ ಎನ್‌ಕೌಂಟರ್‌ನಲ್ಲಿ ಹತನಾದವನು) ಜೊತೆ ಸೇರಿ ಸ್ಥಳಗಳ ಪರಿಶೀಲನೆ (ರೆಕ್ಕಿ) ನಡೆಸಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಇದಲ್ಲದೆ, ಜುಲೈ 22 ರಂದು ಅನಂತನಾಗ್‌ನಲ್ಲಿ ಪೊಲೀಸ್ ಸಿಬ್ಬಂದಿಯ ಹತ್ಯೆ ಹಾಗೂ ಆಗಸ್ಟ್ 1 ರಂದು ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಪ್ರಕರಣಗಳಲ್ಲೂ ಈತ ಬೇಕಾಗಿದ್ದನು.

"ಅಲ್ಲಾ ಬಳಿ ಹೋಗುತ್ತೇನೆ"; ಲತೀಫ್‌ ಭಟ್‌ನನ್ನು ಸುತ್ತುವರಿದ ಸೇನೆ; ಶರಣಾಗಲು ಕೊನೆಯ ವಾರ್ನಿಂಗ್‌

ಉಗ್ರನ ಹತ್ಯೆಯ ಬೆನ್ನಲ್ಲೇ ಸಿಆರ್‌ಪಿಎಫ್ ಮುಖ್ಯಸ್ಥ ಜಿ.ಪಿ. ಸಿಂಗ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, "ಅಭಿನಂದನೆಗಳು ಗೆಳೆಯರೇ. ಚಳಿಗಾಲದಲ್ಲೂ ಕೆಲವು ಖಾದ್ಯಗಳನ್ನು ತಣ್ಣಗಿರುವಾಗಲೇ ಬಡಿಸುವುದು ಉತ್ತಮ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೂಡ "ನೀವು ಓಡಬಹುದು, ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.