ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: 5 ಹಂತಕರು, 3 ಜಾಗ, 10 ನಿಮಿಷಗಳಲ್ಲಿ ಘನಘೋರ ದುರಂತ!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ಉಗ್ರರು ಇಲ್ಲಿಗೆ ಬರುತ್ತಾರೆ ಎನ್ನುವ ಸಂದೇಹವೇ ಇಲ್ಲದ ಪ್ರವಾಸಿಗರ ಗುಂಪು ಅಲ್ಲಿತ್ತು. ಐದಾರು ಮಂದಿ ಹಂತಕರು ಅಲ್ಲಿಗೆ ಬಂದಿದ್ದಾರೆ. ಮೂರು ಸ್ಥಳಗಳಲ್ಲಿ 10 ನಿಮಿಷಗಳ ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಗೆ 26 ಮಂದಿ ಸಾವನ್ನಪ್ಪಿದ್ದಾರೆ.ಇದೆಲ್ಲವೂ ಬೆಳಕಿಗೆ ಬಂದಿದ್ದು ಭಯೋತ್ಪಾದಕ ದಾಳಿಯ ತನಿಖೆಯ ವೇಳೆ.

ಹತ್ತು ನಿಮಿಷ.. ಐದಾರು ಉಗ್ರರು.. ಮುಂದೆ ನಡೆದಿದ್ದು ಭೀಕರ!

ನವದೆಹಲಿ: ಕೇವಲ ಹತ್ತು ನಿಮಿಷದಲ್ಲಿ 26 ಮಂದಿ ಹೆಣವಾಗಿ ಬಿದ್ದಿದ್ದಾರೆ. ಭಯಪಡುವ ಯಾವುದೇ ಸಂಗತಿಗಳು ಅಲ್ಲಿ ಇರಲಿಲ್ಲ. ಧರೆಯ ಮೇಲಿನ ಸ್ವರ್ಗ (jammu and kashmir) ಎಂದುಕೊಂಡು ಅಲ್ಲಿಗೆ ಬಂದವರಿಗೆ ತಾವು ಇಲ್ಲಿ ಕೊನೆಯುಸಿರು ಬಿಡುತ್ತೇವೆ ಎನ್ನುವ ಕಲ್ಪನೆಯು ಇರಲಿಲ್ಲ. ಕೇವಲ ಐದಾರು ಮಂದಿಯ ಉಗ್ರರ (Pahalgam Terrorists Attack) ಗುಂಪು ಏನೂ ಅರಿಯದ ಮಕ್ಕಳ ಎದುರೇ ಹಲವಾರು ಮಂದಿಯ ಹಣೆಗೆ ಗುಂಡಿಟ್ಟು ಸಾಯಿಸಿದ್ದಾರೆ. ಕೇವಲ ಹತ್ತು ನಿಮಿಷದಲ್ಲಿ ಈ ಎಲ್ಲ ಘಟನೆಗಳು ನಡೆದು ಹೋದರೂ ಅದನ್ನು ಕಣ್ಣಾರೆ ಕಂಡವರಿಗೆ, ದಾಳಿಯಲ್ಲಿ ಬದುಕಿ ಬಂದವರಿಗೆ ಜೀವನ ಪರ್ಯಂತ ಮರೆಯಲಾಗದ ನೋವನ್ನು ಕೊಟ್ಟಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ (Pahalgam Attack) ಬೈಸರನ್ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ಉಗ್ರರು ಇಲ್ಲಿಗೆ ಬರುತ್ತಾರೆ ಎನ್ನುವ ಸಂದೇಹವೇ ಇಲ್ಲದ ಪ್ರವಾಸಿಗರ ಗುಂಪು ಅಲ್ಲಿತ್ತು. ಐದಾರು ಮಂದಿ ಹಂತಕರು ಅಲ್ಲಿಗೆ ಬಂದಿದ್ದಾರೆ. ಮೂರು ಸ್ಥಳಗಳಲ್ಲಿ 10 ನಿಮಿಷಗಳ ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಗೆ 26 ಮಂದಿ ಸಾವನ್ನಪ್ಪಿದ್ದಾರೆ.ಇದೆಲ್ಲವೂ ಬೆಳಕಿಗೆ ಬಂದಿದ್ದು ಭಯೋತ್ಪಾದಕ ದಾಳಿಯ ತನಿಖೆಯ ವೇಳೆ. ಈ ತನಿಖೆ ಮಂಗಳವಾರ ಮಧ್ಯಾಹ್ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಮನಕಲಕುವ ಘಟನೆಯ ಸಂಪೂರ್ಣ ಚಿತ್ರಣವನ್ನು ತೋರಿಸಿದೆ.

ಕೇವಲ ಐದಾರು ಮಂದಿ ಈ ದಾಳಿ ನಡೆಸಿದ್ದಾರೆ. ಹಂತಕರು ಹುಲ್ಲುಗಾವಲಿನ ಪಕ್ಕದಲ್ಲಿರುವ ಪೈನ್ ಕಾಡಿನಿಂದ ಹೊರಬಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದ ಮೂರು ಸ್ಥಳಗಳ ಕಡೆಗೆ ತೆರಳಿದರು. ಅವರ ಕೈಯಲ್ಲಿ ರೈಫಲ್‌ಗಳಿದ್ದವು. ಈ ಭೀಕರ ಕೃತ್ಯವನ್ನು ದಾಖಲಿಸಲು ಅವರ ಬಳಿ ಬಾಡಿಕ್ಯಾಮ್‌ಗಳೂ ಇದ್ದವು ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಮಧ್ಯಾಹ್ನ 1.50 ರ ಸುಮಾರಿಗೆ ಮೊದಲ ಗುಂಡು ಹಾರಿಸಲಾಯಿತು. ದಾಳಿಯ ಭಯಾನಕ ದೃಶ್ಯಗಳಲ್ಲಿ ಹಂತಕರು ಹತ್ತಿರಬರುವವರೆಗೂ ಪ್ರವಾಸಿಗರಿಗೆ ಈ ಘಟನೆಯ ಬಗ್ಗೆ ತಿಳಿದಿರಲಿಲ್ಲ ಎಂಬುದನ್ನು ತೋರಿಸಿವೆ. ಮಕ್ಕಳು ಆಟವಾಡುತ್ತಿದ್ದರು, ಅವರ ಪೋಷಕರು ಬೆಲ್ ಪುರಿಯನ್ನು ಆನಂದಿಸುತ್ತಿದ್ದರು. ಕ್ಷಣಾರ್ಧದಲ್ಲೇ ಅಲ್ಲಿನ ಚಿತ್ರಣ ರಣಭೂಮಿಯಾಗಿ ಬದಲಾಗಿ ಹೋಯಿತು.

ಭಯೋತ್ಪಾದಕರು ಮುಗ್ಧ ಪ್ರವಾಸಿಗರ ಬಳಿ ಬಂದು ಪ್ರತಿಯೊಬ್ಬರ ಧರ್ಮ ಯಾವುದೆಂದು ಕೇಳಿ ಹಿಂದೂಗಳೆಂದು ತಿಳಿದವರನ್ನು ಗುಂಡಿಕ್ಕಿ ಕೊಂದರು. ಹೆಚ್ಚಿನವರನ್ನು ತಲೆಗೆ ಗುಂಡು ಹಾರಿಸಿ ಕೊಲ್ಲಲಾಯಿತು. ಹತ್ಯೆಗಳ ಅನಂತರ ಭಯೋತ್ಪಾದಕರು ತಾವು ಬಂದ ಕಾಡಿನ ಕಡೆಗೆ ಓಡಿಹೋಗಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Anupam Kher: ʻಕಾಶ್ಮೀರ್‌ ಫೈಲ್‌ʼ ಬಂದಾಗ ಪ್ರೊಪಗಾಂಡ ಅಂದ್ರು... ಹಾಗಿದ್ರೆ ಈಗ ಏನಾಗ್ತಿರೋದು? ನಟ ಅನುಪಮ್ ಖೇರ್ ಕಿಡಿ

ಉಗ್ರರ ದಾಳಿಯಾದ ಸುಮಾರು 30 ನಿಮಿಷಗಳ ಅನಂತರ ಮಧ್ಯಾಹ್ನ ಸರಿಸುಮಾರು 2.30ರ ವೇಳೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಪಹಲ್ಗಾಮ್ ನಿಂದ ಬೈಸರನ್ ಹುಲ್ಲುಗಾವಲಿಗೆ ಹೋಗುವ ರಸ್ತೆಯಲ್ಲಿ ಕಾರುಗಳಲ್ಲಿ ಹೋಗಲಾಗುವುದಿಲ್ಲ. ಈ ಮಾರ್ಗವು ಹೊಳೆಗಳು, ಕೆಸರುಮಯ ಪ್ರದೇಶಗಳು ಮತ್ತು ಅರಣ್ಯವನ್ನು ಒಳಗೊಂಡಿದೆ. ಚಾರಣ ಅಥವಾ ಕುದುರೆ ಸವಾರಿ ಮೂಲಕ ಇಲ್ಲಿಗೆ ತೆರಳಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ. ಇದರ ಪರಿಣಾಮವಾಗಿ ಮಧ್ಯಾಹ್ನ 3 ಗಂಟೆಯ ಅನಂತರ ಅಲ್ಲಿದ್ದವರಿಗೆ ಸಹಾಯ ಮಾಡಲು ಅಧಿಕಾರಿಗಳು ತಲಪಿದರು. ದಾಳಿಯ ಅನಂತರ ಗುಂಡು ಹಾರಿಸಲ್ಪಟ್ಟವರು ಸ್ವಲ್ಪ ಸಮಯದವರೆಗೆ ಜೀವಂತವಾಗಿದ್ದರು. ಒಂದು ವೇಳೆ ತುರ್ತು ಚಿಕಿತ್ಸೆ ಅವರಿಗೆ ದೊರೆಯುತ್ತಿದ್ದರೆ ಅವರನ್ನು ಬದುಕಿಸಬಹುದಿತ್ತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.