ಇಂಧನದ ಹೊರೆ ಇಳಿಸಿದ ಎಥೆನಾಲ್ ಮಿಶ್ರಣ ನೀತಿ: ಪ್ರಧಾನಿ ಮೋದಿ ಶ್ಲಾಘನೆ
ಇಸ್ರೇಲ್, ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಯ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಬಿಕ್ಕಿಟ್ಟಿನ ಪರಿಣಾಮ ದೇಶದಲ್ಲಿ ತೈಲ ಕೊರತೆ, ತೈಲ ಬೆಲೆ ಏರಿಕೆ ಹೊರೆಯಾಗುವುದರಲ್ಲಿತ್ತು. ಆದರೆ ಕೇಂದ್ರದ ಎಥೆನಾಲ್ ಮಿಶ್ರಣ ನೀತಿಯ ಪರಿಣಾಮವಾಗಿ ನಾವು ಈ ಸಮಸ್ಯೆಯನ್ನು ಎದುರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜೆವಾರ್‌ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗ್ರಹ ಚಿತ್ರ -
ಉತ್ತರ ಪ್ರದೇಶ: ಮಧ್ಯಪ್ರಾಚ್ಯದಲ್ಲಿ (west asia conflict) ಉಂಟಾಗಿರುವ ಸಂಘರ್ಷದಿಂದ ದೇಶದಲ್ಲಿ ತೈಲ ಬಿಕ್ಕಟ್ಟು (Oil crisis) ಎದುರಾಗಿದ್ದು, ಇದನ್ನು ನಿವಾರಿಸಲು ಕೇಂದ್ರದ ಎಥೆನಾಲ್ ಮಿಶ್ರಣ ನೀತಿಯು (ethanol blending policy) ಸಹಾಯ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ಜೆವಾರ್‌ನಲ್ಲಿ (Jewar) ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Noida International Airport) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘರ್ಷದ ಪರಿಣಾಮ ಭಾರತದ ಇಂಧನ ಅವಶ್ಯಕತೆಯ ಶೇಕಡಾ 40ಕ್ಕಿಂತ ಹೆಚ್ಚು ಪೂರೈಸುವ ಹೊರ್ಮುಜ್ ಜಲಸಂಧಿಯಲ್ಲಿ (Hormuz crisis) ಸರಕು ಸಾಗಾಟಕ್ಕೆ ನಿರ್ಬಂಧ ಉಂಟಾಗಿ ಕಚ್ಚಾ ತೈಲ ಬೆಲೆಗಳು ಗಗನಕ್ಕೇರುವುದರಲ್ಲಿತ್ತು. ಆದರೆ ಇದನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ನಿಯಂತ್ರಿಸಿದೆ ಎಂದು ತಿಳಿಸಿದರು.
ಇಸ್ರೇಲ್, ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿದ ದಾಳಿಯ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿದ್ದ ನಿರ್ಬಂಧಗಳ ಪರಿಣಾಮ ದೇಶದಲ್ಲಿ ತೈಲ ಕೊರತೆ, ತೈಲ ಬೆಲೆ ಏರಿಕೆ ಹೊರೆಯಾಗುವುದರಲ್ಲಿತ್ತು. ಆದರೆ ಇದನ್ನು ನಿಯಂತ್ರಿಸಲು ಪಶ್ಚಿಮ ಯುಪಿಯ ಕಬ್ಬಿನ ರೈತರು ಸಹಾಯ ಮಾಡಿದರು ಎಂದು ಅವರು ತಿಳಿಸಿದರು.
ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತಕ್ಕೆ ಸಹಾಯ ಮಾಡಿದ್ದು ಕೇಂದ್ರದ ಎಥೆನಾಲ್ ಮಿಶ್ರಣ ನೀತಿ ಎಂದು ಶ್ಲಾಘಿಸಿದ ಪ್ರಧಾನಿ ಮೋದಿ, ಎಥೆನಾಲ್ ಮಿಶ್ರಣಕ್ಕಾಗಿ ಇಲ್ಲದಿದ್ದರೆ ನಾವು ವಿದೇಶದಿಂದ 4.5 ಕೋಟಿ ಬ್ಯಾರೆಲ್‌ಗಳನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಆದರೆ ಯುಪಿ ರೈತರು ಇದರ ಹಣವನ್ನು ಉಳಿಸಲು ಸಹಾಯ ಮಾಡುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿದ್ದಾರೆ ಎಂದು ಹೇಳಿದರು.
ಏಪ್ರಿಲ್ 1ರಿಂದ ಇ20 ಕಡ್ಡಾಯ
ದುಬಾರಿ ಕಚ್ಚಾ ತೈಲ ಆಮದು, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ, ವಿದೇಶಿ ವಿನಿಮಯದಲ್ಲಿ ಉಳಿತಾಯ ಮಾಡುವ ಗುರಿಯನ್ನು ಹೊಂದಿರುವ ನೀತಿಯೇ ಭಾರತ ಸರ್ಕಾರದ ಎಥೆನಾಲ್ ಮಿಶ್ರಣ ನೀತಿ. ಇದರ ಬಳಕೆ ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಅಂದರೆ ನಿಗದಿತ ಸಮಯಕ್ಕಿಂತ ಐದು ವರ್ಷಗಳ ಮುಂಚಿತವಾಗಿಯೇ ಪೆಟ್ರೋಲ್‌ನಲ್ಲಿ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ತಲುಪಲಾಗಿದೆ.
ಇದೀಗ ದೇಶದಲ್ಲಿ ಕಚ್ಚಾ ತೈಲ ಕೊರತೆ, ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಏಪ್ರಿಲ್ 1ರಿಂದ ತೈಲ ಮಾರುಕಟ್ಟೆ ಕಂಪೆನಿಗಳು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇ20 ಅಂದರೆ ಎಥೆನಾಲ್-ಮಿಶ್ರಿತ ಪೆಟ್ರೋಲ್ ಪೂರೈಕೆಯನ್ನು ಕಡ್ಡಾಯಗೊಳಿಸಲಾಗಿದೆ. 2030 ರ ವೇಳೆಗೆ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಶೇಕಡಾ 30 ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಡ್ರೋನ್-ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಹಲವು ಸೈನಿಕರು ಹತ: ಇರಾನ್ ಹೇಳಿಕೆ
ಇದು ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಇದರಿಂದ ಕಳೆದ ಕೆಲವು ವರ್ಷಗಳಿಂದ ದೇಶಕ್ಕೆ ಸುಮಾರು 1.36 ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಕಳೆದ ವರ್ಷದ ಜುಲೈನಲ್ಲಿ ತಿಳಿಸಿತ್ತು.