ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹದಾಯಿ ಮಾತು ಮರೆತು ತಮ್ನಾರ್ ಯೋಜನೆಗೆ ಕೇಂದ್ರ ಅನುಮತಿ: ಕಾಳಿ ರಕ್ಷಿತಾರಣ್ಯದಲ್ಲಿ ಗೋವಾಕ್ಕೆ ವಿದ್ಯುತ್‌ ಲೈನ್:‌ ರಾಜ್ಯಕ್ಕೆ ಶಾಕ್

ಕರ್ನಾಟಕದ ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಹಾಗೂ ಗೋವಾದ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಈ ಯೋಜನೆಯಿಂದ ಹಾನಿಯಾಗುವ ಆತಂಕವಿದೆ. ಈ ಕಾರಣದಿಂದ ಯೋಜನೆಯನ್ನು ಕರ್ನಾಟಕ ವಿರೋಧಿಸಿತ್ತು. ರಾಜ್ಯದ ವಿರೋಧದ ನಡುವೆ ಗೋವಾ-ತಮ್ನಾರ್ ವಿದ್ಯುತ್ ವಿತರಣಾ ಜಾಲ ನಿರ್ಮಾಣಕ್ಕಾಗಿ ಕಾಳಿ ಹುಲಿ ಸಂರಕ್ಷಣಾ ಪ್ರದೇಶದ 102 ಎಕರೆ ಅರಣ್ಯ ಬಳಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ.

ಕಾಳಿ ರಕ್ಷಿತಾರಣ್ಯದಲ್ಲಿ ಗೋವಾಕ್ಕೆ ವಿದ್ಯುತ್‌ ಲೈನ್:‌ ರಾಜ್ಯಕ್ಕೆ ಶಾಕ್

-

Profile
Ashok Nayak Aug 14, 2026 8:07 AM

174 ಹೆಕ್ಟೇರ್ ಪದೇಶದಲ್ಲಿ 72 ಸಾವಿರ ಮರಗಳಿಗೆ ಕೊಡಲಿ ಭೀತಿ

ದೆಹಲಿ: ಪಶ್ಚಿಮ ಘಟ್ಟದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಕರ್ನಾಟಕದ 174 ಹೆಕ್ಟೇರ್ ದಟ್ಟಾರಣ್ಯ ಪ್ರದೇಶದಲ್ಲಿ ವಿದ್ಯುತ್ ತಂತಿ ಎಳೆಯುವ ಗೋವಾ-ತಮ್ನಾರ್ ವಿದ್ಯುತ್ ಯೋಜನೆಗೆ ಕರ್ನಾಟಕದ ವಿರೋಧದ ನಡುವೆಯೂ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. ಗೋವಾ ಸರಕಾರ ಮಹದಾಯಿ ಯೋಜ ನೆಗೆ ಅನುಮತಿ ನೀಡಿದರಷ್ಟೇ ದಟ್ಟಾರಣ್ಯದಲ್ಲಿ ಸುಮಾರು 72 ಸಾವಿರ ಮರಗಳಿಗೆ ಕತ್ತರಿ ಬೀಳಲಿರುವ ಈ ಯೋಜನೆಗೆ ಒಪ್ಪಿಗೆ ನೀಡುವುದಾಗಿ ಕರ್ನಾಟಕ ಹೇಳಿಕೊಂಡಿತ್ತು. ಆದರೆ ಇದೀಗ ರಾಜ್ಯವು ಸಮ್ಮತಿ ನೀಡುವ ಮುನ್ನವೇ ಕೇಂದ್ರ ಸರಕಾರ ಮೊದಲ ಹಂತದ ಯೋಜನೆಗೆ ಒಪ್ಪಿಗೆ ಸೂಚಿಸಿದೆ.

ಏನಿದು ಯೋಜನೆ?: ಗೋವಾ-ತಮ್ನಾರ್ ಪ್ರಸರಣ ಯೋಜನೆಯು ಕರ್ನಾಟಕದ ಧಾರವಾಡದ ನರೇಂದ್ರ ದಿಂದ ಗೋವಾಕ್ಕೆ 400 ಕೆ.ವಿ. ವಿದ್ಯುತ್ ಪೂರೈಸುವ ಕೇಂದ್ರ ಸರಕಾರದ ಅಂತರರಾಜ್ಯ ವಿದ್ಯುತ್ ಮಾರ್ಗ ವಾಗಿದೆ. ಗೋವಾದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪೂರೈಸುವುದು ಮತ್ತು ಪಶ್ಚಿಮ ಗ್ರಿಡ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ ವಾಗಿದೆ.

ಪಶ್ಚಿಮ ಘಟ್ಟಗಳ ದಟ್ಟಾರಣ್ಯ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಈ ವಿವಾದಾತ್ಮಕ ಯೋಜನೆಗೆ 174 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಭೂಮಿ ಬಳಕೆಯಾಗ ಲಿದ್ದು, ನೂರಾರು ಕಿ.ಮೀ ವ್ಯಾಪ್ತಿಯಲ್ಲಿ ಸಾವಿರಾರು ಮರಗಳ ಮಾರಣಹೋಮ ನಡೆಯುವುದು ಖಚಿತವಾಗಿದೆ.

ಇದನ್ನೂ ಓದಿ: Mahadayi Project: ಮಹದಾಯಿ ಯೋಜನೆ ಬಗ್ಗೆ ಗೋವಾ ಸಿಎಂ ಹೇಳಿಕೆಯು ಅವರ ವೈಯಕ್ತಿಕ- ಪ್ರಲ್ಹಾದ್‌ ಜೋಶಿ ಸ್ಪಷ್ಟನೆ

ಯೋಜನೆ ಜಾರಿಗೆ ಉತ್ತರ ಕನ್ನಡ ಜಿಲ್ಲೆಯ 97 ಹೆಕ್ಟೇರ್, ಧಾರವಾಡ ಜಿಲ್ಲೆಯ 7.75 ಹೆಕ್ಟೇರ್ ಮತ್ತು ಬೆಳಗಾವಿ ಜಿಲ್ಲೆಯ 70 ಹೆಕ್ಟೇರ್ ದಟ್ಟಾರಣ್ಯ ಪ್ರದೇಶವನ್ನು ಗುರುತಿಸಲಾಗಿದೆ. ಅಂದಾಜು 72 ಸಾವಿರ ಮರಗಳು ಅಪಾಯಕ್ಕೆ ಒಳಗಾಗಲಿವೆ. ದಟ್ಟಾರಣ್ಯದಲ್ಲಿ ಒಂದು ಬಾರಿ ವಿದ್ಯುತ್ ತಂತಿ ಗಳನ್ನು ಎಳೆದ ಮೇಲೆ ಇವುಗಳ ಕೆಳಗೆ ಯಾವುದೇ ಸಸ್ಯರಾಶಿ ಬೆಳೆಯಲು ಅವಕಾಶವಿಲ್ಲ.

ಕರ್ನಾಟಕದ ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಹಾಗೂ ಗೋವಾದ ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಈ ಯೋಜನೆಯಿಂದ ಹಾನಿಯಾಗುವ ಆತಂಕವಿದೆ. ಈ ಕಾರಣದಿಂದ ಯೋಜನೆ ಯನ್ನು ಕರ್ನಾಟಕ ವಿರೋಧಿಸಿತ್ತು. ರಾಜ್ಯದ ವಿರೋಧದ ನಡುವೆ ಗೋವಾ-ತಮ್ನಾರ್ ವಿದ್ಯುತ್ ವಿತರಣಾ ಜಾಲ ನಿರ್ಮಾಣಕ್ಕಾಗಿ ಕಾಳಿ ಹುಲಿ ಸಂರಕ್ಷಣಾ ಪ್ರದೇಶದ 102 ಎಕರೆ ಅರಣ್ಯ ಬಳಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ. ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂವತ್ತು ಷರತ್ತು ವಿಧಿಸಿ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ.

ಮಾತು ತಪ್ಪಿದ ಕೇಂದ್ರ

ಮಹದಾಯಿ ಯೋಜನೆಗೆ ಅನುಮತಿ ನೀಡುವ ಭರವಸೆಯೊಂದಿಗೆ ಯೋಜನೆಗೆ ಒಪ್ಪಿಗೆ ನೀಡು ವಂತೆ ಕೇಂದ್ರ ಮನವಿ ಮಾಡಿತ್ತು. ದಶಕಗಳಿಂದ ನನೆಗುದಿಗೆ ಬಿದ್ದಿರುವ ಮಹದಾಯಿ ಯೋಜನೆಗೆ ಅನುಮತಿ ನೀಡುವುದಾದರೆ ತಮ್ನಾರ್ ವಿದ್ಯುತ್ ಯೋಜನೆಗೆ ಸಹಕಾರ ನೀಡುವ ಭರವಸೆಯನ್ನು ಕರ್ನಾಟಕ ಸರಕಾರ ನೀಡಿತ್ತು. ಆದರೆ ಇದೀಗ ಮಹದಾಯಿ ಯೋಜನೆಗೆ ಒಪ್ಪಿಗೆ ನೀಡುವ ಮೊದಲೇ ಗೋವಾ ತಮ್ನಾರ್ ವಿದ್ಯುತ್ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಈ ಮೂಲಕ ರಾಜ್ಯಕ್ಕೆ ಅನ್ಯಾಯದ ಪರಂಪರೆ ಮುಂದುವರಿದಿದೆ.