ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರ್ಮುಜ್ ಜಲಸಂಧಿಯಲ್ಲಿ ಇಂಧನ ಹಡಗುಗಳಿಗೆ ಭಾರತೀಯ ನೌಕಾಪಡೆ ಕಾವಲು

ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಸಿಲುಕಿರುವ ತನ್ನ ಸರಕು ಹಡಗುಗಳನ್ನು ರಕ್ಷಿಸಲು ಭಾರತೀಯ ನೌಕಾ ಪಡೆಯು ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಭಾರತೀಯ ಧ್ವಜ ಹೊಂದಿರುವ ಸರಕು ಹಡಗುಗಳು ಸುರಕ್ಷಿತವಾಗಿ ಜಲಸಂಧಿ ದಾಟಿ ಬರುವುದನ್ನು ಖಚಿತ ಪಡಿಸಿಕೊಳ್ಳಲು ಭಾರತೀಯ ನೌಕಾ ಪಡೆಯು ಕಾವಲಾಗಿ ನಿಂತಿದೆ.

ಇಂಧನ ಹಡಗುಗಳ ರಕ್ಷಣೆಗಿಳಿದ ಭಾರತೀಯ ನೌಕಾಪಡೆ

ಸಂಗ್ರಹ ಚಿತ್ರ -

ನವದೆಹಲಿ: ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ (Iran war) ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚಿ ಸರಕು ಸಾಗಾಟಕ್ಕೆ ಅಡ್ಡಿ ಪಡಿಸಿತ್ತು. ಇದು ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟಿಗೆ ಕಾರಣವಾಯಿತು. ಬಳಿಕ ಸಂಘರ್ಷ ತೀವ್ರಗೊಂಡಿದ್ದು, ಈ ನಡುವೆ ಭಾರತ ಇಂಧನ ಸಾಗಾಟಕ್ಕೆ ಅಡ್ಡಿ ಪಡಿಸದಂತೆ ಇರಾನ್ ಅನ್ನು ಕೇಳಿಕೊಂಡಿದ್ದರಿಂದ ನಾಲ್ಕು ಹಡಗುಗಳು ಭಾರತದ ಬಂದರು ಬಂದು ತಲುಪಿತ್ತು. ಇದೀಗ ಜಲಸಂಧಿ ದಾಟಲು ಕಾಯುತ್ತಿರುವ ಹಲವು ಇಂಧನ ಸರಕು ಸಾಗಾಟದ ಹಡಗುಗಳನ್ನು ಕರೆ ತರಲು ಭಾರತೀಯ ನೌಕಾಪಡೆ ( Operation Urja Suraksha) ಕಾವಲಾಗಿ ನಿಂತಿದೆ.

ಯುದ್ಧದ ಮಧ್ಯೆಯೇ ಹೊರ್ಮುಜ್ ಜಲಸಂಧಿಯಲ್ಲಿ ಇಂಧನ ಹಡಗುಗಳನ್ನು ಸುರಕ್ಷಿತಗೊಳಿಸಲು ಭಾರತೀಯ ನೌಕಾಪಡೆ ಕಾರ್ಯಾಚರಣೆ ಆರಂಭಿಸಿದೆ. ಈ ಕುರಿತು ಉನ್ನತ ರಕ್ಷಣಾ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಭಾರತೀಯ ಧ್ವಜವಿರುವ ಸರಕು ಹಡಗುಗಳ ಸುರಕ್ಷಿತವಾಗಿ ಜಲಸಂಧಿ ದಾಟುವುದನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆಯನ್ನು ಅತ್ಯಂತ ಎಚ್ಚರಿಕೆ ಮತ್ತು ಕನಿಷ್ಠ ಮಾಹಿತಿ ಹಂಚಿಕೊಳ್ಳುವ ಮೂಲಕ ನಡೆಸಲಾಗುತ್ತಿದೆ ಎನ್ನಲಾಗಿದೆ.

"ಭಾರತದಲ್ಲಿ ಇಂಧನದ ಸಮಸ್ಯೆಯಿಲ್ಲ"; ಸರ್ವಪಕ್ಷ ಸಭೆಯಲ್ಲಿ ಸರ್ಕಾರದಿಂದ ಭರವಸೆ

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ದೇಶದ ಇಂಧನ ಬೇಡಿಕೆಯನ್ನು ಪೂರೈಕೆ ಮಾಡಿಕೊಳ್ಳುವ ಸಲುವಾಗಿ ಭಾರತೀಯ ನೌಕಾಪಡೆಯು ಆಪರೇಷನ್ ಉರ್ಜಾ ಸುರಕ್ಷಾವನ್ನು ಪ್ರಾರಂಭಿಸಿದೆ. ಇದಕ್ಕಾಗಿ ಇಂಧನ ಹಡಗುಗಳು ಸುರಕ್ಷಿತವಾಗಿ ಹೊರ್ಮುಜ್ ಜಲಸಂಧಿ ದಾಟಲು ಐದು ಮುಂಚೂಣಿಯ ಯುದ್ಧನೌಕೆಗಳನ್ನು ನಿಯೋಜಿಸಲಾಗುತ್ತದೆ. ಈ ಮೂಲಕ ಸಂಪೂರ್ಣ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಲಾಗುತ್ತಿದೆ.

ಭಾರತದ ಇಂಧನ ಭದ್ರತೆಯನ್ನು ರಕ್ಷಿಸುವ ಉದ್ದೇಶದಿಂದ ಭಾರತಕ್ಕೆ ಆಗಮಿಸುವ 22 ಹಡಗುಗಳು ಪ್ರಸ್ತುತ ಹೊರ್ಮುಜ್ ಜಲಸಂಧಿಯನ್ನು ದಾಟಲು ಕಾಯುತ್ತಿದೆ. ಇದರಲ್ಲಿ ಎಲ್‌ಎನ್‌ಜಿ, ಎಲ್‌ಪಿಜಿ ಮತ್ತು ಕಚ್ಚಾ ತೈಲಗಳನ್ನು ಹೊಂದಿರುವ 20 ಹಡಗುಗಳು ಸೇರಿವೆ. ಈಗಾಗಲೇ ಭಾರತೀಯ ಎಲ್ ಪಿಜಿ ವಾಹಕ ನೌಕೆಗಳಾದ ಪೈನ್ ಗ್ಯಾಸ್, ಜಗ್ ವಸಂತ್ ನೌಕಾ ಬೆಂಗಾವಲಿನೊಂದಿಗೆ ಹೊರ್ಮುಜ್ ಜಲಸಂಧಿಯನ್ನು ದಾಟಿ ಬಂದಿವೆ.

ಈ ಎರಡು ಹಡಗುಗಳು ಸುಮಾರು 92,000 ಟನ್ ಎಲ್ ಪಿಜಿಯನ್ನು ಒಟ್ಟು ಸಾಗಿಸುತ್ತವೆ. ಈ ಹಡಗುಗಳು ಪ್ರಸ್ತುತ ಭಾರತಕ್ಕೆ ಆಗಮಿಸುತ್ತಿದ್ದು, ಮಾರ್ಚ್ 26–27 ರ ವೇಳೆಗೆ ಬಂದರು ತಲುಪುವ ನಿರೀಕ್ಷೆ ಇದೆ. ಭಾರತಕ್ಕೆ ಆಗಮಿಸಲಿರುವ ಎಲ್ಲಾ ಹಡಗುಗಳ ಸುಗಮ ಮತ್ತು ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ನೌಕಾಪಡೆಯು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಮತ್ತು ನೌಕಾ ಕಾರ್ಯಾಚರಣೆಗಳ ನಿರ್ದೇಶನಾಲಯದೊಂದಿಗೆ ನಿಕಟವಾಗಿ ಸಂವಹನ ನಡೆಸುತ್ತಿದೆ.

ಮನೆ ಬಳಕೆಯಲ್ಲಿರುವ ಪಿಎನ್‌ಜಿ ಬದಲಿಸಲು ನಿರಾಕರಿಸಿದರೆ ಎಲ್‌ಪಿಜಿ ಪೂರೈಕೆ ಕಡಿತ: ಸರ್ಕಾರದ ಆದೇಶ

ಇದಕ್ಕೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇತ್ತೀಚೆಗೆ ಪಶ್ಚಿಮ ಏಷ್ಯಾದಲ್ಲಿನ ಭದ್ರತೆ ಮತ್ತು ಭಾರತದ ರಕ್ಷಣಾ ಸನ್ನದ್ಧತೆಯ ಕುರಿತು ಸಮಗ್ರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಎದುರಾಗ ಬಹುದಾದ ಸವಾಲುಗಳ ಕುರಿತು ಮತ್ತು ರಕ್ಷಣೆಗೆ ಸಂಬಂಧಿಸಿ ನೌಕಾ ಪಡೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.