RSS Chief Mohan Bhagwat: ಆಯುಧ ಪೂಜೆ ನೆರವೇರಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಆಚರಣೆ ಮತ್ತು ವಿಜಯದಶಮಿ ಹಬ್ಬ ನಾಗ್ಪುರದಲ್ಲಿ ನಡೆಯಿತು. ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ವಿಜಯದಶಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಯುಧ ಪೂಜೆಯನ್ನು ನೆರವೇರಿಸಿದರು. ಇವರಿಗೆ ಮಾಜಿ ಉಪ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಾಥ್ ನೀಡಿದರು.

ಮೋಹನ್ ಭಾಗವತ್ ಅವರಿಂದ ಆಯುಧ ಪೂಜೆ -

ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (Rashtriya Swayamsevak Sangh – RSS) ಮುಖ್ಯಸ್ಥ ಮೋಹನ್ ಭಾಗವತ್( Mohan Bhagwat) ಗುರುವಾರ ಆರ್‌ಎಸ್‌ಎಸ್‌ನ ವಿಜಯದಶಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಸ್ತ್ರಾಸ್ತ್ರ ಪೂಜೆ ನೆರವೇರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ನಾಗ್ಪುರದಲ್ಲಿ (Nagpur) ಆರ್‌ಎಸ್‌ಎಸ್‌ನ ವಾರ್ಷಿಕ ವಿಜಯದಶಮಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಆರ್‌ಎಸ್ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ವಿಜಯದಶಮಿ ಉತ್ಸವದ ವೇಳೆ ಆಯುಧ ಪೂಜೆ ನೆರವೇರಿಸಿದರು.
ವಿಶೇಷ ಎಂಬಂತೆ ಇಂದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮದ ವಿಶೇಷವಾಗಿ ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ಮೋಹನ್ ಭಾಗವತ್ ಅವರ ಜತೆಗೂಡಿ ಸಂಘದ ಕಚೇರಿಯಲ್ಲಿ ಶಾಸ್ತ್ರ ಪೂಜೆ ನೆರವೇರಿಸಿದರು.
#WATCH | Maharashtra | RSS Chief Mohan Bhagwat, Former President Ram Nath Kovind perform Shashtra Puja on the occasion of #Vijayadashami2025, in Nagpur, Maharashtra
— ANI (@ANI) October 2, 2025
RSS is celebrating the completion of 100 years of the organisation. pic.twitter.com/ifIprqZ10r
ಬಳಿಕ ಆರ್‌ಎಸ್‌ಎಸ್‌ನ ಈ ವಿಜಯದಶಮಿ ಉತ್ಸವ ಕಾರ್ಯಕ್ರಮದಲ್ಲಿ ಸಂಘಟನೆಯ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಅವರ ಮೂರ್ತಿಗೆ ಪುಷ್ಪ ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಜತೆಗೆ, ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ರೇಶಿಂಬಾಗ್ ಮೈದಾನದಲ್ಲಿ ನಡೆದ ಶಾಸ್ತ್ರ ಪೂಜೆಯ ಸಮಯದಲ್ಲಿ ಪಿನಾಕಾ ಎಂಕೆ -1, ಪಿನಾಕಾ ಎನ್‌ಹಾನ್ಸ್ ಮತ್ತು ಪಿನಾಕಾ ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರಗಳ ಪ್ರತಿಕೃತಿಗಳು ಮತ್ತು ಡ್ರೋನ್ ಗಾಳಿಗೂ ಪೂಜೆ ಸಲ್ಲಿಸಿ ಪ್ರದರ್ಶಿಸಲಾಯಿತು.
ಕಾರ್ಯಮದಲ್ಲಿ ಭಾಗಿಯಾದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದ ಸರಕುಗಳ ಮೇಲೆ ಹೆಚ್ಚಿನ ಅಮದು ತೆರಿಗೆ ವಿಧಿಸುತ್ತಿರುವ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಅವರು, ʼʼಭಾರತೀಯರು, ತಮ್ಮ ದೈನಂದಿನ ಜೀವನದಲ್ಲಿ ಸ್ವದೇಶಿ ಸರಕುಗಳನ್ನು ಬಳಸುವ ಮೂಲಕ ಸ್ವಾವಲಂಬನೆಯನ್ನು ರೂಡಿಸಿಕೊಳ್ಳಬೇಕು, ಅದುವೇ ನಮ್ಮ ಮುಂದಿನ ಗುರಿಯಾಗಬೇಕುʼʼ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
1925ರ ಸೆಪ್ಟೆಂಬರ್ 27ರಂದು ಆರ್ಎಸ್ಎಸ್ ಸ್ಥಾಪನೆಯಾಗಿತ್ತು. ಇದೀಗ ಸಂಘಟನೆಯು 100 ವರ್ಷಗಳನ್ನು ಪೂರೈಸಿದೆ.