ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣರಾಜ್ಯೋತ್ಸವಕ್ಕೂ ಮುನ್ನ ಶಸ್ತ್ರಾಸ್ತ್ರ ಕಳ್ಳಸಾಗಣೆ; ಪಾಕಿಸ್ತಾನದ ಪ್ರಯತ್ನ ವಿಫಲಗೊಳಿಸಿದ ಭದ್ರತಾ ಪಡೆ

Security forces have foiled an attempt by Pak: ಗಣರಾಜ್ಯೋತ್ಸವದ ಮುನ್ನ ದೇಶದ ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ನಡೆಸಲು ಪಾಕಿಸ್ತಾನ ಮಾಡಿದ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಸಮಯಕ್ಕೆ ಸರಿಯಾದ ಮಾಹಿತಿ ಮತ್ತು ಕಾರ್ಯಾಚರಣೆಯಿಂದ ಭಾರಿ ಅಪಾಯ ತಪ್ಪಿಸಲಾಗಿದ್ದು, ಗಡಿ ಪ್ರದೇಶಗಳಲ್ಲಿ ನಿಗಾವನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.

ಶಸ್ತ್ರಾಸ್ತ್ರ ಕಳ್ಳಸಾಗಣೆ ನಡೆಸಿದ ಪಾಕಿಸ್ತಾನದ ಪ್ರಯತ್ನ ವಿಫಲ

ಪಿಸ್ತೂಲ್‌ಗಳು, ಹ್ಯಾಂಡ್ ಗ್ರೆನೇಡ್ ವಶ -

Priyanka P
Priyanka P Jan 10, 2026 8:30 PM

ಶ್ರೀನಗರ, ಜ. 10: ಗಣರಾಜ್ಯೋತ್ಸವದ (Republic Day) ಕೆಲವೇ ದಿನಗಳ ಮುನ್ನ, ಪಾಕಿಸ್ತಾನ ಡ್ರೋನ್ (Pakistan Drone) ಮೂಲಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ನಡೆಸಿದ್ದ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರದ (Jammu-Kashmir) ಸಾಂಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಮಯಕ್ಕೆ ಸರಿಯಾಗಿ ನಡೆಸಿದ ಕಾರ್ಯಾಚರಣೆಯಿಂದ ಭದ್ರತಾ ಪಡೆಗಳು ಅಪಾಯವನ್ನು ತಪ್ಪಿಸಿವೆ.

ಅಧಿಕಾರಿಗಳ ಪ್ರಕಾರ, ಪಲೂರಾ ಗ್ರಾಮದಲ್ಲಿ ಸ್ಥಳೀಯರು ಅನುಮಾನಾಸ್ಪದ ಡ್ರೋನ್ ಚಲನವಲನವನ್ನು ಗಮನಿಸಿ ತಕ್ಷಣವೇ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಆಧಾರದಲ್ಲಿ ಆ ಪ್ರದೇಶದಲ್ಲಿ ಶೋಧನಾ ಕಾರ್ಯಾಚರಣೆ ಆರಂಭಿಸಲಾಯಿತು.

ʼʼನನ್ನ ಮಗನನ್ನು ಈ ಚಳಿಯಲ್ಲಿ ಹೇಗೆ ಬಿಟ್ಟು ಹೋಗಲಿ?ʼʼcಹುತಾತ್ಮ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ

ಶೋಧದ ಸಮಯದಲ್ಲಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನ 52ನೇ ಬೆಟಾಲಿಯನ್ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಎರಡು ಪಿಸ್ತೂಲ್‌ಗಳು, ಒಂದು ಹ್ಯಾಂಡ್ ಗ್ರೆನೇಡ್, ಮೂರು ಮ್ಯಾಗಜೀನ್‌ಗಳು (ಗನ್‌ಗೆ ಗುಂಡು ತುಂಬುವ ಸಾಧನ) ಮತ್ತು 16 ಪಿಸ್ತೂಲ್ ಗುಂಡುಗಳನ್ನು ವಶಪಡಿಸಿಕೊಂಡರು.

ವಶಪಡಿಸಿಕೊಳ್ಳುವಿಕೆಯ ಬಳಿಕ, ಭದ್ರತಾ ಸಂಸ್ಥೆಗಳು ಆ ಪ್ರದೇಶ ಹಾಗೂ ಅದರ ಸುತ್ತಮುತ್ತ ಶೋಧನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಪಾಕಿಸ್ತಾನವು ಒಳನುಸುಳುವಿಕೆ ನಿಗ್ರಹ ಜಾಲವನ್ನು ಬೇಧಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ತಡೆಯಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ಪ್ರದೇಶದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ವಸ್ತು ಕಂಡುಬಂದಲ್ಲಿ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಪಾಕಿಸ್ತಾನಿ ಹ್ಯಾಂಡ್ಲರ್‌ಗಳನ್ನು ಉಗ್ರರು ಸಂಪರ್ಕಿಸಿದ್ದು ಹೇಗೆ?

ಕಳೆದ ವರ್ಷ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್‌ನ ತನಿಖೆ ಚುರುಕುಗೊಂಡಿದೆ. ತನಿಖೆ ವೇಳೆ ಮಹತ್ವದ ಸಂಗತಿ ಬಯಲಾಗಿದೆ. ಆತ್ಮಹತ್ಯಾ ಬಾಂಬರ್‌ ಉಮರ್-ಉನ್-ನಬಿ ಸೇರಿದಂತೆ ಉಗ್ರರು ಪಾಕಿಸ್ತಾನಿ ಹ್ಯಾಂಡ್ಲರ್‌ಗಳೊಂದಿಗೆ ಸಮನ್ವಯ ಸಾಧಿಸಲು ಘೋಸ್ಟ್ ಸಿಮ್ ಕಾರ್ಡ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಜಾಲವನ್ನು ಬಳಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ದೂರ ಸಂಪರ್ಕ ಇಲಾಖೆ ನೀಡಿದ ಮಾಹಿತಿಯ ಆಧಾರದಲ್ಲಿ ತನಿಖಾಧಿಕಾರಿಗಳು ಈ ಮಹತ್ವದ ರಹಸ್ಯ ಕಂಡುಕೊಂಡಿದ್ದಾರೆ. ಈ ರೀತಿಯ ದುರುಪಯೋಗ ತಡೆಯಲು ವಾಟ್ಸ್‌ಆ್ಯಪ್‌, ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಅಪ್ಲಿಕೇಶನ್ ಆಧಾರಿತ ಸಂವಹನ ಸೇವೆಗಳನ್ನು ಸಕ್ರಿಯ, ಭೌತಿಕ ಸಿಮ್ ಕಾರ್ಡ್‌ಗೆ ನಿರಂತರವಾಗಿ ಲಿಂಕ್ ಮಾಡಬೇಕು ಎಂದು ದೂರ ಸಂಪರ್ಕ ಇಲಾಖೆ ಸೂಚಿಸಿದೆ.