ಬಿಜೆಪಿ ಶಾಸಕರ ಬಿಲ್ಡಿಂಗ್ ಶೌಚಾಲಯದ ಹೊರಗೆ ಶಿವಾಜಿ ಭಾವ ಚಿತ್ರ; ವೈರಲ್ ಆಯ್ತು ವಿಡಿಯೋ
Shivaji’s image outside toilet: ಖಾಸಗಿ ಔತಣಕೂಟದ ಸಭಾಂಗಣದಲ್ಲಿ ಶೌಚಾಲಯದ ಹೊರಗೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಮಹಾರಾಣಿ ಪದ್ಮಿನಿಯ ಫೋಟೋಗಳನ್ನು ಅಳವಡಿಸಲಾಗಿದೆ. ಇದರ ವಿಡಿಯೊ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಸಭಾಂಗಣ ಬಿಜೆಪಿ ಶಾಸಕರ ಸಹೋದರನಿಗೆ ಸಂಬಂಧಪಟ್ಟದ್ದು ಎಂದು ಹೇಳಲಾಗಿದೆ.
ಶೌಚಾಲಯದ ಹೊರಗೆ ಶಿವಾಜಿ ಮಹಾರಾಜರ ಚಿತ್ರ -
ಫರಿದಾಬಾದ್, ಫೆ.24: ಖಾಸಗಿ ಔತಣಕೂಟದ ಸಭಾಂಗಣದಲ್ಲಿ ಶೌಚಾಲಯದ ಹೊರಗೆ ಛತ್ರಪತಿ ಶಿವಾಜಿ ಮಹಾರಾಜ್ (Chhatrapati Shivaji Maharaj) ಮತ್ತು ಮಹಾರಾಣಿ ಪದ್ಮಿನಿ (Maharani Padmini) ಅವರ ಭಾವಚಿತ್ರಗಳನ್ನು ಲಿಂಗ ಸೂಚಕ ಫಲಕಗಳಾಗಿ ಬಳಸಲಾಗುತ್ತಿದೆ ಎಂದು ಹೇಳಲಾದ ವೈರಲ್ ವಿಡಿಯೊ (viral video) ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆದ ಈ ವಿಡಿಯೊದಲ್ಲಿ, ಸಿಕ್ರಿ ಹಳ್ಳಿಯ ಮಿಲನ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ದೃಶ್ಯಗಳನ್ನು ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಹಲವಾರು ಬಳಕೆದಾರರು ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 17 ನೇ ಶತಮಾನದ ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜರಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
This is absolutely unacceptable. Chhatrapati Shivaji Maharaj is a revered figure for us, his image cannot be misused this way. I urge the Haryana Government to immediately get this image removed.
— Prof. Varsha Eknath Gaikwad (@VarshaEGaikwad) February 23, 2026
Why do BJP governments repeatedly allow insults to Chhatrapati Shivaji Maharaj's… pic.twitter.com/XEO8BNgBaP
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಔತಣಕೂಟದ ಸಭಾಂಗಣವು ಹರಿಯಾಣದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರಿಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ. ಹೆಚ್ಚುತ್ತಿರುವ ಆಕ್ರೋಶದ ಮಧ್ಯೆ, ಔತಣಕೂಟದ ಸಭಾಂಗಣದ ಮಾಲೀಕ ಮತ್ತು ಬಿಜೆಪಿ ಶಾಸಕನ ಸಹೋದರ ತಿಪಾರ್ಚಂದ್, ವೈರಲ್ ವಿಡಿಯೊದಲ್ಲಿ ಕಂಡುಬರುವ ಆವರಣವು ತನಗೆ ಸೇರಿದ್ದಲ್ಲ ಎಂದು ಹೇಳಿದ್ದಾರೆ.
ತನ್ನ ಬಗ್ಗೆ ಅಪಪ್ರಚಾರ ಮಾಡಲು ದಾರಿತಪ್ಪಿಸುವ ಹೇಳಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಈ ಪ್ರದೇಶದಲ್ಲಿ ಅಕ್ರಮ ಔತಣಕೂಟ ಸಭಾಂಗಣಗಳನ್ನು ನೆಲಸಮಗೊಳಿಸಿದ್ದರಿಂದ ಅಸಮಾಧಾನಗೊಂಡ ವ್ಯಕ್ತಿಗಳು ತಮ್ಮ ಹೆಸರನ್ನು ವಿವಾದಕ್ಕೆ ಎಳೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಿರುಕುಳ ನೀಡಿದ ಯುವಕನಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ; ನಡು ರಸ್ತೆಯಲ್ಲಿ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಬಾರಿಸಿದ ಮಹಿಳೆ
ವೈರಲ್ ದೃಶ್ಯಗಳಲ್ಲಿ ಗೋಚರಿಸುವ ಒಳಾಂಗಣ ವಿನ್ಯಾಸ, ಪೇಂಟಿಂಗ್ ಮತ್ತು ಅಲಂಕಾರವು ಅವರ ಔತಣಕೂಟದ ಸಭಾಂಗಣಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹಂಚಿಕೊಂಡ ಫೋಟೋಗಳು ತೋರಿಸಿವೆ ಎಂದು ಟಿಪಾರ್ಚಂದ್ ಹೇಳಿದರು. ವಿಡಿಯೊವನ್ನು ಹಂಚಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿರುವುದಾಗಿ ಅವರು ಹೇಳಿದರು.
ವಿಡಿಯೊ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
ಈ ವಿಡಿಯೊವನ್ನು ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಅವರು ಯಾವುದೇ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಆರೋಪಗಳನ್ನು ಮಾಡದಿದ್ದರೂ, ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಗೆ ಪದೇ ಪದೇ ಅವಮಾನ ಮಾಡಲಾಗುತ್ತಿದೆ ಎಂದು ಅವರು ಬಿಜೆಪಿಯನ್ನು ಟೀಕಿಸಿದರು.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಈ ದೃಶ್ಯಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಫೋಟೋಗಳನ್ನು ತಕ್ಷಣವೇ ತೆಗೆದುಹಾಕುವಂತೆ ಹರಿಯಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಿಜೆಪಿ ಆಡಳಿತದ ಸರ್ಕಾರಗಳ ಅಡಿಯಲ್ಲಿ ಇಂತಹ ಘಟನೆಗಳು ಏಕೆ ನಿರಂತರವಾಗಿ ನಡೆಯುತ್ತಿವೆ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.