ಸಾಹಿತ್ಯ ಅಕಾಡೆಮಿ ಪ್ರಶಸ್ತಿ ರದ್ದಾದ ಬಳಿಕ ಸೆಮ್ಮೊಳಿ ಸಾಹಿತ್ಯ ಪ್ರಶಸ್ತಿ ಘೋಷಿಸಿದ ತಮಿಳುನಾಡು ಸರ್ಕಾರ
ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿನ ಅತ್ಯುತ್ತಮ ಕೃತಿಗಳಿಗೆ ಸೆಮ್ಮೊಳಿ ಇಲ್ಲಕಿಯ ವಿರುಧು (ಶಾಸ್ತ್ರೀಯ ಭಾಷಾ ಸಾಹಿತ್ಯ ಪ್ರಶಸ್ತಿ) ಹೆಸರಿನಲ್ಲಿ ಪ್ರಶಸ್ತಿ ನೀಡುವುದಾಗಿ ತಮಿಳುನಾಡು ಸರ್ಕಾರ ಭಾನುವಾರ ಘೋಷಿಸಿದೆ. ಕಳೆದ ವರ್ಷ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ರದ್ದುಗೊಂಡ ಬಳಿಕ ಇದಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರದಿಂದ ಪ್ರಶಸ್ತಿಯನ್ನು ನೀಡುವುದಾಗಿ ಹೇಳಿತ್ತು.
ಸಂಗ್ರಹ ಚಿತ್ರ -
ಚೆನ್ನೈ: ರಾಷ್ಟ್ರೀಯ ಮಟ್ಟದ ಸಾಹಿತ್ಯ ಪ್ರಶಸ್ತಿಯನ್ನು ಪರಿಚಯಿಸುವುದಾಗಿ ಭಾನುವಾರ ಘೋಷಿಸಿದ ತಮಿಳುನಾಡು ಸರ್ಕಾರ (tamilnadu govt) ಇದಕ್ಕೆ ಸೆಮ್ಮೊಳಿ ಸಾಹಿತ್ಯ ಪ್ರಶಸ್ತಿ (Semmozhi Literary Award) ಎಂದು ಹೆಸರಿಸುವುದಾಗಿ ತಿಳಿಸಿದೆ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿನ ಅತ್ಯುತ್ತಮ ಕೃತಿಗಳಿಗೆ ಈ ಪ್ರಶಸ್ತಿ ನೀಡಲಾಗುವುದು. ಕಳೆದ ವರ್ಷ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (sahitya akademi awards) ರದ್ದುಗೊಂಡ ಬಳಿಕ ಇದಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರದಿಂದ ಪ್ರಶಸ್ತಿಯನ್ನು ನೀಡುವುದಾಗಿ ಹೇಳಿತ್ತು.
ಈ ಕುರಿತು ಚೆನ್ನೈ ನಲ್ಲಿ ನಡೆದ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿನ ಅತ್ಯುತ್ತಮ ಕೃತಿಗಳಿಗೆ ಸೆಮ್ಮೊಳಿ ಇಲ್ಲಕಿಯ ವಿರುಧು (ಶಾಸ್ತ್ರೀಯ ಭಾಷಾ ಸಾಹಿತ್ಯ ಪ್ರಶಸ್ತಿ) ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು. ಇದನ್ನು ಘೋಷಿಸಲು ನನಗೆ ಅತ್ಯಂತ ಸಂತೋಷವಾಗಿದೆ. ಈ ಪ್ರಶಸ್ತಿಯು 5 ಲಕ್ಷ ರೂ. ನಗದು ಬಹುಮಾನವನ್ನು ಹೊಂದಿರುತ್ತದೆ ಎಂದು ತಿಳಿಸಿದರು.
VB-G RAM G Bill: ವಿಬಿ ಜಿ ರಾಮ್ ಜಿ ರದ್ದಾಗಬೇಕು; ಹೋರಾಟಕ್ಕೆ ಬೆಂಬಲಿಸಲು ಸಿಎಂ ಕರೆ
ಕಳೆದ ಡಿಸೆಂಬರ್‌ನಲ್ಲಿ ಸಾಂಸ್ಕೃತಿಕ ಸಚಿವಾಲಯದ ನಿರ್ದೇಶನಗಳನ್ನು ಅನುಸರಿಸಿ ಸಾಹಿತ್ಯ ಅಕಾಡೆಮಿ 2025ರ ಪ್ರಶಸ್ತಿ ಘೋಷಣೆಯನ್ನು ರದ್ದುಗೊಳಿಸಿದ ಬಳಿಕ ತಮಿಳುನಾಡು ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ. ಕಲೆ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
தமிழ்நாடு அரசின் சார்பில் தேசிய அளவிலான விருதுகள்!
— M.K.Stalin - தமிழ்நாட்டை தலைகுனிய விடமாட்டேன் (@mkstalin) January 18, 2026
இலக்கியங்களுக்கு எல்லை இல்லை; அவை நம்மை இணைக்கும் பாலங்கள் என எடுத்துக்காட்டும் சென்னை பன்னாட்டுப் புத்தகத் திருவிழாவின் நிறைவு விழாவில் கலந்துகொண்டு மொழிபெயர்ப்பு நூல்களை வெளியிட்டேன்.
ஒன்றிய அரசின் அரசியல் குறுக்கீடுகளால்,… pic.twitter.com/cJfC0AgnYF
ಈ ಕುರಿತು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಬರೆದಿರುವ ಅವರು, ಕೇಂದ್ರ ಸರ್ಕಾರದ ರಾಜಕೀಯ ಹಸ್ತಕ್ಷೇಪ ಮತ್ತು ದೂರದೃಷ್ಟಿಯ ಕೊರತೆಯಿಂದಾಗಿ ಈ ವರ್ಷದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಲಾಗಿಲ್ಲ. ಇದಕ್ಕೆ ಸೂಕ್ತ ಪ್ರತಿಕ್ರಿಯೆಯಾಗಿ ಇನ್ನು ಮುಂದೆ ತಮಿಳುನಾಡು ಸರ್ಕಾರವೇ ಭಾರತೀಯ ಭಾಷೆಗಳಲ್ಲಿ ಪ್ರಕಟವಾದ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ 'ಸೆಮ್ಮೋಳಿ ಸಾಹಿತ್ಯ ಪ್ರಶಸ್ತಿ'ಯನ್ನು ಪ್ರತಿ ವರ್ಷ ನೀಡಲಿದೆ ಎಂದು ಹೇಳಿದ್ದಾರೆ.
ವೃದ್ಧೆಗಾಗಿ ಮಿಡಿದ ಹೃದಯ; ಓಡೋಡಿ ಬಂದ ಮಹಿಳೆಗಾಗಿ ರೈಲು ನಿಲ್ಲಿಸಿದ ಲೋಕೋ ಪೈಲಟ್ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ
ಹಲವಾರು ಬರಹಗಾರರು, ಸಾಹಿತ್ಯ ಸಂಸ್ಥೆಗಳ ಪ್ರತಿನಿಧಿಗಳು ಇದಕ್ಕಾಗಿ ತಮ್ಮ ಬಳಿ ಮನವಿ ಮಾಡಿದ್ದಾರೆ. ತಮಿಳುನಾಡು ಸರ್ಕಾರವು ಪ್ರಶಸ್ತಿಗೆ ಪೋಷಕನ ಪಾತ್ರವನ್ನು ಸಂತೋಷದಿಂದ ನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.