ರೈಲಿನಲ್ಲಿ ಎಸ್ಕೇಪ್, ನೇಪಾಳಕ್ಕೆ ಪರಾರಿಯಾಗಲು ಪ್ಲ್ಯಾನ್; ಟೈಗರ್ ಶ್ರಾಫ್ಗೆ ಗುಂಡಿಟ್ಟ ಮೂವರನ್ನು ಮುಂಬೈ ಪೊಲೀಸರು ಪತ್ತೆ ಹಚ್ಚಿದ ರೋಚಕ ಕಾರ್ಯಾಚರಣೆಯ ವಿವರ ಇಲ್ಲಿದೆ
Tiger Shroff Firing: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾದ ಮೂವರನ್ನು ಮುಂಬೈ ಪೊಲೀಸರು 24 ಗಂಟೆಯೊಳಗೆ ಪತ್ತೆ ಹಚ್ಚಿದ್ದಾರೆ. ರೈಲಿನ ಮೂಲಕ ತೆರಳಿದ ಮೂವರನ್ನು ರಾಜಸ್ಥಾನದ ಕೋಟದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೇಪಾಳಕ್ಕೆ ಗಡಿ ದಾಟಲು ಇವರು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಆರೋಪಿಗಳು ಮತ್ತು ಟೈಗರ್ ಶ್ರಾಫ್ -
ಮುಂಬೈ, ಅ. 19: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾದ ಮೂವರನ್ನು ಮುಂಬೈ ಪೊಲೀಸರು 24 ಗಂಟೆಯೊಳಗೆ ಪತ್ತೆ ಹಚ್ಚಿದ್ದಾರೆ (Tiger Shroff Firing). ಟೈಗರ್ ಶ್ರಾಫ್ ಮೇಲೆ ವಿಫಲ ಹತ್ಯೆ ಪ್ರಯತ್ನ ನಡೆಸಿದ ಮೂವರು ರೈಲಿನ ಮೂಲಕ ತೆರಳಿದ್ದು, ರಾಜಸ್ಥಾನದ ಕೋಟದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೇಪಾಳಕ್ಕೆ ಗಡಿ ದಾಟಲು ಇವರು ಸಂಚು ರೂಪಿಸಿದ್ದರು ಎನ್ನಲಾಗಿದ್ದು, ಅದಕ್ಕೂ ಮೊದಲೇ ಮುಂಬೈ ಪೊಲೀಸರ ಅತಿಥಿಗಳಾಗಿದ್ದಾರೆ. ಇವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಭಾನುವಾರ (ಅಕ್ಟೋಬರ್ 18) ಜುಹುವಿನಲ್ಲಿ ಫುಟ್ಬಾಲ್ ಆಡಿ ಕಾರ್ನಲ್ಲಿ ಮರಳುತ್ತಿದ್ದ ಟೈಗರ್ ಶ್ರಾಫ್ ಮೇಲೆ ದಾಳಿ ನಡೆದಿತ್ತು. ಸ್ವಲ್ಪದರಲ್ಲೇ ಅವರು ಪಾರಾಗಿದ್ದು, ಅವರ ಸಹಾಯಕ ಮತ್ತು ಚಾಲಕ ಗಾಯಗೊಂಡಿದ್ದಾರೆ. ಬಳಿಕ ದಾಳಿ ನಡೆಸಿದ ಮೂವರು ಬೈಕ್ನಲ್ಲಿ ಪರಾರಿಯಾಗಿದ್ದರು. ದೇಶವನ್ನೇ ಬೆಚ್ಚಿ ಬೀಳಿಸಿದ ಈ ದಾಳಿಯ ತನಿಖೆ ಕೈಗೆತ್ತಿಕೊಂಡ ಮುಂಬೈ ಪೊಲೀಸರು ಸೋಮವಾರ ಆರೋಪಿಗಳನ್ನು ಪತ್ತೆ ದೂರದ ರಾಜಸ್ಥಾನದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಟೈಗರ್ ಶ್ರಾಫ್ ಮೇಲಿನ ದಾಲಿ ಬಗ್ಗೆ ಮಾಹಿತಿ:
Mumbai, Maharashtra: On the firing incident involving actor Tiger Shroff, DCP Raj Tilak Roshan says, "Yesterday in the Juhu area, a famous film actor had gone out for some personal work. While leaving the location, firing took place on his vehicle. The attackers who fired were three persons on a bike; two of them opened fire, and then they fled on the motorcycle. Following this, around 20 special teams were formed by the Crime Branch. Based on technical analysis and ground intelligence, the team identified the motorcycle used by the three suspects. We recovered the motorcycle near Andheri Railway Station. Further CCTV analysis revealed that they traveled northbound via the Western Line towards Surat. Pursuing this lead, we learned they boarded the Pune-Jaipur Express from Surat. We gathered precise information identifying the exact coach they were in and shared this crucial input with the Kota Police. Based on this input, the Kota Police apprehended them. Our team, which was closely trailing and chasing them with a few hours' gap, arrived on the scene and took custody of all three accused..."
— IANS (@ians_india) October 19, 2026
ಕಾರ್ಯಾಚರಣೆ ಹೇಗಿತ್ತು?
ದಾಳಿ ನಡೆದ ಕೂಡಲೇ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಸಿಸಿಟಿವಿ ಕ್ಯಾಮರಾ ಮೂಲಕ ದುಷ್ಕರ್ಮಿಗಳ ಚಲನವಲನ ಪತ್ತೆ ಹಚ್ಚಿದರು. ಅವರು ಪುಣೆ-ಜೈಪುರ ಎಕ್ಸ್ಪ್ರೆಸ್ನಲ್ಲಿ ತೆರಳುತ್ತಿರುವುದು ಕಂಡುಕೊಂಡ ಪೊಲೀಸರು ಕೂಡಲೇ ರಾಜಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಟೇಷನ್ಗೆ ತೆರಳಿದ ರಾಜಸ್ಥಾನ ಪೊಲೀಸರು ರೈಲು ಆಗಮಿಸುವುದನ್ನೇ ಕಾಯುತ್ತಿದ್ದರು. ಕೋಟಾದಲ್ಲಿ ರೈಲು ನಿಲುಗಡೆಯಾಗುತ್ತಿದ್ದಂತೆ ಜನರಲ್ ಕೋಚ್ನಲ್ಲಿದ್ದ ಮೂವರನ್ನೂ ವಶಕ್ಕೆ ಪಡೆದರು.
ಬಂಧಿತರನ್ನು ಹರಿಯಾಣದ ಸೋನಿಪತ್ನ ರೆಹಾನ್ ಆಲಿಯಾಸ್ ಸುಕ್ಕ, ಬಿಹಾರದ ಬೇಗುಸರೈಯ ಹೃತಿಕ್ ಕುರ್ಮಿ ಆಲಿಯಾಸ್ ರೋಷನ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಬಂಧಿತ ಆರೋಪಿ ಹರಿಯಾಣದ ಅಪ್ರಾಪ್ತ ಎಂದು ಮೂಲಗಳು ತಿಳಿಸಿವೆ. ಕಾನೂನು ಕ್ರಮಗಳ ಬಳಿಕ ಮುಂಬೈ ಪೊಲೀಸರಿಗೆ ಮೂವರನ್ನೂ ಹಸ್ತಾಂತರಿಸಲಾಗಿದೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಟ ತಲುಪಿದ್ದು ಹೇಗೆ?
ಭಾನುವಾರ ಸಂಜೆ ಸುಮಾರು 7:40ರ ಸುಮಾರಿಗೆ ದಾಳಿ ನಡೆಸಿದ ಬಳಿಕ ಮೂವರು ಜುಹುವಿನಿಂದ ಪರಾರಿಯಾಗಿ ಬೈಕ್ನಲ್ಲಿ ಅಂಧೇರಿ ರೈಲ್ವೆ ಸ್ಟೇಷನ್ ತಲುಪಿದರು. ಅಲ್ಲಿ ಬೈಕ್ ನಿಲ್ಲಿಸಿ ಲೋಕಲ್ ರೈಲಿನ ಮೂಲಕ ಬೊರಿವಾಲಿ ತೆರಳಿದರು. ನಂತರ ಕ್ಯಾಬ್ ಮೂಲಕ ಗುಜರಾತ್ನ ಸೂರತ್ಗೆ ಪ್ರಯಾಣಿಸಿದರು. ಅಲ್ಲಿಂದ ಬಸ್ ಮೂಲಕ ತೆರಳುವ ಯೋಜನೆ ಹಾಕಿಕೊಂಡಿದ್ದರೂ ಅದು ಕೈಗೂಡಲಿಲ್ಲ.
ಹೀಗಾಗಿ ಅವರು ಅಲ್ಲಿಂದ ಸೂರತ್ ರೂಲು ನಿಲ್ದಾಣಕ್ಕೆ ಧಾವಿಸಿದರು. ಅಲ್ಲಿಂದ ರಾಜಸ್ಥಾನದ ಕೋಟಕ್ಕೆ ಹೋಗುವ ರೈಲಿಗೆ ಹತ್ತಿದರು. ಪುಣೆ-ಜೈಪುರ ಎಕ್ಸ್ಪ್ರೆಸ್ ರೈಲು ಕೋಟಕ್ಕೆ ಸೋಮವಾರ ಬೆಳಗ್ಗೆ 10.17ಕ್ಕೆ ತಲುಪುವುದರೊಂದಿಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದರು.
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ; ರಾಜಸ್ಥಾನದಲ್ಲಿ ಅಪ್ರಾಪ್ತ ಸೇರಿ ಮೂವರು ಆರೋಪಿಗಳ ಬಂಧನ
ಸಂಚು ವಿಫಲ
ಪ್ರಾಥಮಿಕ ತನಿಖೆಯ ಪ್ರಕಾರ ಮೂವರು ಆರೋಪಿಗಳು ದಾಳಿಯ ನಂತರ ದೆಹಲಿಗೆ ತಲುಪಿ ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು. ಆದರೆ ಅರ್ಧದಲ್ಲೇ ಅವರ ಸಂಚು ವಿಫಲವಾಗಿದೆ. ಅದಾಗ್ಯೂ ದಾಳಿಗೆ ಬಳಸಿದ ಆಯುಧ ಪತ್ತೆಯಾಗಿಲ್ಲ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೂ ಆರೋಪಿಗಳಿಗೂ ಇರುವ ಸಂಬಂಧವನ್ನು ಪರಿಶೀಲಿಸಲಾಗುತ್ತಿದೆ. ಅಧಿಕಾರಿಗಳ ಪ್ರಕಾರ ಪ್ರಸ್ತುತ ಅಮೆರಿದಲ್ಲಿರುವ ಬಿಷ್ಣೋಯ್ ಗ್ಯಾಂಗ್ನ ಅನಿಲ್ ಪಂಡಿತ್ಗೂ ಆರೋಪಿ ರೆಹಾನ್ಗೂ ಮೊದಲೇ ಸಂಪರ್ಕವಿತ್ತು ಎನ್ನಲಾಗಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.