ಕಣ್ಣಿನ ಚಿಕಿತ್ಸೆಗಾಗಿ ವಿದೇಶ ಪ್ರಯಾಣಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ; ತುರ್ತು ಪರಿಶೀಲಿಸಲು ಹೈಕೋರ್ಟ್ ನಕಾರ
ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ವಿದೇಶ ಪ್ರಯಾಣ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ. ಈ ಕುರಿತು ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಹೇಳಿದೆ. ಕಣ್ಣಿನ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೋಗಲು ಅನುಮತಿ ಕೋರಿ ಅಭಿಷೇಕ್ ಬ್ಯಾನರ್ಜಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಸಂಗ್ರಹ ಚಿತ್ರ -
ಕೋಲ್ಕತ್ತಾ: ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ (foreign travel plea) ತೃಣಮೂಲ ಕಾಂಗ್ರೆಸ್ ಸಂಸದ (trinamool Congress MP) ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರು ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ಪರಿಗಣಿಸಲು ಕಲ್ಕತ್ತಾ ಹೈಕೋರ್ಟ್ (Calcutta High Court) ನಿರಾಕರಿಸಿದೆ. ಈ ಕುರಿತ ವಿಚಾರಣೆಯನ್ನು ಮುಂದಿನ ವಾರ ನಡೆಸುವುದಾಗಿ ಹೇಳಿದೆ. ಅಭಿಷೇಕ್ ಬ್ಯಾನರ್ಜಿ ಅವರು ಕಣ್ಣಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ನ್ಯಾಯಾಲಯದ ಅನುಮತಿ ಕೋರಿದ್ದರು. ಆದರೆ ಇದನ್ನು ತುರ್ತಾಗಿ ಪರಿಗಣಿಸಲು ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ (Justice Sougata Bhattacharyya) ನಿರಾಕರಿಸಿದ್ದಾರೆ.
ನ್ಯಾಯಾಲಯದ ಅನುಮತಿ ಇಲ್ಲದೆ ವಿದೇಶ ಪ್ರಯಾಣವನ್ನು ಅಭಿಷೇಕ್ ಬ್ಯಾನರ್ಜಿಯವರಿಗೆ ನಿರ್ಬಂಧಿಸಲಾಗಿತ್ತು. ಈ ಆದೇಶದಿಂದ ತಮಗೆ ವಿನಾಯತಿ ನೀಡುವಂತೆ ಕೋರಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತಮ್ಮ ಕಣ್ಣಿನ ಚಿಕಿತ್ಸೆಗಾಗಿ ವಿದೇಶ ಪ್ರವಾಸ ಮಾಡಬೇಕಾಗಿದೆ ಎಂದು ಹೇಳಿದ್ದರು.
ನಾವು ನಿಜವಾದ ತೃಣಮೂಲ ಕಾಂಗ್ರೆಸ್, ಪಕ್ಷದ ಚಿಹ್ನೆಗಾಗಿ ಹಕ್ಕು ಸಾಧಿಸುವ ಅಗತ್ಯವಿಲ್ಲ: ಋತಬ್ರತ ಬ್ಯಾನರ್ಜಿ ಸ್ಪಷ್ಟನೆ
ಈ ಕುರಿತು ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ, ಅಭಿಷೇಕ್ ಬ್ಯಾನರ್ಜಿ ಅವರ ಅರ್ಜಿಯನ್ನು ಮುಂದಿನ ಸೋಮವಾರ ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ಕುರಿತು ತುರ್ತಾಗಿ ಪರಿಶೀಲನೆ ನಡೆಸಲು ನಿರಾಕರಿಸಿದ ಅವರು ಅರ್ಜಿಯ ಕುರಿತು ಮುಂದಿನ ವಾರ ಪ್ರಸ್ತಾಪಿಸುವಂತೆ ತಿಳಿಸಿದರು.
ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಭರ್ಜರಿ ಜಯ ಸಾಧಿಸಿದ ಬಳಿಕ ಹಲವು ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಚುನಾವಣಾ ಅಕ್ರಮ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಅಭಿಷೇಕ್ ಬ್ಯಾನರ್ಜಿ ವಿರುದ್ದವೂ ಕೂಡ ದೂರು ದಾಖಲಾಗಿದೆ.
ಉತ್ತರ ಕೋಲ್ಕತ್ತಾದ ಬಾಗುಹಾಟಿ ನಿವಾಸಿಯೊಬ್ಬರು ಸಾರ್ವಜನಿಕ ಭಾಷಣಗಳ ಸಮಯದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಮೇ 22 ರಂದು ನ್ಯಾಯಾಲಯವು ಜುಲೈ 31 ಅಥವಾ ಮುಂದಿನ ಆದೇಶದವರೆಗೆ ಅವರನ್ನು ಬಂಧಿಸದಂತೆ ರಕ್ಷಣೆ ನೀಡಿದೆ. ಅಲ್ಲದೇ ವಿದೇಶ ಪ್ರಯಾಣಕ್ಕೆ ಪೂರ್ವಾನುಮತಿ ಪಡೆಯುವಂತೆ ಆದೇಶಿಸಿತ್ತು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಹಿರಿಯ ನಾಯಕ ಜಾರ್ಜ್ ಕುರಿಯನ್
ಅಭಿಷೇಕ್ ಬ್ಯಾನರ್ಜಿ ಕಣ್ಣಿಗೆ ಏನಾಗಿದೆ?
2016 ರಲ್ಲಿ ಮುರ್ಷಿದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಿಂದ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದಾಗ ಉಂಟಾದ ರಸ್ತೆ ಅಪಘಾತದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಕಣ್ಣಿಗೆ ಗಾಯವಾಗಿತ್ತು. ಇದಕ್ಕಾಗಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಅವರು ಚಿಕಿತ್ಸೆ ಪದೆದಿದ್ದಾರೆ. ಆದರೆ ಸಮಸ್ಯೆ ಪರಿಹಾರವಾಗದ ಕಾರಣ ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಬಯಸಿದ್ದಾರೆ.