ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಟ ರಾಮ್‌ ಚರಣ್‌ಗೆ ಹೊಸ ಬಿರುದು ನೀಡಿದ ಪ್ರಧಾನಿ ನರೇಂದ್ರ ಮೋದಿ; ಅಪ್ಪ ಚಿರಂಜೀವಿ ಖುಷಿಗೆ ಪಾರವೇ ಇಲ್ಲ!

'ಪೆದ್ದಿ' ಚಿತ್ರದ ಭರ್ಜರಿ ಯಶಸ್ಸು ಕಂಡಿರುವ ನಟ ರಾಮ್ ಚರಣ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ 'ನ್ಯೂ ಏಜ್ ಮೆಗಾಸ್ಟಾರ್' ಎಂಬ ವಿಶೇಷ ಬಿರುದು ನೀಡಿದ್ದಾರೆ. ದೆಹಲಿಯ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪ್ರಧಾನಿ ಆಡಿದ ಈ ಮಾತುಗಳಿಗೆ ಮೆಗಾಸ್ಟಾರ್ ಚಿರಂಜೀವಿ ಭಾವುಕ ಟ್ವೀಟ್ ಮಾಡಿ, ಮಗನ ಸಾಧನೆಯನ್ನು ಕೊಂಡಾಡಿದ್ದಾರೆ.

ರಾಮ್ ಚರಣ್‌ಗೆ ಹೊಸ ಬಿರುದು ಕೊಟ್ಟ ಪ್ರಧಾನಿ ಮೋದಿ; ಅಪ್ಪ ಚಿರಂಜೀವಿ ಭಾವುಕ

-

Avinash GR
Avinash GR Jun 24, 2026 5:25 PM

ನಟ ರಾಮ್ ಚರಣ್ ಅವರು ಸದ್ಯ 'ಪೆದ್ದಿ' ಚಿತ್ರದ ಮೂಲಕ ಭರ್ಜರಿ ಸಕ್ಸಸ್‌ ಅನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ. ʻಪೆದ್ದಿʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಗಳಿಸಿ, ದೊಡ್ಡ ಗೆಲುವನ್ನು ತಂದುಕೊಟ್ಟಿದೆ. ಈ ಹಿಂದಿನ ಗೇಮ್‌ ಚೇಂಜರ್‌ ಸಿನಿಮಾದ ಸೋಲವನ್ನು ಮರೆಸಿದೆ. ಸದ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಬಿರುದನ್ನು ನೀಡಿದ್ದಾರೆ

ನ್ಯೂ ಏಜ್ ಮೆಗಾಸ್ಟಾರ್

ಈಚೆಗೆ ದೆಹಲಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ರಾಮ್ ಚರಣ್ ತಮ್ಮ ಪತ್ನಿ ಉಪಾಸನಾ ಅವರೊಂದಿಗೆ ಭಾಗವಹಿಸಿದ್ದರು. 'ಗ್ರೇಟ್ ಪವರ್ ಇಂಡಿಯಾ: ನೇಷನ್ ಫಸ್ಟ್' ಥೀಮ್ ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿಯನ್ನು ರಾಮ್‌ ಚರಣ್‌ ದಂಪತಿ ಮೀಟ್‌ ಮಾಡಿದ್ದಾರೆ. ಈ ವೇಳೆ ರಾಮ್ ಚರಣ್ ಅವರನ್ನು ಉದ್ದೇಶಿಸಿ ಪ್ರಧಾನಿ ಮೋದಿ "ನ್ಯೂ ಏಜ್ ಮೆಗಾಸ್ಟಾರ್' (New Age MegaStar) ಎಂದು ಸಂಬೋಧಿಸಿದ್ದಾರೆ. ಈ ಹೇಳಿಕೆಯು ಮೆಗಾ ಕುಟುಂಬದಲ್ಲಿ ಮಾತ್ರವಲ್ಲದೆ, ಮೆಗಾ ಫ್ಯಾನ್ಸ್‌ಗೂ ಸಖತ್‌ ಖುಷಿ ನೀಡಿದೆ.

ಮಗನ ಬಗ್ಗೆ ಚಿರು ಎಮೋಷನಲ್‌ ಟ್ವೀಟ್‌

ಪ್ರಧಾನಿ ಮೋದಿ ಅವರಿಂದ ತಮ್ಮ ಮಗನಿಗೆ ಇಷ್ಟೊಂದು ದೊಡ್ಡ ಪ್ರಶಂಸೆ ಸಿಕ್ಕಿದ್ದಕ್ಕೆ ಮೆಗಾಸ್ಟಾರ್ ಚಿರಂಜೀವಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಸಂತೋಷ ವ್ಯಕ್ತಪಡಿಸಿರುವ ಅವರು, "ಮಗ ಹುಟ್ಟಿದ ತಕ್ಷಣ ತಂದೆಗೆ ನಿಜವಾದ ಸಂತೋಷವಾಗುವುದಿಲ್ಲ, ಆದರೆ ಸಮಾಜವು ಆ ಮಗನ ಸಾಧನೆಯನ್ನು ಕೊಂಡಾಡಿದಾಗ ತಂದೆಗೆ ನಿಜವಾದ ಪುತ್ರೋತ್ಸಾಹ ಸಿಗುತ್ತದೆ ಎಂಬ ಸುಮತಿ ಶತಕದ ಪದ್ಯದಂತೆ, ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ರಾಮ್ ಚರಣ್‌ನನ್ನು ನ್ಯೂ ಏಜ್‌ ಮೆಗಾಸ್ಟಾರ್‌ ಎಂದು ಕರೆದಿದ್ದು ನನಗೆ ಅಪಾರ ಆನಂದವನ್ನು ನೀಡಿದೆ" ಎಂದು ಬರೆದುಕೊಂಡಿದ್ದಾರೆ.

ಸಮಂತಾ ಪ್ರೆಗ್ನೆನ್ಸಿ ಸೀಕ್ರೆಟ್ ಲೀಕ್ ಮಾಡಿದ್ರಾ ಚಿರಂಜೀವಿ? ʻಮೆಗಾ‌ ಸ್ಟಾರ್‌ʼ ಟ್ವೀಟ್‌ಗೆ ʻಚಿರು ಲೀಕ್ಸ್‌ʼ ಎಂದು ಕಾಮೆಂಟ್‌ ಮಾಡಿದ ಫ್ಯಾನ್ಸ್!

ತೆಲುಗು ಚಿತ್ರರಂಗದ ಕೀರ್ತಿಯನ್ನು ವಿಸ್ತರಿಸಲಿ

"ಇಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ ಪುತ್ರ ಚರಣ್‌ಗೆ ಸಿಗುತ್ತಿರುವ ಗೌರವವನ್ನು ನೋಡಿ ಒಬ್ಬ ತಂದೆಯಾಗಿ ನನಗೆ ಹೆಮ್ಮೆ ಅನಿಸುತ್ತಿದೆ. ತನ್ನ ಕಠಿಣ ಪರಿಶ್ರಮ, ಸಮರ್ಪಣಾಭಾವ ಮತ್ತು ನಟನೆಯ ಮೂಲಕ ಆತ ಕೇವಲ ಪ್ರೇಕ್ಷಕರ ಪ್ರೀತಿಯನ್ನು ಮಾತ್ರವಲ್ಲದೆ, ದೇಶಾದ್ಯಂತ ಅಪಾರ ಮನ್ನಣೆಯನ್ನು ಗಳಿಸಿರುವುದು ನಿಜಕ್ಕೂ ಸಂತೋಷದ ಸಂಗತಿ. ಆತ ಇನ್ನೂ ಅನೇಕ ಉನ್ನತ ಶಿಖರಗಳನ್ನು ಏರುತ್ತಾ, ತೆಲುಗು ಚಿತ್ರರಂಗದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ" ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

ಅಪರೂಪದ ಸಾಧನೆ ಮಾಡಿದ ಚಿರಂಜೀವಿ - ರಾಮ್‌ ಚರಣ್‌; 2026ರಲ್ಲಿ ಅಪ್ಪ-ಮಗನಿಂದ ಭರ್ಜರಿ ದಾಖಲೆ ಸೃಷ್ಟಿ!

ʻಪೆದ್ದಿʼ ಸಕ್ಸಸ್‌ಮೀಟ್‌ನಲ್ಲೂ ಮಗನನ್ನು ಹೊಗಳಿದ ಚಿರು

ಇನ್ನು, ಹೈದರಾಬಾದ್‌ನಲ್ಲಿ ನಡೆದ 'ಪೆದ್ದಿ' ಚಿತ್ರದ ಸಕ್ಸಸ್‌ ಸೆಲೆಬ್ರೇಷನ್‌ನಲ್ಲೂ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಚಿರಂಜೀವಿ, "ಮಕ್ಕಳು ಬೆಳೆದು ಸಾಧನೆ ಮಾಡಿದಾಗ ತಂದೆ ಪಡುವ ಸಂತೋಷ ಅಷ್ಟಿಷ್ಟಲ್ಲ. 'ರಂಗಸ್ಥಲಂ' ಚಿತ್ರದ ನಂತರ ನನಗೆ ಸಿಕ್ಕ ಸಂತೋಷ ಒಂದಿಷ್ಟಾದರೆ, 'ಪೆದ್ದಿ' ಚಿತ್ರದ ಭರ್ಜರಿ ಯಶಸ್ಸು ಮತ್ತು ಪ್ರಧಾನಿ ಮೋದಿ ಅವರ ಪ್ರಶಂಸೆಯ ನಂತರ ನನಗೆ ನೂರಕ್ಕೆ ನೂರರಷ್ಟು ಪುತ್ರೋತ್ಸಾಹ ಸಿಕ್ಕಿದೆ. ಇನ್ಮುಂದೆ ಚರಣ್‌ನನ್ನು ಮುಂದೆ ನಿಲ್ಲಿಸಿ ನಾನು ಹಿಂದೆ ಇರುವುದು ಸೂಕ್ತ" ಎಂದು ಭಾವುಕರಾದರು.

ಚಿರಂಜೀವಿ ಮಾಡಿದ ಟ್ವೀಟ್‌ ಇಲ್ಲಿದೆ



ಸೋಮಾರಿತನಕ್ಕೆ ನಮ್ಮ ಕುಟುಂಬದಲ್ಲಿ ಜಾಗವಿಲ್ಲ

"ಮಗ ಬೆಳೆದು ದೊಡ್ಡವನಾಗಿದ್ದಾನೆ ಎಂದಾಕ್ಷಣ ನಾನು ನಟನೆಯನ್ನು ನಿಲ್ಲಿಸುವುದಿಲ್ಲ. ಹೆಸರು ಅಥವಾ ಹಣಕ್ಕಾಗಿ ಅಲ್ಲ, ಕೆಲಸ ಮಾಡುವುದರಲ್ಲಿ ಸಿಗುವ ಆನಂದಕ್ಕಾಗಿ ನಾನು ನಿರಂತರವಾಗಿ ಶ್ರಮಿಸುತ್ತೇನೆ. ಸೋಮಾರಿತನ ಎಂಬ ಪದಕ್ಕೆ ನಮ್ಮ ಕುಟುಂಬದಲ್ಲಿ ಜಾಗವೇ ಇಲ್ಲ" ಎಂದು ಚಿರಂಜೀವಿ ಸ್ಪಷ್ಟಪಡಿಸಿದ್ದಾರೆ.