ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎನ್‌ಡಿಎಗೆ ಬೆಂಬಲ ಸೂಚಿಸಿದ 20 ಬಂಡಾಯ ಟಿಎಂಸಿ ಸಂಸದರು ಯಾರು?

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ನ ಬಂಡಾಯ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ತಾವು ಎನ್‌ಡಿಎಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಸಾಯೋನಿ ಘೋಷ್, ದೇವ್, ಯೂಸುಫ್ ಪಠಾಣ್ ಸೇರಿದಂತೆ 20 ಸಂಸದರ ಹೆಸರನ್ನು ಉಲ್ಲೇಖಿಸಲಾಗಿದೆ.

ಎನ್‌ಡಿಎಗೆ ಬೆಂಬಲ: ಸ್ಪೀಕರ್ ಗೆ ಪತ್ರ ಬರೆದ ಟಿಎಂಸಿ ಸಂಸದರು

ಸಂಗ್ರಹ ಚಿತ್ರ -

ನವದೆಹಲಿ: ಪಶ್ಚಿಮ ಬಂಗಾಳದ (west bengal) ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಎನ್‌ಡಿಎಗೆ (NDA) ಬೆಂಬಲ ಸೂಚಿಸಿರುವ 20 ತೃಣಮೂಲ (rebels of TMC) ಸಂಸದರ ಹೆಸರು ಬಿಡುಗಡೆಯಾಗಿದೆ. ಇದರಲ್ಲಿ ಸಾಯೋನಿ ಘೋಷ್, ದೇವ್, ಯೂಸುಫ್ ಪಠಾಣ್ ಸೇರಿದಂತೆ 20 ಸಂಸದರ ಹೆಸರು ಸೇರಿದೆ. ಬಂಡಾಯ ಟಿಎಂಸಿ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Lok Sabha speaker Om Birla) ಅವರಿಗೆ ಪತ್ರ ಬರೆದಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ 20 ಸಂಸದರು ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಬೆಂಬಲವನ್ನು ಸೂಚಿಸುವುದಾಗಿ ಪತ್ರ ಬರೆದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸುಮಾರು 15 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸಂಪೂರ್ಣ ಸೋತಿದೆ. ಇದರ ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿದ್ದು, ಇದು ರಾಜೀನಾಮೆಗಳ ಮೂಲಕ ಕೊನೆಗೊಳ್ಳುತ್ತಿದೆ.

ರಾಜ್ಯಸಭಾ ಚುನಾವಣೆ ಪ್ರಕ್ರಿಯೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ: ನಾಳೆ ಮೀನಾಕ್ಷಿ ನಟರಾಜನ್ ಅರ್ಜಿ ಕೈಗೆತ್ತಿಕೊಳ್ಳಲಿರುವ ಸುಪ್ರೀಂ ಕೋರ್ಟ್

ಈಗಾಗಲೇ ಹಲವಾರು ಶಾಸಕರು, ಸಂಸದರು ಪಕ್ಷವನ್ನು ತೊರೆದಿದ್ದಾರೆ. ಇದರಲ್ಲಿ ಇತ್ತೀಚೆಗೆ ರಾಜೀನಾಮೆ ನೀಡಿದ ರಾಜ್ಯಸಭಾ ಸಂಸದ ಪ್ರಕಾಶ್ ಚಿಕ್ ಬರೈಕ್ ಕೂಡ ಸೇರಿದ್ದಾರೆ. ಪಕ್ಷದಲ್ಲಿ ರಾಜೀನಾಮೆ ಹೆಚ್ಚಾಗಿರುವಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲವನ್ನು ವ್ಯಕ್ತಪಡಿಸಿ ಸುಮಾರು 20 ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಆಂತರಿಕ ಬಿಕ್ಕಟ್ಟಿನಿಂದ ಪಶ್ಚಿಮ ಬಂಗಾಳದಲ್ಲಿ ಮಾತ್ರ ತೊಂದರೆ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಿದ್ದ ಮಮತಾ ಬ್ಯಾನರ್ಜಿ ಅವರಿಗೆ ಇದೀಗ ಪಕ್ಷದ ನಾಯಕರು ಬಹುದೊಡ್ಡ ಹೊಡೆತವನ್ನು ನೀಡಿದ್ದಾರೆ. ಕಳೆದ ವಾರ 58 ಬಂಡಾಯ ಟಿಎಂಸಿ ಶಾಸಕರು ವಿಧಾನ ಸಭೆಯಲ್ಲಿ ಋತಬ್ರತ ಬ್ಯಾನರ್ಜಿ ಅವರನ್ನು ತಮ್ಮ ನಾಯಕನಾಗಿ ಗುರುತಿಸಿ ತಾವು ಸದನದ ಪ್ರಮುಖ ವಿರೋಧ ಪಕ್ಷವೆಂದು ಘೋಷಿಸಿದರು. ಇದರ ಬೆನ್ನಲ್ಲೇ ಇದೀಗ ಲೋಕಸಭೆ, ರಾಜ್ಯಸಭೆಯಲ್ಲೂ ಟಿಎಂಸಿ ಸಂಸದರು ಬಂಡಾಯವೆದ್ದು ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷ ವಿಭಜನೆಯಾದ ಮೇಲೆ ಬರಸತ್ ನ ಕಾಕೋಲಿ ಘೋಷ್ ದಸ್ತಿದಾರ್, ಬಹರಂಪುರದ ಯೂಸುಫ್ ಪಠಾಣ್, ಜಾದವ್‌ಪುರದ ಸಯೋನಿ ಘೋಷ್, ಘಟಲ್ ನ ದೇವ್ (ದೀಪಕ್ ಅಧಿಕಾರಿ), ಬಂಕುರಾದ ಅರೂಪ್ ಚಕ್ರವರ್ತಿ, ಮಥುರಾಪುರದ ಬಾಪಿ ಹಲ್ದಾರ್, ಕೂಚ್ ಬೆಹಾರ್ ನ ಜಗದೀಶ್ ಬಸುನಿಯಾ, ಹೌರಾದ ಪ್ರಸೂನ್ ಬ್ಯಾನರ್ಜಿ, ಬರ್ಧಮಾನ್ ಪುರ್ಬಾದ ಶರ್ಮಿಳಾ ಸರ್ಕಾರ್, ಬ್ಯಾರಕ್‌ಪುರದ ಪಾರ್ಥ ಭೌಮಿಕ್, ಬೋಲ್ಪುರ್ ದ ಅಸಿತ್ ಮಾಲ್, ಆರಂಬಾಗ್ ನ ಮಿತಾಲಿ ಬ್ಯಾಗ್, ಬೀರ್ಭೂಮ್ ನ ಸತಾಬ್ದಿ ರಾಯ್, ಕೋಲ್ಕತ್ತಾ ದಕ್ಷಿಣದ ಮಾಲಾ ರಾಯ್, ಮುರ್ಷಿದಾಬಾದ್ ನ ಅಬು ತಾಹೆರ್ ಖಾನ್, ಜಾರ್ಗ್ರಾಮ್ ನ ಕಲಿಪಾದ ಸೊರೆನ್, ಮೇದಿನಿಪುರದ ಜೂನ್ ಮಾಲಿಯಾ, ಜಂಗೀಪುರದ ಖಲೀಲುರ್ ರೆಹಮಾನ್, ಹೂಗ್ಲಿಯ ರಚನಾ ಬ್ಯಾನರ್ಜಿ ಸೇರಿದ್ದಾರೆ.

ಟಿಎಂಸಿಯ ಮೂರನೇ ವಿಕೆಟ್‌ ಪತನ; ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಪ್ರಕಾಶ್ ಬರೈಕ್

ಅಸನ್ಸೋಲ್ ಸಂಸದ ಶತ್ರುಘ್ನ ಸಿನ್ಹಾ ಮತ್ತು ಜಯನಗರ ಸಂಸದೆ ಪ್ರತಿಮಾ ಮೊಂಡಲ್ ಅವರು ಕೂಡ ಬಂಡಾಯ ಬನದಲ್ಲಿ ಸೇರಲು ಆರಂಭದಲ್ಲಿ ಬಯಸಿದ್ದರು ಎನ್ನಲಾಗಿದ್ದರೂ ಅವರಿಬ್ಬರೂ ಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕರಾದ ಸುಖೇಂದು ಶೇಖರ್ ರೇ, ಸುಷ್ಮಿತಾ ದೇವ್, ಪ್ರಕಾಶ್ ಚಿಕ್ ಬರೈಕ್ ಈಗಾಗಲೇ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ.

ಇನ್ನು ತೃಣಮೂಲ ಕಾಂಗ್ರೆಸ್ ನಾಯಕರು ಪಕ್ಷ ತ್ಯಜಿಸುತ್ತಿರುವುದರಿಂದ ಅದು ಕಾಂಗ್ರೆಸ್ ಜೊತೆ ವಿಲೀನವಾಗಲಿದೆ ಎನ್ನುವ ಊಹಾಪೋಹ ಕೂಡ ಎದ್ದಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಪಕ್ಷದ ಕೆಲವರು ಹೇಳಿದ್ದಾರೆ.